ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್ಇ, ಐಸಿಎಸ್ಇ ರಿಸಲ್ಟ್ ಮೇ 15 ನಂತರ

By Srinath
|
Google Oneindia Kannada News

exam-results-cbse-icse-2013-results-may-end
ಬೆಂಗಳೂರು, ಮೇ 6: ಇತ್ತ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಇಂದು ಬಹಿರಂಗವಾಗುತ್ತಿರುವ ಸಂದರ್ಭದಲ್ಲಿ ಅತ್ತ ಸಿಬಿಎಸ್ಇ, ಐಸಿಎಸ್ಇ ಬೋರ್ಡ್ ಪರೀಕ್ಷೆಗಳ ಫಲಿತಾಂಶವು ಮೇ 15ರ ನಂತರ ಪ್ರಕಟವಾಗಲಿದೆ ಎಂದು ತಿಳಿದುಬಂದಿದೆ.

ಇಡೀ ದೇಶಾದ್ಯಂತ CBSE ಮತ್ತು ICSE ನಡೆಸುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಇದೇ ತಿಂಗಳ ಮೇ 15ರಿಂದ 20ರ ನಡುವೆ ಯಾವುದೇ ದಿನ ಪ್ರಕಟವಾಗುವ ಸಾಧ್ಯತೆಗಳು ದಟ್ಟವಾಗಿವೆ. ಈ ಫಲಿತಾಂಶಗಳು ವಿಳಂಬವಾಗುವುದಕ್ಕೆ ಯಾವುದೇ ಸಕಾರಣವಿಲ್ಲ.

ಹಾಗಾಗಿ ಪ್ರತಿ ವರ್ಷದಂತೆ ಸಕಾಲದಲ್ಲಿ ಫಲಿತಾಂಶಗಳು ಹೊರಬೀಳಲಿವೆ ಎಂದು ತಿಳಿದುಬಂದಿದೆ.

2013ನೇ ಶೈಕ್ಷಣಿಕ ಸಾಲಿನಲ್ಲಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆದಿದ್ದರೆ 13.6 ಮಂದಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. CBSE ಮತ್ತು ICSE ಪರೀಕ್ಷಾ ಫಲಿತಾಂಶಗಳಿಗಾಗಿ ಪರೀಕ್ಷಾರ್ಥಿಗಳ ಜತೆಜತೆಗೆ ಆಯಾ ಶಾಲೆಗಳೂ ಕೌತುಕ/ಆತಂಕದಿಂದ ಕಾಯುತ್ತವೆ.

ತಮ್ಮ ಶಾಲೆಯ ವಿದ್ಯಾರ್ಥಿಗಳು ಯಾವ ದರ್ಜೆಯಲ್ಲಿ ಪಾಸಾಗಿ ಶಾಲೆಗಳಿಗೆ ಗೌರವದ ಸ್ಥಾನ ದಕ್ಕಿಸಿಕೊಟ್ಟಿದ್ದಾರೆ ಎಂಬುದನ್ನು ತಿಳಿಯಲು ಶಾಲಾ ಆಡಳಿತ ಮಂಡಳಿಗಳು ನಿರೀಕ್ಷೆಯ ಮೂಟೆಗಳನ್ನು ಹೊತ್ತಿರುತ್ತವೆ.

English summary
Exam Results : This year also, while ICSE results are expected between 15-20 May, CBSE and Bihar School Board (BSEB) are expected to declare their results in the last week of May. Over 9 lakh students appeared for the intermediate examination while 13.6 lakh students took matriculation examination this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X