ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಚೀಟಿ ಮತಗಟ್ಟೆ ಬಳಿಯೂ ದೊರೆಯುತ್ತದೆ

|
Google Oneindia Kannada News

voters slips
ಬೆಂಗಳೂರು, ಮೇ 4 : ಮತದಾರರ ಮನೆ ಬಾಗಿಲಿಗೆ ಮತಚೀಟಿ ತಲುಪಿಸುವ ಚುನಾವಣೆ ಆಯೋಗದ ಚೊಚ್ಚಲ ಪ್ರಯತ್ನ ಸಮಯದ ಅಭಾವದ ಕಾರಣ ಸಾಧ್ಯವಾಗಿಲ್ಲ. ಬಹುತೇಕ ಕಡೆ ಮತಚೀಟಿ ತಲುಪಿದ್ದರೂ, ಕೆಲವು ಜಿಲ್ಲೆಗಳಲ್ಲಿ ಇದು ಸಾಧ್ಯವಾಗಿಲ್ಲ. ಮತಚೀಟಿ ತಲುಪದವರು ಮತಗಟ್ಟೆಗಳಲ್ಲೇ ಪಡೆದುಕೊಳ್ಳಬಹುದು ಎಂದು ಆಯೋಗ ಘೋಷಿಸಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮತದಾರರ ಮನೆ ಬಾಗಿಲಿಗೆ ಮತಚೀಟಿ (ವೋಟರ್ ಸ್ಲಿಪ್) ತಲುಪಿಸಲು ಆಯೋಗ ಕ್ರಮ ಕೈಗೊಂಡಿತ್ತು. ಆದರೆ, ಸಮಯದ ಅಭಾವದ ಕಾರಣ ಮತಚೀಟಿ ಮತದಾರರ ಮನೆ ಬಾಗಿಲಿಗೆ ಕೆಲವು ಜಿಲ್ಲೆಗಳಲ್ಲಿ ತಲುಪಿಲ್ಲ.

ವೋಟರ್ ಸ್ಲಿಪ್ ಸಿಗದ ಮತದಾರರಿಗೆ ಮತಗಟ್ಟೆಯಲ್ಲೇ ಅದನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ತಮ್ಮ ಗುರುತಿನ ಚೀಟಿ ತೋರಿಸಿ ಅವರು ಸ್ಲಿಪ್ ಪಡೆಯಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಮತ ಚೀಟಿ ತಲುಪದಿದ್ದರೆ ಏನು ಮಾಡಬಹುದು : ಮತದಾನದ ದಿನ ಮತಗಟ್ಟೆ ಕೇಂದ್ರದ ಬಳಿ ಮತಚೀಟಿ ಪಡೆಯಬಹುದು. ಚುನಾವಣಾ ಆಯೋಗದ ceokarnataka.kar.nic.in ವೆಬ್‌ಸೈಟ್‌ನಲ್ಲಿ ಮತಗಟ್ಟೆ ಕೇಂದ್ರದ ವಿವರ ಪಡೆಯಬಹುದು.

ಮತದಾರರಿಗೆ ಮತಗಟ್ಟೆಯ ಬಗ್ಗೆ ಆಗುವ ಗೊಂದಲ ತಪ್ಪಿಸಲು ಎಸ್ಎಸ್ಎಂ ಮೂಲಕ ಮತಗಟ್ಟೆಯ ವಿಳಾಸ ತಿಳಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. kaepic ಎಂದು ಟೈಪ್ ಮಾಡಿ, ಸ್ಪೇಸ್ ಬಿಟ್ಟು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಟೈಪ್ ಮಾಡಿ 9243355223 ನಂಬರ್ ಗೆ ಎಸ್ಎಸ್ಎಂ ಮಾಡಿ.

ನೀವು ಮತದಾನ ಮಾಡಬೇಕಾದ ಮತಗಟ್ಟೆಯ ಸಂಪೂರ್ಣ ವಿವರ ನಿಮ್ಮ ಮೊಬೈಲ್ ನಲ್ಲಿ ಲಭ್ಯವಾಗಲಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲವಾದಲ್ಲಿ ಆಯೋಗ ಸೂಚಿಸಿರುವ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹದು.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ತುಂಬಾ ಸರಳಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ತುಂಬಾ ಸರಳ

English summary
The Election Commission is issuing voters slips to all voters whose names are included in electoral list. However, a few political parties have been issuing voters’ slips to the citizens which had left them confused. voters can get voters slips at polling both also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X