ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಸಮರ : ಅಭ್ಯರ್ಥಿಗಳ ಆಸ್ತಿ, ಕ್ರಿಮಿನಲ್ ಪ್ರಕರಣಗಳು

|
Google Oneindia Kannada News

assembly
ಬೆಂಗಳೂರು, ಏ. 30 : ಈ ಬಾರಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಕೋಟ್ಯಧಿಪತಿಗಳು. ಪ್ರಮುಖ ಪಕ್ಷದಿಂದ ಸ್ಪರ್ಧಿಸಿರುವ ಇವರ ಆಸ್ತಿ ಕಳೆದ ಬಾರಿಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕರ್ನಾಟಕ ಚುನಾವಣಾ ಕಾವಲು ವೇದಿಕೆ ಅಭ್ಯರ್ಥಿಗಳು ಘೋಷಿಸಿರುವ ಆಸ್ತಿ ವಿವರದ ವಿಶ್ಲೇಷಣಾ ವರದಿಯಲ್ಲಿ ಈ ಸತ್ಯ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ನ್ಯಾಷನಲ್ ಎಲೆಕ್ಷನ್ ವಾಚ್ ಸ್ಥಾಪಕ ಸದಸ್ಯ ಪ್ರೊ.ತ್ರಿಲೋಚನ್ ಶಾಸ್ತ್ರಿ, ಅಭ್ಯರ್ಥಿಗಳು ಘೋಷಿಸಿರುವ ಆಸ್ತಿವಿವರ ಆಧರಿಸಿ 1, 052 ಅಭ್ಯರ್ಥಿಗಳ ವಿಶ್ಲೇಷಣಾ ವರದಿ ತಯಾರಿಸಲಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಆಸ್ತಿ ವಿವರದ ಜೊತೆಗೆ ಶೈಕ್ಷಣಿಕ ಮಾಹಿತಿ ಮತ್ತು ಅವರ ವಿರುದ್ಧ ಇರುದ ಕ್ರಿಮಿನಲ್ ಪ್ರಕರಣಗಳ ವರದಿಯನ್ನು ವಿಶ್ಲೇಷಿಸಲಾಗಿದೆ. ಪ್ರಮುಖ ಪಕ್ಷಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಸಣ್ಣ ಪಕ್ಷಗಳು ಹಾಗೂ ಪಕ್ಷೇತರರನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ.

ಆಸ್ತಿ ಅಧಿಕವಾಗಿರುವ ಅಭ್ಯರ್ಥಿಗಳ ಕುರಿತು ಚುನಾವಣಾ ಆಯೋಗಕ್ಕೂ ವರದಿ ನೀಡಲಾಗಿದೆ. ಆಸ್ತಿ ಮೂಲಗಳನ್ನು ಪತ್ತೆ ಹಚ್ಚಲು ಚುನಾವಣಾ ಆಯೋಗ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದೆ ಎಂದು ಶಾಸ್ತ್ರಿ ತಿಳಿಸಿದರು.

ಕರ್ನಾಟಕದ ಕೋಟ್ಯಾಧಿಪತಿ : ಪ್ರಸ್ತುತ 2,948 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಶ್ಲೇಷಣೆಗೆ ಒಳಪಡಿಸಿದಂತೆ ಕಾಂಗ್ರೆಸ್ ನ 156 ಮಂದಿ, 156 ಮಂದಿ ಮತ್ತು ಜೆಡಿಎಸ್‌ನ 150 ಮಂದಿ ತಮ್ಮ ಆಸ್ತಿ ಹೆಚ್ಚಿಸಿಕೊಂಡಿದ್ದಾರೆ.

ಕೆಜೆಪಿಯ 114 ಮಂದಿ, ಬಿಎಸ್‌ಆರ್ ಕಾಂಗ್ರೆಸ್‌ನ 54 ಮಂದಿ, ಲೋಕಸತ್ತಾದ 8 ಮಂದಿ ಹಾಗೂ ಪಕ್ಷೇತರ ಅಭ್ಯರ್ಥಿಗಳಲ್ಲಿ 7 ಮಂದಿ, ಸೇರಿದಂತೆ ಒಟ್ಟಾರೆ ಸರಾಸರಿ 65ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು. ಎಲ್ಲಾ ಅಭ್ಯರ್ಥಿಗಳ ಸರಾಸರಿ ಆಸ್ತಿ ತಲಾ 9.08 ಕೋಟಿ ರೂ.

ಯಾವ ಅಭ್ಯರ್ಥಿಗಳು : ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಅತಿ ಹೆಚ್ಚು ಆಸ್ತಿ (ರೂ.910 ಕೋಟಿ) ಹೊಂದಿದ್ದಾರೆ. ಬಿಜೆಪಿಯ ಕೆ.ಆರ್.ಪುರಂ ಅಭ್ಯರ್ಥಿ ನಂದೀಶ್ ರೆಡ್ಡಿ 118 ಕೋಟಿ ರೂ ಆಸ್ತಿ ಹೊಂದಿದ್ದಾರೆ.

ಜೆಡಿಎಸ್‌ ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಕೆ.ಬಾಗೇಗೌಡ 250 ಕೋಟಿ ರೂ. ಆಸ್ತಿ ಹೊಂದಿದ್ದರೆ, ಕೆ.ಆರ್.ಪುರಂನ ಕೆಜೆಪಿ ಹುರಿಯಾಳು ಆರ್.ಸತ್ಯನಾರಾಯಣ ಅವರ ಬಳಿ ಯಾವುದೇ ಆಸ್ತಿ ಇಲ್ಲ. ಇವರ ಆಸ್ತಿ ಮೌಲ್ಯ ಸೊನ್ನೆ.

ಕ್ರಿಮಿನಲ್ ಪ್ರಕರಣಗಳು : ಚುನಾವಣೆಗೆ ಸ್ಪರ್ಧಿಸಿರುವ 220 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಶೇ.25, ಜೆಡಿಎಸ್, ಕೆಜೆಪಿ ತಲಾ ಶೇ.22, ಬಿಜೆಪಿ ಶೇ.21, ಬಿಎಸ್‌ಆರ್ ಕಾಂಗ್ರೆಸ್ ಶೇ.12, ಲೋಕಸತ್ತಾ ಶೇ.9 ಹಾಗೂ ಪಕ್ಷೇತರರಲ್ಲಿ ಶೇ.36ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

ವಿದ್ಯಾಭ್ಯಾಸ : 589 ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚು ವಿದ್ಯಾಭ್ಯಾಸ ಮಾಡಿಕೊಂಡಿದ್ದಾರೆ. ಸದ್ಯ ಕೇವಲ 1, 052 ಅಭ್ಯರ್ಥಿಗಳ ವಿವರಗಳು ಈ ಮಾಹಿತಿ ನೀಡುತ್ತಿವೆ. ಒಟ್ಟಾರೆ ಎಲ್ಲಾ ಅಭ್ಯರ್ಥಿಗಳ ಆಸ್ತಿಗಳ ವಿಶ್ಲೇಷಣೆ ನಡೆಸಿದರೆ ಇನ್ನಷ್ಟು ಮಾಹಿತಿ ದೊರಕಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Average asset of Candidates who contesting in the May 5 assembly elections has nearly doubled. Two NGOs Karnataka Election Watch (KEW) and Association for Democratic Reforms, compared MLAs asset with 2008 and 2013 affidavit. each candidates have 9.08 core Average asset in their hand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X