ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ : 11 ಗಂಟೆಗೆ ಬೆಳಗಾವಿ ಡಲ್, ಕೊಡಗು ಸೂಪರ್

By Mahesh
|
Google Oneindia Kannada News

Karnataka Assembly Election 2013 Voting Percentage 11 AM
ಬೆಂಗಳೂರು, ಮೇ.5: ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾನುವಾರ ಮತದಾನ ಭರ್ಜರಿಯಾಗಿ ನಡೆಯುತ್ತಿದೆ. ರಜಾದಿನವಾದ್ದರಿಂದ ಆರಂಭದಲ್ಲಿ ಡಲ್ ಹೊಡೆಯುತ್ತಿದ್ದ ಮತದಾನ ಮಧ್ಯಾಹ್ನ 11 ಗಂಟೆ ವೇಳೆಗೆ ಚುರುಕಾಗಿದೆ.

ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ತನಕ ನಡೆಯಲಿದೆ. ಬೆಳಗ್ಗೆ 6.30 ಗಂಟೆಯಿಂದಲೇ ಜನರು ಮತದಾನಕ್ಕಾಗಿ ಕ್ಯೂ ನಿಂತಿದ್ದು ಹಲವೆಡೆ ಕಂಡು ಬಂದಿತ್ತು. ಈ ಬಾರಿ ಶೇಕಡಾವಾರು ಮತದಾನ ಹೆಚ್ಚಳ ಕಾಣುವ ನಿರೀಕ್ಷೆಯನ್ನು ರಾಜ್ಯ ಚುನಾವಣಾ ಆಯೋಗ ಹೊಂದಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 11 ಗಂಟೆ ಸುಮಾರಿಗೆ ಬೆಳಗಾವಿಯಲ್ಲಿ ಶೇ 6 ಅತ್ಯಂತ ಕಡಿಮೆ ಮತದಾನವಾಗಿದೆ. ಕೊಡಗು ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ 26 ರಷ್ಟು ಜನ ಮತ ಚಲಾಯಿಸಿದ್ದಾರೆ, ಜಿಲ್ಲಾವಾರು ಮತದಾನ ಪ್ರಮಾಣ ಹೀಗಿದೆ:

* ಬೆಂಗಳೂರು ನಗರ ಶೇ 13.6
* ಬೆಂಗಳೂರು ಗ್ರಾಮಾಂತರ ಶೇ 25.3
* ರಾಮನಗರ ಶೇ 16.7
* ಗದಗ ಶೇ 25
* ಬೆಳಗಾವಿ ಶೇ.6
* ಕೊಡಗು ಶೇ.26
* ಬೀದರ್ ಶೇ.10
* ಬಳ್ಳಾರಿ ಶೇ.17
* ರಾಯಚೂರು ಶೇ.15
* ಯಾದಗಿರಿ ಶೇ.9
* ಧಾರವಾಡ ಶೇ.11
* ಹಾಸನ ಶೇ.15
* ಮೈಸೂರು ಶೇ.15
* ಮಂಗಳೂರು ಶೇ.12
* ಚಿಕ್ಕಬಳ್ಳಾಪುರ ಶೇ.11
* ಗುಲ್ಬರ್ಗಾ ಶೇ.5
* ಬಿಜಾಪುರ ಶೇ.12
* ಚಿಕ್ಕಮಗಳೂರು ಶೇ.15
* ಹಾವೇರಿ ಶೇ.14
* ಉಡುಪಿ ಶೇ.26
* ಉತ್ತರ ಕನ್ನಡ ಶೇ 21
* ಮಂಡ್ಯ ಶೇ.23
* ಕೊಪ್ಪಳ ಶೇ.22.4

ಒಟ್ಟಾರೆ ರಾಜ್ಯಾದ್ಯಂತ ಶೇ 20.5-25

ರಾಜ್ಯದ 52034 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಕೋಲಾರದಲ್ಲಿ ಲಾಂಗು ಮಚ್ಚುಗಳ ದರ್ಶನ, ಕೆಲವೆಡೆ ಮತದಾನ ಬಷಿಷ್ಕಾರ, ಬಿಎಸ್ ಎಫ್ ಯೋಧನಿಂದ ಮತದಾರನಿಗೆ ಹಿಗ್ಗಾ ಮುಗ್ಗಾ ಥಳಿತ ಪ್ರಕರಣ ಬಿಟ್ಟರೆ ರಾಜ್ಯದೆಲ್ಲೆಡೆ ಬಹುತೇಕ ಶಾಂತಿಯುತವಾಗಿದೆ. ವಿಶೇಷವಾಗಿ ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

English summary
Karnataka Assembly Election 2013 : Polling, which began on a dull note, has picked up momentum with 22 to 25 per cent voting reported till 11 AM in the 224 assembly constituency segments that went to poll in Karantaka today(May.5)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X