ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗುವಿಗೆ ಜಾನ್ಸನ್ ಉತ್ಪನ್ನಗಳನ್ನು ಬಳಸೀರಿ ಜೋಕೆ!

By Prasad
|
Google Oneindia Kannada News

Think twice before using Johnson baby products
ಮುಂಬೈ, ಮೇ. 6 : ನಿಮ್ಮ ಮನೇಲಿ ಪುಟ್ಟ ಮಗು ಜನಿಸಿದೆಯಾ? ಅದಕ್ಕೆ ಸ್ನಾನ ಮಾಡಿಸುವಾಗ ಹಚ್ಚುವ ಸೋಪು, ಶಾಂಪೂ, ಸ್ನಾನವಾದ ನಂತರ ಮೈತುಂಬ ಹಚ್ಚುವ ಪೌಡರ್ ಯಾವ ಕಂಪನಿಯದು? ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಉತ್ಪನ್ನಗಳು? ಹೌದಾ?

ಈ ಪ್ರಶ್ನೆಗಳಿಗೆ ಉತ್ತರ 'ಇಲ್ಲ' ಅಂತ ಹೇಳುವವರು ತುಂಬ ಕಡಿಮೆ. ಜಾನ್ಸನ್ ಬೇಬಿ ಸೋಪು, ಜಾನ್ಸನ್ ಬೇಬಿ ಶಾಂಪೂ, ಜಾನ್ಸನ್ ಬೇಬಿ ಪೌಡರ್... ಕಡೆಗೆ ಮೆದುವಾದ ಪುಟಾಣಿ ಬಾಚಣಿಕೆ ಕೂಡ ಜಾನ್ಸನ್ ಕಂಪನಿಯದಾಗಿರುತ್ತದೆ. ಮಗು ಬೆಳೆಬೆಳೆಯುತ್ತ ಅಪ್ಪ ಅಮ್ಮ ಅನ್ನುವ ಬದಲು ಜಾನ್ಸನ್ ಜಾನ್ಸನ್ ಅನ್ನುತ್ತ ಬೆಳೆಯುತ್ತದೆ. ಜಾನ್ಸನ್ ಬೇಬಿ ಪ್ರಾಡಕ್ಟನ್ನೇ ಗಿಫ್ಟಾಗಿ ಕೊಡುವುದು ಕೂಡ ಫ್ಯಾಷನ್ ಆಗಿದೆ.

ಆದರೆ, ಮಗುವಿನ ಪಾಲಕರೆ, ಗಿಫ್ಟ್ ಕೊಡುವ ಸಂಬಂಧಿಕರೆ ಸ್ವಲ್ಪ ತಡೆದುಕೊಳ್ಳಿ. ಜಾನ್ಸನ್ ಬೇಬಿ ಪ್ರಾಡಕ್ಟುಗಳಿಗೇ ಈಗ ಸಂಚಕಾರ ಬಂದಿದೆ. ಜಾನ್ಸನ್ ಬೇಬಿ ಪೌಡರ್ ಮಗುವಿನ ಚರ್ಮದ ಸ್ವಾಸ್ಥ್ಯಕ್ಕೆ ಯೋಗ್ಯವಲ್ಲ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಬಹುರಾಷ್ಟ್ರೀಯ ಮತ್ತು ಜನಪ್ರಿಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲೈಸೆನ್ಸ್ ಅನ್ನೇ ರದ್ದು ಮಾಡಿದೆ. ಈ ಆದೇಶದ ಪ್ರಕಾರ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಮುಳುಂದ್ ಪ್ಲಾಂಟ್‌ನಲ್ಲಿ ಯಾವುದೇ ಉತ್ಪನ್ನಗಳನ್ನು ಉತ್ಪಾದಿಸುವಂತಿಲ್ಲ.

2007ರಲ್ಲಿ ಕಂಪನಿಯ ಮೇಲೆ ಹೂಡಲಾದ ಪ್ರಕರಣವೊಂದರಲ್ಲಿ, ಜಾನ್ಸನ್ ಬೇಬಿ ಪೌಡರ್‌ನಲ್ಲಿ ಕಾರ್ಸಿನೋಜೆನಿಕ್ ಎಂಬ ವಸ್ತುವಿನ ಅಂಶ ಕಂಡುಬಂದಿದೆ. ಪೌಡರ್ ಎಥಿಲಿನ್ ಆಕ್ಸೈಡ್‌ನಿಂದ ಸ್ಟೆರಿಲೈಸ್ ಆಗಿದ್ದರಿಂದ ಕಾರ್ಸಿನೋಜೆನಿಕ್ ವಸ್ತು ಪೌಡರ್‌ನಲ್ಲಿ ಉಳಿದುಕೊಂಡಿದೆ. ಈ ವಸ್ತು ಮಗುವಿನ ಮೃದುವಾದ ಚರ್ಮಕ್ಕೆ ಹಾನಿಕರ, ಇದರಿಂದ ತುರಿಕೆಗಳಾಗುತ್ತವೆ ಎಂದು ಅಧ್ಯಯನದಿಂದ ಕಂಡುಬಂದಿದೆ.

ಪೌಡರ್‌ನಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಅಧಿಕವಾಗಿದ್ದು, ಇದು ಕ್ಯಾನ್ಸರ್ ಬರಲು ಕೂಡ ಕಾರಣವಾಗಬಹುದು. ಈ ಕಾರಣದಿಂದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿದೆ. ಈ ಆದೇಶ ಜೂನ್ 24ರಿಂದ ಜಾರಿಗೆ ಬರಲಿದೆ. ಈಗ ಹೇಳಿ, ನಿಮ್ಮ ಮಗುವಿಗೆ ಇನ್ಮುಂದೆ ಯಾವ ಉತ್ಪನ್ನಗಳನ್ನು ಬಳಸುತ್ತೀರಿ!

English summary
The Maharashtra Food and Drug Administration (FDA), the apex body for food and drug products, has suspended the license of Johnson & Johnson, the multinational healthcare and consumer products major, to manufacture cosmetic products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X