ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6.30ಕ್ಕೆ ಶೆಟ್ರ ಬಿಜೆಪಿ ಸರಕಾರದ ಶೆಟ್ಟರ್ ಕ್ಲೋಸ್

By Srinath
|
Google Oneindia Kannada News

bjp-govt-shutters-down-at-may-8-evening
ಬೆಂಗಳೂರು, ಮೇ 8: ಬಿಜೆಪಿ ಸರಕಾರದ ಅಧಿಪತಿ ಸನ್ಮಾನ್ಯ ಜಗದೀಶ್ ಶೆಟ್ಟರ್ ಅವರ ಮಂತ್ರಿ ಮಂಡಲ ಇನ್ನೇನು ಕೆಲವೇ ಕ್ಷಣಗಳಲ್ಲಿ ಕೊನೆಗೊಳ್ಳಲಿದೆ. ವಾಸ್ತವವಾಗಿ ಅತ್ತ ಕಾಂಗ್ರೆಸ್ ಪರ ಜನಾದೇಶ ಹೊರಬೀಳುತ್ತಿದ್ದಂತೆ ಬಿಜೆಪಿ ಅಧಿಕಾರ ಮೊಟಕುಗೊಂಡಿತು.

ಬಿಜೆಪಿ ಸರಕಾರದವಧಿ ಇನ್ನೂ 6 ಗಂಟೆ ವಿಸ್ತರಣೆ:
ಅದನ್ನು ಅರ್ಥ ಮಾಡಿಕೊಂಡು ಶೆಟ್ಟರ್ ಸಾಹೇಬರು ತಕ್ಷಣ ರಾಜ್ಯಪಾಲ ಭಾರದ್ವಾಜ್ ಅವರ ಕೈಕುಲುಕಿ, ಗುಡ್ ಬೈ ಹೇಳಲು ಮಧ್ಯಾಹ್ನ 1.30ಕ್ಕೆ ರಾಜಭವನಕ್ಕೆ ತೆರಳಿದ್ದರು. ಆದರೆ ರಾಜ್ಯಪಾಲ ಭಾರದ್ವಾಜ್ ಅವರಿಗೆ ಬಿಜೆಪಿ ಸರಕಾರದ ಮೇಲೆ 'ಅದೇನು ಪ್ರೀತಿಯೋ' - ಪರವಾಗಿಲ್ಲ ಈಗ್ಲೇ ಬೇಡ. ಸಂಜೆ 6.30ಕ್ಕೆ ಬಂದು ರಾಜೀನಾಮೆ ಕೊಟ್ಟು ಹೋಗಿ ಎಂದಿದ್ದಾರೆ. ಹಾಗಾಗಿ ಇಂದು ಸಂಜೆ 6.30ರವರೆಗೂ ಬಿಜೆಪಿ ಸರಕಾರಕ್ಕೆ ಜೀವದಾನ ಲಭಿಸಿದೆ.

ಶೆಟ್ಟರ್ ವಂದನಾರ್ಪಣೆ: ರಾಜಭವನದಿಂದ ಹೊರಬಂದ ಮುಖ್ಯಮಂತ್ರಿ ಶೆಟ್ಟರ್ ವಂದನಾರ್ಪಣೆ ಸಲ್ಲಿಸಿದರು. ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮನ್ನು ಆಳಲು ಅವಕಾಶ ನೀಡಿದ ರಾಜ್ಯದ ಜನತೆ ಮತ್ತು ಮಾಧ್ಯಮಗಳಿಗೆ ವಂದನಾರ್ಪಣೆ ಸಲ್ಲಿಸಿದರು.

ಹಿಂದಿನ ಸುದ್ದಿ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳಿದ್ದಾರೆ. ಚುನಾವಣಾ ಫಲಿತಾಂಶ ಸಂಪೂರ್ಣ ಪ್ರಕಟವಾಗುವ ಮುನ್ನವೇ ಶೆಟ್ಟರ್ ರಾಜೀನಾಮೆ ನೀಡಲು ತೆರಳಿದ್ದಾರೆ.

ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ರಾಜ್ಯಪಾಲ ಹೆಚ್.ಆರ್. ಭಾರದ್ವಾಜ್ ಅವರನ್ನು ಭೇಟಿಯಾಗಿ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವತ್ತ ಸಾಗುತ್ತಿದ್ದು, ಸರ್ಕಾರ ರಚಿಸುವುದು ಖಚಿತವಾಗಿದೆ.

ತಮ್ಮ ಸ್ವ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಆದ್ದರಿಂದ ಮುಂದಿನ ಸರ್ಕಾರ ರಚನೆಯ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಲು ಶೆಟ್ಟರ್ ರಾಜೀನಾಮೆ ನೀಡಲಿದ್ದಾರೆ.

English summary
Karnataka Assembly Election 2013 Results, Karnataka Congress wins simple majority- BJP govt shutters down at May 8 evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X