ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟೆಗಳ ನಾಡಿನಲ್ಲಿ ಕಾಂಗ್ರೆಸ್ ರಾಜ್ಯಭಾರ

|
Google Oneindia Kannada News

Chitradurga
ಚಿತ್ರದುರ್ಗ, ಮೇ 10 : ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಭದ್ರಕೋಟೆ ಕಟ್ಟಿದೆ. ಕಳೆದ ಬಾರಿ ಇಬ್ಬರು ಪಕ್ಷೇತರರು ಆರಿಸಿ ಬಂದಿದ್ದ ಜಿಲ್ಲೆಯಲ್ಲಿ, ಈ ಬಾರಿ ನಾಲ್ಕು ಸ್ಥಾನಗಳು ಕಾಂಗ್ರೆಸ್ ವಶವಾಗಿದೆ. ಉಳಿದ ಎರಡು ಸ್ಥಾನಗಳನ್ನು ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಹಂಚಿಕೊಂಡಿವೆ.

ಬಳ್ಳಾರಿಯ ಬಿಎಸ್ಆರ್ ಪಕ್ಷದ ಫ್ಯಾನ್ ಗಾಳಿ ಮೊಳಕಾಲ್ಮೂರು ತಾಲೂಕಿನವರೆಗೂ ಬೀಸಿದ್ದು, ಬಿಎಸ್ಆರ್ ಪಕ್ಷದ ಎಸ್.ತಿಪ್ಪೇಸ್ವಾಮಿ ಗೆಲುವು ಸಾಧಿಸಿದ್ದಾರೆ. ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಕೃಷ್ಣಪ್ಪ, ಡಿ.ಸುಧಾಕರ್ ಅವರ ವಿರುದ್ಧ 1205 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಯನ್ನು ಕಟ್ಟಿಹಾಕುವಲ್ಲಿ ಕಾಂಗ್ರಸ್ ಯಶಸ್ವಿಯಾಗಿದ್ದು, ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರಿಗೆ ಕಾಂಗ್ರೆಸ್ ನ ಬಿ.ಜಿ.ಗೋವಿಂದಪ್ಪ ಸೋಲಿನ ರುಚಿ ತೋರಿಸಿದ್ದಾರೆ.

ಹಿರಿಯೂರು ಕ್ಷೇತ್ರದಿಂದ ಕಳೆದ ಬಾರಿ ಪಕ್ಷೇತರರಾಗಿ ಆರಿಸಿಬಂದಿದ್ದ ಡಿ.ಸುಧಾಕರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಂಡು ಟಿಕೆಟ್ ನೀಡಿತ್ತು. ಪಕ್ಷದ ನಿರೀಕ್ಷೆ ಹುಸಿಗೊಳಿಸಿದೇ ಸುಧಾಕರ್ ಮತ್ತೊಮ್ಮೆ ಆರಿಸಿಬಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುವುದರಿಂದ ಜಿಲ್ಲೆಗೆ ಒಂದು ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಎರಡು ಕ್ಷೇತ್ರಗಳಲ್ಲಿ ಕೆಜೆಪಿ ಎರಡನೇ ಸ್ಥಾನ ಪಡೆದಿದ್ದು ಜಿಲ್ಲೆಯಲ್ಲಿ ತನ್ನ ಪ್ರಭಾವವನ್ನು ತೋರಿಸಿದೆ.

ಚಿತ್ರದುರ್ಗ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಮೊಳಕಾಲ್ಮೂರು ಎಸ್.ತಿಪ್ಪೇಸ್ವಾಮಿ
ಬಿಎಸ್ಆರ್ ಕಾಂಗ್ರೆಸ್
76,827 ಎನ್.ವೈ.ಗೋಪಾಲಕೃಷ್ಣ
ಕಾಂಗ್ರೆಸ್
69,658
ಚಳ್ಳಕೆರೆ
ಟಿ.ರಘುಮೂರ್ತಿ
ಕಾಂಗ್ರೆಸ್
60,197 ಕೆ.ಟಿ.ಕುಮಾರಸ್ವಾಮಿ
ಕೆಜೆಪಿ
37,074
ಚಿತ್ರದುರ್ಗ
ಜಿ.ಎಚ್.ತಿಪ್ಪಾರೆಡ್ಡ
ಬಿಜೆಪಿ
62,228 ಬಸವರಾಜನ್
ಜೆಡಿಎಸ್
35,510
ಹಿರಿಯೂರು
ಡಿ.ಸುಧಾಕರ್
ಕಾಂಗ್ರೆಸ್
71,661 ಎ.ಕೃಷ್ಣಪ್ಪ
ಜೆಡಿಎಸ್
70,661
ಹೊಸದುರ್ಗ
ಬಿ.ಜಿ.ಗೋಂವಿದಪ್ಪ
ಕಾಂಗ್ರೆಸ್
58, 010 ಗೂಳಿಹಟ್ಟಿ ಶೇಖರ್
ಪಕ್ಷೇತರ
37,993
ಹೊಳಲ್ಕೆರೆ ಎಚ್.ಆಂಜನೇಯ ಕಾಂಗ್ರೆಸ್ 76,856 ಎಂ.ಚಂದ್ರಪ್ಪ ಕೆಜೆಪಿ 63,992
English summary
Karnataka assembly Election Results. Here is complete information about winners and losers with their constituencies and party of Chitradurga district. In district Congress get 4 seats. Bsr congress and BJP won single seat. independent candidate Goolihatti D Shekhar defeated by Congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X