ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್: ಕೋಮಾದಲ್ಲಿದ್ದ ಭಾರತದ ಸರಬ್‌ಜಿತ್ ಸಿಂಗ್ ಇನ್ನಿಲ್ಲ

By Srinath
|
Google Oneindia Kannada News

Indian prisoner Sarabjit singh is dead
ಲಾಹೋರ್, ಮೇ 2: ಲಾಹೋರ್ ಜಿನ್ನಾ ಆಸ್ಪತ್ರೆಯಲ್ಲಿ ಒಂದು ವಾರದಿಂದ ಕೋಮಾ ಸ್ಥಿತಿಯಲ್ಲಿದ್ದ ಭಾರತೀಯ ಸರಬ್‌ ಜಿತ್ ಸಿಂಗ್ (49) ಇಂದು ಮುಂಜಾನೆ 1.15ರಲ್ಲಿ ಮೃತಪಟ್ಟಿದ್ದಾರೆ.

ಭಾರತದ ರೈತ,: ರಾಜಕೀಯ ಚಿತಾವಣೆಯಲ್ಲಿ ಮೇಲುಗೈ ಸಾಧಿಸಿದ ಪಾಕಿಸ್ತಾನವು ಜೈಲಿನಲ್ಲಿದ್ದ ಭಾರತದ ರೈತ, ಸರಬ್‌ ಜಿತ್ ಸಿಂಗ್ ಸಾವಿಗೆ ಕಾರಣವಾಗಿದೆ. ಮೇ 11ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಪಾಕಿಸ್ತಾನವು ಭಾರತದ ವಿರುದ್ಧ ತನ್ನ ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಯಾವುದೇ ಕ್ರಮಕ್ಕೂ ಸೈ ಎಂಬುದನ್ನು ನಿರೂಪಿಸಲು ಸರಬ್ ಜಿತ್ ಸಾವಿಗೆ ಹೇತುವಾಗಿದೆ ಎನ್ನಲಾಗಿದೆ.

ಕಳೆದ ಶುಕ್ರವಾರ ಕೋಟ್ ಲಖ್‌ ಪತ್ ಜೈಲಿನಲ್ಲಿ ಸುಮಾರು ಆರು ಮಂದಿ ಖೈದಿಗಳು ಜೈಲಿನಲ್ಲಿದ್ದ ಸರಬ್‌ ಜಿತ್ ಮೇಲೆ ತೀವ್ರವಾದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಸಿಂಗ್ ಕೋಮಾ ಸ್ಥಿತಿಗೆ ತಲುಪಿ, ಮೆದುಳು ಸಹ ನಿಷ್ಕ್ರಿಯವಾಗಿತ್ತು.

ಮರಣದಂಡಗೆ ಜಾರಿಯಾಗಿತ್ತು: ಪಾಕಿಸ್ತಾನಕ್ಕೆ ಸೇರಿದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 14 ಜನರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಭಾರತದ ಸರಬ್‌ ಜಿತ್ ಸಿಂಗ್ ಆಪಾದಿತನೆಂದು ಸಾಬೀತಾಗಿತ್ತು. ಪಾಕಿಸ್ತಾನ ನ್ಯಾಯಾಲಯ ಇವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಿತ್ತು.

English summary
Indian prisoner Sarabjit singh is dead. The Indian prisoner Sarabjit Singh, who was lodged in Pakistan jail, was brutally attacked by fellow prisoners. Sarabjit Singh was facing death sentence in Pakistan. Sarabjit was convicted for alleged involvement in a string of bombings in Pakistan's Punjab that killed 14 people in 1990.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X