ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಪಿಎಂ ಅನುದಾನ : ಕಾಗೇರಿ, ಜ್ಞಾನೇಂದ್ರ ವಿರುದ್ಧ ದೂರು

|
Google Oneindia Kannada News

Vishveshwara Hegde Kageri
ಶಿವಮೊಗ್ಗ, ಮೇ 4 : ಅನುದಾನಗಳನ್ನು ದುರ್ಬಳಕೆ ಆರೋಪದ ಮೇಲೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಂಪಿಎಂ ಮಾಜಿ ಅಧ್ಯಕ್ಷ ಆರಗ ಜ್ಞಾನೇಂದ್ರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಮೈಸೂರು ಪೇಪರ್ ಮಿಲ್ಸ್ ನ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಉಭಯ ನಾಯಕರ ವಿರದ್ದ ಆರೋಪಿಸಿದ್ದಾರೆ.

ಶುಕ್ರವಾರ ಶಿವಮೂರ್ತಿ ಎಂಬುವವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದು, ಆರಗ ಜ್ಞಾನೇಂದ್ರ ಎಂಪಿಎಂ ಅಧ್ಯಕ್ಷರಾಗುವ ಮುನ್ನ ಸಂಸ್ಥೆ 32 ಕೋಟಿ ರೂ.ಗಳ ನಷ್ಟದಲ್ಲಿತ್ತು. ಅವರು ಅಧ್ಯಕ್ಷ ಪದವಿ ವಹಿಸಿಕೊಂಡು ರಾಜೀನಾಮೆ ನೀಡಿದಾಗ ಸಂಸ್ಥೆ 300 ಕೋಟಿ ರೂ.ನಷ್ಟದಲ್ಲಿದೆ.

ಕರ್ನಾಟಕ ಸರ್ಕಾರ ಸಂಸ್ಥೆಯ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ವಿವಿಧ ಯಂತ್ರೋಪಕರಣಗಳ ಖರೀದಿಗೆ 30 ಕೋಟಿ ಬಿಡುಗಡೆ ಆಗಿತ್ತು. ಜ್ಞಾನೇಂದ್ರ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪುಸ್ತಕ ಖರೀದಿಸಿಲ್ಲ : ರಾಜ್ಯಪಾಲರ ಸೂಚನೆಯಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಎಂಪಿಎಂನಿಂದ ನೋಟ್ ಬುಕ್ ಗಳನ್ನು ಖರೀದಿಸಬೇಕು. 2010ರಲ್ಲಿ 9 ಕೋಟಿ ರೂ.ಮೌಲ್ಯದ ಪುಸ್ತಕಗಳನ್ನು ಖರೀದಿಸಲಾಗಿತ್ತು.

ಆದರೆ ಸದ್ಯ, ಪುಣೆ ಮೂಲದ ಖಾಸಗಿ ಕಂಪನಿಯಿಂದ ಹೆಚ್ಚಿನ ಹಣ ನೀಡಿ ನೋಟ್ ಬುಕ್ ಖರೀದಿಸಲಾಗುತ್ತಿದೆ. ಎಂಪಿಎಂನಿಂದ ಏಕೆ? ಖರೀದಿಸುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ವಿರುದ್ಧ ತನಿಖೆ ನಡೆಯಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.

ದೂರುದಾರರು ಎಂಪಿಎಂ ಆಡಳಿತ ನಿರ್ದೇಶಕರು, ಹಿಂದಿನ ನಿರ್ದೇಶಕರಾದ ಅನಿಲ್ ಕುಮಾರ್, ಯೋಗೇಂದ್ರ ಕುಮಾರ್, ಸುಧೀರ್ ಕಾಮತ್ ಸೇರಿದಂತೆ ಹತ್ತು ಮಂದಿಯ ವಿರುದ್ದ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಆರಗ ಜ್ಞಾನೇಂದ್ರ ಚುನಾವಣೆಗೆ ಸ್ಪರ್ಧಿಸಿರುವುದರಿಂದ ಪ್ರತಿಪಕ್ಷಗಳು ಈ ದೂರು ಕೊಡಿಸಿವೆ ಎಂದು ಶಿವಮೊಗ್ಗ ಬಿಜೆಪಿ ಘಟಕ ಆರೋಪಿಸಿದೆ.

ಕಾಂಗ್ರೆಸ್ ಕೈವಾಡ : ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಆರಗ ಜ್ಞಾನೇಂದ್ರ, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಚುನಾವಣೆ ಸಮಯದಲ್ಲಿ ತಮ್ಮ ಹೆಸರು ಹಾಳು ಮಾಡಲು ಇಂತಹ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
A private complaint has been filed in the Lokayukta Court in Shimoga against Primary and Secondary Education Minister Vishveshwara Hegde Kageri, former chairperson of Mysore Paper Mills (MPM) Araga Jnanendra and nine others alleging misappropriation of funds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X