ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಂದ ಪಾಕ್ ಮಾಜಿ ಪ್ರಧಾನಿ ಪುತ್ರನ ಅಪಹರಣ

By Srinath
|
Google Oneindia Kannada News

pak-ex-pm-gilani-son-kidnapped-from-election-rally
ಇಸ್ಲಾಮಾಬಾದ್, ಮೇ 9: ನಾಳಿದ್ದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಾಕಿಸ್ತಾನದಲ್ಲಿ ಹಿಂಸಾಚಾರ ತೀವ್ರವಾಗುತ್ತಿದೆ. ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರ ಅಲಿ ಹೈದರ್ ಗಿಲಾನಿನನ್ನು ಇಂದು ಅಪಹರಿಸಲಾದೆ. ಅದಕ್ಕೂ ಮುನ್ನ ಹೈದರನ ಆಪ್ತ ಸಹಾಯಕ ಮತ್ತು ಅಂಗರಕ್ಷಕನನ್ನು ಗುಂಡಿಟ್ಟು ಸಾಯಿಸಲಾಗಿದೆ.

ಮುಲ್ತಾನ್ ನಗರದಲ್ಲಿ ಇಂದು ಮಧ್ಯಾಹ್ನ ಹೈದರ್ ಗಿಲಾನಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಕಾರಿನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಹೈದರ್ ಬೆಂಬಲಿಗರತ್ತ ಯದ್ವಾತದ್ವಾ ಗುಂಡುಹಾರಿಸಿದ್ದಾರೆ.

ಅದೇ ವೇಳೆ, ಹೈದರ್ ಗಿಲಾನಿಯ ಆಪ್ತರ ಮೇಲೆ ಗುಂಡಿನ ಮಳೆಗರೆದು ಅವರನ್ನು ಹತ್ಯೆ ಮಾಡಿದ್ದಾರೆ. ನಂತರ ಹೈದರನನ್ನು ಆಗುಂತಕರು ಅಪಹರಿಸಿದ್ದಾರೆ. ಘಟನೆಯ ವೇಳೆ ಯೂಸುಫ್ ರಾಜಾ ಗಿಲಾನಿ ಅವರ ಮತ್ತೊಬ್ಬ ಪುತ್ರ ಸಹ ಸಭೆಯಲ್ಲಿ ಪಾಲ್ಗೊಂಡಿದ್ದ.

ಗುಂಡಿನ ದಾಳಿಯಲ್ಲಿ ಇನ್ನೂ ಐದು ಮಂದಿ ಗಾಯಗೊಂಡಿದ್ದಾರೆ. ಹೈದರ್ ಗಿಲಾನಿಯ ಅಪಹರಣಕ್ಕೆ ಯಾವುದೇ ಸಂಘಟನೆ ಹೊಣೆ ಹೊತ್ತಿಲ್ಲವಾದರೂ ನಿಷೇಧಿತ Tehrik-e-Taliban Pakistan ಇತ್ತೀಚೆಗೆ ಈ ಸಂಬಂಧ ಎಚ್ಚರಿಕೆ ರವಾನಿಸಿತ್ತು.

ಗಿಲಾನಿಯ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತ್ತು ಆವಾಮಿ ನ್ಯಾಷನಲ್ ಪಾರ್ಟಿಯಂತಹ ಜಾತ್ಯತೀತ ಪಕ್ಷಗಳನ್ನು ಗುರಿಯಾಗಿಸಿಕೊಂಡು ಚುನಾವಣೆಗೂ ಮುನ್ನ ದಾಳಿ ನಡೆಸುವುದಾಗಿ ಘೋಷಿಸಿತ್ತು.

English summary
Pak ex PM Gilani's son kidnapped from Election rally. Former prime minister Yousuf Raza Gilani's son Ali Haider Gilani was today kidnapped in Pakistan's Punjab province by unidentified gunmen who shot dead his personal secretary and a bodyguard. Haider was participating in a campaign meeting at Multan city this afternoon when the gunmen opened fire at his supporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X