ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಡಿ ದೇಗುಲಕ್ಕೆ 305 ಕೋಟಿ ರು ದೇಣಿಗೆ

By Mahesh
|
Google Oneindia Kannada News

The Saibaba temple
ಶಿರಡಿ, ಏ.28: ದೇಶದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರದ ದೇಣಿಗೆ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ದೇವಸ್ಥಾನದ ಟ್ರಸ್ಟ್‌ಗೆ 305.39 ಕೋಟಿ ದೇಣಿಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 30ರಷ್ಟು ಹೆಚ್ಚು. ಎಂದು ಟ್ರಸ್ಟ್ ಪ್ರಕಟಿಸಿದೆ.

ಈ 305.39 ಕೋಟಿಯಲ್ಲಿ ಕೇವಲ ದೇವಸ್ಥಾನದಲ್ಲಿರುವ ಕಾಣಿಕೆ ಡಬ್ಬಿಯಿಂದಲೇ 176 ಕೋಟಿ ಸಂಗ್ರಹವಾಗಿದೆ. ಇದಲ್ಲದೆ 22 ದೇಶಗಳ ಕರೆನ್ಸಿ ಮೂಲಕ 10 ಕೋಟಿಯಷ್ಟು ಕಾಣಿಕೆ ಬಂದಿದೆ. ಜತೆಗೆ, ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಮೂಲಕ 15.54 ಕೋಟಿ ಮೊತ್ತದ ಕಾಣಿಕೆ ಹರಿದು ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 50 ಕೋಟಿ ರು ಆಭರಣಗಳ ಮೂಲಕ ಬಂದಿತ್ತು.

ಮಿಕ್ಕಂತೆ ಉಳಿದ ಹಣ ಚೆಕ್,ಡಿಡಿ ಮನಿಯಾರ್ಡರ್ ಮತ್ತು ಕೌಂಟರ್‌ನಲ್ಲಿರುವ ಹಣದ ರಶೀದಿಗಳ ಮೂಲಕ ಹರಿದು ಬಂದಿದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2012-13ರ ಆರ್ಥಿಕ ವರ್ಷದ ಅಂತ್ಯಕ್ಕೆ ಶಿರಡಿ ಸಾಯಿಬಾಬಾ ದೇಗುಲದ ಟ್ರಸ್ಟ್ ನ ನಿಶ್ಚಿತ ಠೇವಣಿ ಮೊತ್ತ 860 ಕೋಟಿ ಆಗಿದ್ದು, ಬ್ಯಾಂಕುಗಳಲ್ಲಿ 300 ಕೆಜಿ ಚಿನ್ನ ಹಾಗೂ 3,000 ಕೆಜಿ ಬೆಳ್ಳಿ ಇಡಲಾಗಿದೆ.

ಮಂದಿರದ ಸುಗಮ ಆಡಳಿತಕ್ಕಾಗಿ ಮಹಾರಾಷ್ಟ್ರ ಸರಕಾರವು 2004ರಲ್ಲಿ ಈ ಟ್ರಸ್ಟ್‌ನ್ನು ರಚಿಸಿತ್ತು. 2011-12ನೇ ಹಣಕಾಸು ವರ್ಷದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯ ನಿರಖು ಠೇವಣಿಗಳ ಮೊತ್ತದಲ್ಲಿ 1,38,06,28,921 ರೂ.ಗಳ ಏರಿಕೆಯಾಗಿತ್ತು.

ಶಿರಡಿಯಲ್ಲಿ ಉದ್ದೇಶಿತ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 45 ಕೋ.ರೂ. ಮತ್ತು 24,69,239 ರೂ.ವೆಚ್ಚದಲ್ಲಿ ಲಂಡನ್ನಿನಲ್ಲಿ ಸಾಯಿ ಭಜನ್ ಸಂಧ್ಯಾ ಸೇರಿದಂತೆ ಒಟ್ಟು 76,74,26,961 ರೂ.ಗಳನ್ನು ಟ್ರಸ್ಟ್ ವಿವಿಧ ದತ್ತಿಕಾರ್ಯಗಳಿಗಾಗಿ ವ್ಯಯಿಸಿದೆ.

ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, ಕಳೆದ ಮೂರು ಆರ್ಥಿಕ ವರ್ಷದಲ್ಲಿ 20 ಕೋಟಿ ರು ಬಂದಿದೆ ಎಂದು ಟ್ರಸ್ಟಿ ಎಂ ಕಿಶೋರ್ ಹೇಳಿದ್ದಾರೆ. (ಪಿಟಿಐ)

English summary
The Saibaba temple trust in Shirdi received Rs 305.39 crore in donations last fiscal, an increase of about Rs 30 crore over the previous year, a trust official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X