ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ : ಇಪ್ಪತ್ತು ಖೈದಿಗಳಿಗೆ ಮನೋರೋಗ

|
Google Oneindia Kannada News

Pakistan
ಲಾಹೋರ್, ಮೇ 6 : ಪಾಕಿಸ್ತಾನದ ಜೈಲಿನಲ್ಲಿ ಹಲ್ಲೆಗೊಳಗಾಗಿ ಮೃತಪಟ್ಟ ಭಾರತೀಯ ಸರಬ್ಜಿತ್ ಸಿಂಗ್‌ ಇದ್ದ ಕೋಟ್ ಲಖ್‌ಪತ್ ಜೈಲಿನಲ್ಲಿರುವ ಇಪ್ಪತ್ತು ಮಂದಿ ಭಾರತೀಯ ಖೈದಿಗಳು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿಲ್ಲ ಎಂದು ಕಟುಸತ್ಯವನ್ನು ಇಂಡೋ - ಪಾಕಿಸ್ತಾನ ನ್ಯಾಯಾಂಗ ಸಮಿತಿಯ ವರದಿ ಬಹಿರಂಗೊಳಿಸಿದೆ.

ನ್ಯಾಯಾಂಗ ಸಮಿತಿ ಕಳೆದ ವಾರದಿಂದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯ ಜೈಲುಗಳಿಗೆ ಭೇಟಿ ನೀಡಿ ಭಾರತೀಯ ಖೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಿದ್ಧ ಪಡಿಸಿದೆ. ವರದಿಯ ಪ್ರಕಾ ಕೋಟ್ ಲಖ್‌ಪತ್ ಜೈಲಿನಲ್ಲಿ 36 ಮಂದಿ ಭಾರತೀಯರಿದ್ದಾರೆ. ಆದರೆ, ಅವರಲ್ಲಿ 20 ಮಂದಿ ಮಾನಸಿಕ ಸಮಸ್ಯೆಗಳಿಂದ ಬಳುತ್ತಿದ್ದಾರೆ.

ರಾವಲ್ಪಿಂಡಿಯಲ್ಲಿ ಇಬ್ಬರು, ಕರಾಚಿಯಲ್ಲಿ ಒಬ್ಬ ಕೈದಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಇವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಜೈಲಿನಲ್ಲಿರುವವರು ಯಾವ ದೇಶದವರು ಎಂದು ನೋಡದೆ ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ. ಪಾಕಿಸ್ತಾನದ ಪ್ರಮುಖ ಆಸ್ಪತ್ರಗಳಿಗೆ ಇವರನ್ನು ದಾಖಲಿಸಿ ಚಿಕಿತ್ಸೆ ನೀಡಬೇಕು, ಅಗತ್ಯವಿದ್ದರೆ ವಿದೇಶಗಳಿಗೆ ಕಳುಹಿಸಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳ ಅಮಾನತು : ಸರಬ್ಜಿತ್ ಸಿಂಗ್ ಮೇಲೆ ಸಹ ಕೈದಿಗಳು ಪ್ರಾಣಾಂತಿಕ ಹಲ್ಲೆ ನಡೆಸುವುದನ್ನು ತಡೆಯಲು ವಿಫಲರಾದ ಕೋಟ್ ಲಕಪತ್ ಜೈಲಿನ ಮೂವರು ಹಿರಿಯ ಅಧಿಕಾರಿಗಳನ್ನು ಪಾಕ್ ಸರ್ಕಾರ ಅಮಾನತುಗೊಳಿಸಿದೆ.

ಜೈಲು ಅಧೀಕ್ಷಕ ಮೊಯ್ಸಿನ್ ರಫೀಕ್, ಹೆಚ್ಚುವರಿ ಅಧೀಕ್ಷಕ ಇಷ್ತಾಕ್ ಗಿಲ್ ಹಾಗೂ ಸಹಾಯಕ ಅಧೀಕ್ಷಕ ಗುಲಾಂ ಅವರನ್ನು ಅಮಾನತುಗೊಳಿಸಲು ಗೃಹ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಸುಧಾರಿಸದ ಪಾಕ್ ಖೈದಿ ಆರೋಗ್ಯ : ಜಮ್ಮುವಿನ ಜೈಲಿನಲ್ಲಿ ಹಲ್ಲೆಗೊದ ಪಾಕ್ ಕೈದಿ ಸನಾವುಲ್ಲಾ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ. ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

English summary
An India - Pakistan judicial panel report said, Twenty out of 36 Indian prisoners lodged in Lahore’s infamous Kot Lakhpat jail, have lost their mental balance and not been taken to any hospital for proper medical care. Committee visited Pakistan jails in Karachi, Rawalpindi and Lahore last week and prepared report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X