ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ರೇವಣ್ಣ ಭವಿಷ್ಯವೇನು?

By Srinath
|
Google Oneindia Kannada News

jds-to-win-assembly-polls-hands-down-hd-revanna
ಹೊಳೆನರಸೀಪುರ, ಏ.27: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಎಷ್ಟು ಸ್ಥಾನ ಗಳಿಸಬಹುದು ಮತ್ತು ಆ ಪಕ್ಷದ ಅನುಭವೀ ನಾಯಕ ಎಚ್‌ ಡಿ ರೇವಣ್ಣ ಅವರು ಸೋಲ್ತಾರಾ/ಗೆಲ್ತಾರಾ? ಎಂಬ ಕುತೂಹಲದ ಪ್ರಶ್ನೆಗೆ ಎಂದಿನಂತೆ ಹೊಳೆನರಸೀಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ರೇವಣ್ಣ ಖಡಕ್ ಉತ್ತರ ನೀಡಿದ್ದಾರೆ.

ಮತದಾರರ ಮೇಲೆ ತುಂಬು ವಿಶ್ವಾಸ ವ್ಯಕ್ತಪಡಿಸುತ್ತಾ, ಅದೇ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸಾಧನೆಯ ಬಗ್ಗೆ ಅಷ್ಟೇ ಅವಿಶ್ವಾಸ ವ್ಯಕ್ತಪಡಿಸುತ್ತಾ ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ಗೆ ಪೂರ್ಣ ಬಹುಮತ: ತಮ್ಮ ಜೆಡಿಎಸ್‌ ಪಕ್ಷವು 120ಕ್ಕೂ ಹೆಚ್ಚು ಸ್ಥಾನ ಪಡೆದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಲ್‌ಪಿ ನಾಯಕರೂ ಆದ ರೇವಣ್ಣ ಅವರ ಭವಿಷ್ಯ.

ತಮ್ಮ ಕ್ಷೇತ್ರ ವ್ಯಾಪ್ತಿಯ ಗೊಂಧಿಮಲ್ಲೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಳ್ಗೊಂಡಿದ್ದ ಅವರು, ರಾಷ್ಟ್ರೀಯ ಪಕ್ಷಗಳೆಂದು ಹೇಳಿಕೊಳ್ಳುವ ಕಾಂಗ್ರೆಸ್‌ ಮತ್ತು ಬಿಜೆಪಿ ರಾಜ್ಯದ ಹಿತ ಕಾಪಾಡುವಲ್ಲಿ ವಿಫ‌ಲವಾಗಿದೆ ಎಂದು ಆರೋಪಿಸಿದ್ದಾರೆ.

ಕುಮಾರ ಸಿಎಂ ಆಗೋದಕ್ಕೆ ತನ್ನದೇನೂ ಅಭ್ಯಂತರವಿಲ್ಲ:
ಕಾವೇರಿ ವಿಚಾರದಲ್ಲಿ ಕೇಂದ್ರ ಸರಕಾರದಲ್ಲಿ 6 ಮಂದಿ ಸಚಿವರು ಇದ್ದರೂ ಸಹ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಧ್ವನಿಯೆತ್ತದೇ ರಾಜ್ಯಕ್ಕೆ ಭಾರಿ ಅನ್ಯಾಯ ಮಾಡಿದರು. ಜತೆಗೆ ಬಿಜೆಪಿಯ ಸಂಸದರೂ ಸಹ ರಾಜ್ಯದ ಹಿತ ಕಾಪಾಡುವ ವಿಚಾರದಲ್ಲಿ ದ್ರೋಹವೆಸಗಿದ್ದಾರೆ. ಇಂತಹ ವಿಶ್ವಾಸ ದ್ರೋಹವೆಸಗಿರುವ ಪಕ್ಷಗಳಿಗೆ ರಾಜ್ಯದ ಜನತೆ ಮತ ಹಾಕಲಾರರು ಎಂದೂ ಭವಿಷ್ಯ ನುಡಿದರು.

ತಾವು ಇಂಧನ ಸಚಿವರಾಗಿದ್ದ ಅವಧಿಯ 44 ತಿಂಗಳಲ್ಲಿ ವಿದ್ಯುತ್‌ ಬೆಲೆ ಹೆಚ್ಚಿಸಲಿಲ್ಲ. ಆದರೆ ಪ್ರಸ್ತುತ ಬಿಜೆಪಿ ಸರಕಾರ 3 ಬಾರಿ ದರವೇರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು ರೇವಣ್ಣ ಗೆಲುವು ಖಚಿತ:
ಚುನಾವಣೆ ಸಲುವಾಗಿ ತಾವು ಕ್ಷೇತ್ರದ ಎಲ್ಲೆಡೆ ಪ್ರಚಾರ ಕಾರ್ಯ ನಡೆಸುತ್ತಿದ್ದು, ತಮ್ಮತ್ತ ಮತದಾರನ ಒಲವು ಹೆಚ್ಚಾಗಿದೆ. ತಾವು ಹೋದ ಕಡೆಯೆಲ್ಲಾ ಮತದಾರರು ತಮ್ಮ ಗ್ರಾಮಗಳಲ್ಲಿ ಬಹಳಷ್ಟು ಸಮಸ್ಯೆಗಳು ಇದ್ದು ಅವುಗಳನ್ನು ಪರಿಹರಿಸಿ ಕೊಡುವಂತೆ ಮನವಿ ಮಾಡುವುದರ ಜತೆಗೆ ತಮ್ಮ ಗ್ರಾಮದಲ್ಲಿನ ಎಲ್ಲ ಮತಗಳನ್ನು ನಿಮ್ಮ ಗುರುತಾದ ಹೊರೆಹೊತ್ತ ಮಹಿಳೆ ಗುರುತಿಗೆ ಹಾಕುವ ಮೂಲಕ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ, ಪ್ರಸಕ್ತ ಚುನಾವಣೆಯಲ್ಲಿ ತಮಗೆ ಜಯ ಖಚಿತ ಎಂದು ವಿಶ್ವಾಸ ವ್ತಕ್ತಪಡಿಸಿದರು.

English summary
Karnataka Assembly Election- JDS is to win ensuing assembly polls hands down said HD Revanna in home constituency Holenarasipur on April 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X