ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ : ಬದನೇಕಾಯಿಯಲ್ಲಿ ಗಣಪ ಪ್ರತ್ಯಕ್ಷ!

|
Google Oneindia Kannada News

Ganesh
ಲಂಡನ್, ಮೇ 6 : ಭಾರತದ ಪವರ್ ಫುಲ್ ದೇವರಾದ ಗಣೇಶ ಲಂಡನ್ ನಲ್ಲಿ ಪತ್ಯಕ್ಷನಾಗಿ ಅಚ್ಚರಿ ಉಂಟು ಮಾಡಿದ್ದಾನೆ. ಹೋಟೆಲ್ ಗೆ ತಂದ ಬದನೇಕಾಯಿಯಲ್ಲ ಪ್ರತ್ಯಕ್ಷನಾದ ಗಣಪನನ್ನು ಕಂಡು, ಹೋಟೆಲ್ ಮಾಲೀಕ ಭಕ್ತಿ ಪರವಶನಾಗಿದ್ದು, ನಿತ್ಯ ಎರಡು ಬಾರಿ ಪೂಜೆ ಮಾಡುತ್ತಿದ್ದಾರೆ.

ಭಾರತದಲ್ಲಿ ದೇವರ ರೂಪದ ಮರ, ತರಕಾರಿ ಮುಂತಾದ ವಸ್ತುಗಳು ಪತ್ತೆಯಾಗಿ ಜನರಲ್ಲಿ ಅಚ್ಚರಿ ಮೂಡಿಸುವುದು ಹೊಸತೇನಲ್ಲ. ಆದರೆ, ವಿಘ್ನ ವಿನಾಶಕ ಲಂಡನ್ ನಲ್ಲೂ ತರಕಾರಿಯಲ್ಲಿ ಪ್ರತ್ಯಕ್ಷಗೊಂಡು ತನ್ನ ಪ್ರಭಾವ ಬೀರಿದ್ದಾನೆ.

ಭಾರತೀಯ ಮೂಲದ ಹೋಟೆಲ್ ಉದ್ಯಮಿ ಪ್ರಫುಲ್ ವಿಸ್ರಾಮ್ ನಡೆಸುತ್ತಿದ್ದ ಹೋಟೆಲ್ ನಲ್ಲಿ ಗಣೇಶನ ದರ್ಶನವಾಗಿದೆ. ಹೋಟೆಲ್ ಗೆ ಭೇಟಿ ನೀಡುವ ಜನರಿಗೆ ಇದರು ಅಚ್ಚರಿಗೆ ಕಾರಣವಾಗಿದ್ದರೆ, ಭಾರತೀಯರು ಹೋಟೆಲ್ ಗೆ ಅಗಮಿಸಿದರೆ, ಭಕ್ತಿಯಿಂದ ನಮಸ್ಕರಿಸುತ್ತಿದ್ದಾರೆ.

ಗಣೇಶ ಕಂಡಿದ್ದು ಹೇಗೆ : ಪ್ರಫುಲ್ ವಿಸ್ರಾಮ್ ಪ್ರತಿ ದಿನವೂ ಹೋಟೆಲ್ ಗೆ ಬದನೇಕಾಯಿ ತರಿಸುತ್ತಾರೆ. ಅಂತೆಯೇ ಭಾನುವಾರ ಹೋಟೆಲ್ ಗೆ 20 ಪೆಟ್ಟಿಗೆ ಬದನೇಕಾಯಿ ಬಂದಿಳಿದಿದೆ.

ಅಡುಗೆಯವರು ಬದನೇಕಾಯಿ ಸಂಸ್ಕರಿಸುವಾಗ ವಿಚಿತ್ರ ಆಕಾರದ ಬದನೇಕಾಯಿ ಇರುವುದನ್ನು ಗಮನಿಸಿದ್ದಾನೆ. ಕಣ್ಣು, ಕಿವಿ, ಸೊಂಡಿಲು ಇರುವಂತೆ ಇದ್ದ ಬನೇಕಾಯಿಯನ್ನು ಪೆಟ್ಟಿಗೆಯಿಂದ ತೆಗೆದು ನೋಡಿದಾಗ ಗಣೇಶನ ಮೂರ್ತಿಯಂತೆ ಕಂಡುಬಂದಿದೆ.

ತಕ್ಷಣ ಹೋಟೆಲ್ ಮಾಲೀಕರಿಗೆ ವಿಷಯ ತಿಳಿಸಿದ್ದಾನೆ. ಪ್ರಫುಲ್ ಪತ್ನಿ ರೇಖಾ ಇದು ಗಣೇಶನ ಮೂರ್ತಿಯೇ, ಇದನ್ನು ತಂಡುಮಾಡಿ ಅಡುಗೆ ಮಾಡುವುದು ಬೇಡ ಎಂದು ದೇವರ ಕೋಣೆಗೆ ತಂದು ಪೂಜೆ ಮಾಡಲು ಪ್ರಾರಂಭಿಸಿದ್ದಾರೆ.

ದೇವರು ಮನೆಬಾಗಿಲಿಗೆ ಬಂದ ಸಂತೋಷದಲ್ಲಿ ಪ್ರಫುಲ್ ದಂಪತಿಗಳು ಬದನೇಕಾಯಿ ಗಣಪನಿಗೆ ನಿತ್ಯ ಎರಡು ಬಾರಿ ಪೂಜೆ ಮಾಡುತ್ತಿದ್ದಾರೆ. ಹೋಟೆಲ್ ಗೆ ಆಗಮಿಸುವ ಗ್ರಾಹಕರಿಗೆ ಬದನೇಕಾಯಿ ಗಣಪ ಕುತೂಹಲ ಮೂಡಿಸಿದ್ದಾನೆ.

ಲಂಡನ್ ನಿವಾಸಿಗಳಾಗ ಕೆಲವು ಭಾರತೀಯರು ಹೋಟೆಲ್ ಗೆ ಆಗಮಿಸಿ, ಬದನೇಕಾಯಿ ಗಣಪನಿಗೆ ಶಿರ ಸಾಷ್ಟಾಂಗ ವಂದಿಸಿ ಮರಳುತ್ತಿದ್ದಾರೆ. ಒಟ್ಟಿನಲ್ಲಿ ಭಾತರದ ಪಾಲಿನ ವಿಘ್ನೇಶ್ವರ ಲಂಡನ್ ನಲ್ಲಿಯೂ ಮೋಡಿ ಮಾಡಿದ್ದಾನೆ.

English summary
Dozens of devotees are flocking a makeshift temple set up by an Indian caterer in Leicester after he found a brinjal that looks like the Hindu God Ganesh. Praful Visram discovered the brinjal in a box of vegetables. now proudly displays in the backroom at his workplace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X