ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಸಂಹಿತೆ: ಅಂತರ್ ಜಾಲದ ಮೇಲೂ ಆಯೋಗದ ಕಣ್ಣು

|
Google Oneindia Kannada News

Anil Kumar Jha
ಬೆಂಗಳೂರು, ಏ. 27 : ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಮೇ 3ರ ಸಂಜೆ 5 ಗಂಟೆಗೆ ಕೊನೆಗೊಳಿಸಬೇಕು. ನಂತರ ಅಂರ್ತಜಾಲದ ಮೂಲಕ ಪ್ರಚಾರ ನಡೆಸಿದರೂ ಅದು ನೀತಿ ಸಂಹಿತೆ ಉಲ್ಲಂಘನೆ ಯಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮರ್ ಝಾ ಹೇಳಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಹಿರಂಗ ಪ್ರಚಾರ ಹಾಗೂ ಸಮಾವೇಶಗಳು ಮತದಾನದ ಸಮಯ ಅಂತ್ಯಗೊಳ್ಳುವ 48 ಗಂಟೆಗಳ ಮುನ್ನ ಕೊನೆಗೊಳ್ಳಬೇಕು. ಆದ್ದರಿಂದ ಮೇ 3ರ ಸಾಯಂಕಾಲ 5 ಗಂಟೆಯೊಳಗೆ ಬಹಿರಂಗ ಪ್ರಚಾರ ನಿಲ್ಲಿಸಬೇಕು ಎಂದರು.

ಬಹಿರಂಗ ಪ್ರಚಾರ ಕಾರ್ಯ ಅಂತ್ಯಗೊಂಡ ನಂತರ, ಅಭ್ಯರ್ಥಿಗಳು ಅಂತರ್ಜಾಲದ ಮುಖಾಂತರವೂ ಪ್ರಚಾರ ನಡೆಸುವಂತಿಲ್ಲ. ಫೇಸ್ ಬುಕ್, ಎಸ್ಎಂಎಸ್, ಇ-ಮೇಲ್, ವಾಯ್ಸ್ ಮೇಲ್ ಮುಂತಾದವುಗಳ ಮೂಲಕ ಪ್ರಚಾರ ನಡೆಸಿದರೆ ಅದು ಸಹ ನೀತಿ ಸಂಹಿತಿ ಉಲ್ಲಂಘನೆಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಅಂತರ್ಜಾಲದ ತಾಣದ ಮೇಲೆ ಗಮನವಿಡಲು ಆಯೋಗ ವಿಶೇಷ ವ್ಯವಸ್ಥೆ ಮಾಡಿಕೊಂಡಿದೆ. ಅಭ್ಯರ್ಥಿಗಳು ಪ್ರಚಾರ ಮಾಡುವುದು ತಿಳಿದು ಬಂದರೆ ನೀತಿ ಸಂಹಿತಿ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಸಮೀಕ್ಷೆಗಳಿಗೂ ಅನ್ವಯ: ವಿವಿಧ ಟಿವಿ ವಾಹಿನಿಗಳು ನಡೆಸುವ ಚುನಾವಣಾ ಪೂರ್ವ ಸಮೀಕ್ಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಮೇ 3ರ ಸಾಯಂಕಾಲ 5 ಗಂಟೆ ನಂತರ ಯಾವುದೇ ಸಮೀಕ್ಷೆ, ಅದರ ಆಧಾರದ ಮೇಲೆ ಚರ್ಚೆಗಳನ್ನು ನಡೆಸುವಂತಿಲ್ಲ ಎಂದು ಹೇಳಿದರು.

ಮತದಾನ ಮುಗಿದ ಮೇ 5ರ ಸಾಯಂಕಾಲ 5 ಗಂಟೆ ನಂತರ ಚುನಾವಣೋತ್ತರ ಸಮೀಕ್ಷೆ ಹಾಗೂ ಚರ್ಚೆ ನಡೆಸಬಹುದು. ಇದಕ್ಕೆ ಆಯೋಗದದಿಂದ ಯಾವುದೇ ನಿರ್ಭಂದ ವಿಧಿಸಲಾಗಿಲ್ಲ ಎಂದು ತಿಳಿಸಿದರು.

ಚುನಾವಣಾ ವಿವರಗಳು

* ಮತದಾನ ಮೇ 5ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ
* 4,36,36,966 ಮಂದಿ ಒಟ್ಟು ಮತದಾರರು
* 70,87,885 ಬೆಂಗಳೂರಿನ ಮತದಾರರು
* 52,034 ಮತಗಟ್ಟೆಗಳು
* 10,103 ಅತಿ ಸೂಕ್ಷ್ಮ ಮತಗಟ್ಟೆಗಳು
* 14,209 ಸೂಕ್ಷ್ಮ ಮತಗಟ್ಟೆಗಳು
* 2,53,000 ಸಿಬ್ಬಂದಿಗಳು
* 65 ಸಾವಿರ ಮತಯಂತ್ರಗಳು

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Election Campaign will end on May 3 evening 5 pm said, Chief Electoral Officer Anil Kumar Jha. 48 hours Before the polling Campaign will close. After that campaigning with social media is also violation of code of conduct he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X