ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೆಕ್ಷನ್ ಕಿರಿಕ್: ತಮಿಳಿನಲ್ಲಿ ರಮ್ಯಾ ಮತಯಾಚನೆ

By Mahesh
|
Google Oneindia Kannada News

Ramya campaigns for Harris in Tamil
ಬೆಂಗಳೂರು, ಮೇ.1: ಶಾಂತಿನಗರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಪರ ಮತಯಾಚನೆಗೆ ಬಂದಿದ್ದ ಕನ್ನಡ ನಟಿ ರಮ್ಯಾ ಅವರು ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ತಮಿಳು ಭಾಷೆಯಲ್ಲಿ ಮತಯಾಚಿಸಿ ಹೊಸ ಕಿರಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಸಾಲದ್ದಕ್ಕೆ ತಮಿಳಿನಲ್ಲಿ ಮತಯಾಚಿಸಿರುವುದನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಶಾಂತಿನಗರದ ಕಾಂಗ್ರೆಸ್ ಅಭ್ಯರ್ಥಿ ಹ್ಯಾರಿಸ್ ಅವರ ಪರ ರಮ್ಯಾ ಅವರು ಬುಧವಾರ ಪ್ರಚಾರ ಮಾಡಿದರು. ಶಾಸಕ ಹ್ಯಾರಿಸ್ ಅವರ ಮನವಿಯ ಮೇರೆಗೆ ತಮಿಳಿನಲ್ಲಿ ಭಾಷಣ ಮಾಡಿದ ರಮ್ಯಾ ಅವರು, ಹ್ಯಾರಿಸ್ ಒಳ್ಳೆ ಅಭ್ಯರ್ಥಿ ಅವರಿಗೆ ಮತ ಹಾಕಿ ಎಂದು ತಮಿಳಿನಲ್ಲಿ ಮತಯಾಚನೆ ಮಾಡಿದರು.

ಇದನ್ನು ಕೇಳಿಸಿಕೊಂಡ ಕನ್ನಡಾಭಿಮಾನಿಗಳು ರಮ್ಯಾ ಅವರ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಪ್ರಶ್ನಿಸಿದರು. ರಮ್ಯಾ ಅವರು ಕರ್ನಾಟಕ ಜನತೆಯ ಕ್ಷಮೆಯಾಚಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ಸಂದೇಶ ಕೂಡಾ ಹೊರಡಿಸಿತು.

ಕರ್ನಾಟಕದಲ್ಲಿ ಕನ್ನಡ ಮಾತನಾಡದೇ ತಮಿಳಿನಲ್ಲಿ ಮಾತನಾಡಿದ ನಟಿ ರಮ್ಯಾ ಅವರು ಈ ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲವಾದರೆ ರಾಜ್ಯದಲ್ಲಿ ಅವರ ಯಾವುದೇ ಚಿತ್ರಗಳು ತೆರೆ ಕಾಣಲು ಬಿಡುವುದಿಲ್ಲ' ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಅವರು, ಎಚ್ಚರಿಕೆ ನೀಡಿದರು.

ಆದರೆ, ಮತದಾರರ ಓಲೈಕೆಗಾಗಿ ಮಾತ್ರ ಈ ತಂತ್ರ ಅನುಸರಿಸಬೇಕಾಯಿತು ಎಂದು ತಪ್ಪೊಪ್ಪಿಕೊಳ್ಳದ ರಮ್ಯಾ ಅವರು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.. ಕೆಳಗಡೆ ಪ್ರತ್ಯುತ್ತರ ನೋಡಿ

ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ವೇಳೆ ತಮಿಳಿನಲ್ಲಿ ಮಾತನಾಡುವ ಮೂಲಕ ಮತದಾರರನ್ನು ಓಲೈಸಲು ಯತ್ನಿಸಿದ್ದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಿಳಿಸಿ..

English summary
Actress and Congress youth leader Ramya campaigns for Shantinagar candidates NA Harris in Tamil which irks Kannada Activists and Kannada Tweeples. But, Ramya alias Divyaspandana defended her act by saying we all are Indians and Tamil is one of the official language of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X