ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಅಖಾಡದಲ್ಲಿರುವ ಪ್ರಮುಖ ಪಕ್ಷೇತರರು

|
Google Oneindia Kannada News

ಬೆಂಗಳೂರು, ಏ. 27 : ವಿವಿಧ ರಾಜಕೀಯ ಪ್ಷಕಗಳ ಅಭ್ಯರ್ಥಿಗಳಿಗಿಂತ ಪಕ್ಷೇತರರಾಗಿ ಕಣಕ್ಕಿಳಿಯವು ಅಭ್ಯರ್ಥಿಗಳು ಹೆಚ್ಚು ಪ್ರಭಾವಶಾಲಿಯಾಗಿರುತ್ತಾರೆ. ಕಳೆದ ಚುನಾವಣೆಯಲ್ಲಿ ಸರ್ಕಾರ ರಚಿಸುವಲ್ಲಿ ಪಕ್ಷೇತರ ಅಭ್ಯರ್ಥಿಗಳ ಪಾತ್ರ ಮಹತ್ವವಾಗಿತ್ತು. ಈ ಬಾರಿಯ ಚುನಾವಣಾ ಕಣದಲ್ಲೂ 1,223 ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಮಾಜಿ ಸಚಿವ, ಮಾಜಿ ಶಾಸಕರು, ಹಾಲಿ ಶಾಸಕರು ಪಕ್ಷೇತರರಾಗಿ ಚುನಾವಣಾ ಕಣಕ್ಕೆ ಧುಮಿಕಿದ್ದು, ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಅವರು ಚುನಾವಣೆ ಗೆದ್ದು, ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

ಒಬ್ಬ ಹಾಲಿ ಸಚಿವ, ಇಬ್ಬರು ಮಾಜಿ ಸಚಿವರು, ವಿಧಾನಸಭೆಯ ಮಾಜಿ ಸ್ಪೀಕರ್, ಇಬ್ಬರು ಹಾಲಿ ಮತ್ತು ಇಬ್ಬರು ಮಾಜಿ ಶಾಸಕರು ಈ ಬಾರಿ ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ. 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಭಾವಿ ಪಕ್ಷೇತರ ಅಭ್ಯರ್ಥಿಗಳಿಂದಾಗಿಯೇ ಚುನಾವಣೆ ರಂಗು ಪಡೆದುಕೊಂಡಿದೆ. ಕೆಲವು ಕ್ಷೇತ್ರಗಳಲ್ಲಿ ಪಕ್ಷಗಳಿಗೆ ಇವರು ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ.

ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೂಳಿಹಟ್ಟಿ ಶೇಖರ್, ಬಿ.ಕೆ.ಸಂಗಮೇಶ್, ಮಾಜಿ ಸ್ಪೀಕರ್ ಕೃಷ್ಣ, ರವೀಂದ್ರ ಶೀಕಂಠಯ್ಯ ಈ ಬಾರಿ ಕಣದಲ್ಲಿರುವ ಪ್ರಮುಖ ಪ್ರಕ್ಷೇತರ ಅಭ್ಯರ್ಥಿಗಳು.

ಗೂಳಿ ಹಟ್ಟಿ ಶೇಖರ್

ಗೂಳಿ ಹಟ್ಟಿ ಶೇಖರ್

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಗೂಳಿಹಟ್ಟಿ ಡಿ.ಶೇಖರ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಆರ್.ವರ್ತೂರು ಪ್ರಕಾಶ್

ಆರ್.ವರ್ತೂರು ಪ್ರಕಾಶ್

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಮೊಳಗಿಸಿ ಕೋಲಾರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸಚಿವರಾಗಿದ್ದ ವರ್ತೂರು, ಈ ಬಾರಿಯು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.

ಕೃಷ್ಣಯ್ಯ ಶೆಟ್ಟಿ

ಕೃಷ್ಣಯ್ಯ ಶೆಟ್ಟಿ

ಮಾಲೂರು ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಯ್ಯ ಶೆಟ್ಟಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡದೆ ಕೈ ಕೊಟ್ಟಿದೆ. ಆದ್ದರಿಂದ ಅವರು, ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿಯೇ ಕಣಕ್ಕಿಳಿಯಂದಂತೆ ಮಾಡಿ ಶೆಟ್ಟಿ ಈಗಾಗಲೇ ಅರ್ಧ ಗೆಲುವು ದಾಖಲಿಸಿದ್ದಾರೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ

ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರದ ವಾಜಪೇಯಿ ಎಂದೇ ಪ್ರಸಿದ್ದಿ ಪಡೆದಿರುವ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಚಿವ ಸ್ಥಾನ ನೀಡಲಿಲ್ಲ ಎಂದು ಶೆಟ್ಟರು ಬಿಜೆಪಿ ತೊರೆದಿದ್ದರು. ಜೆಡಿಎಸ್ ಹಾಲಾಡಿಗೆ ಬೆಂಬಲ ಸೂಚಿಸಿದೆ.

ಬಿ.ಕೆ.ಸಂಗಮೇಶ್

ಬಿ.ಕೆ.ಸಂಗಮೇಶ್

ಭದ್ರಾವತಿ ಕ್ಷೇತ್ರದಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿದ್ದರಿಂದ ಸಿಡಿದು ನಿಂತಿರುವ ಹಾಲಿ ಶಾಸಕ ಸಂಗಮೇಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕೆಜೆಪಿಯು ಸಂಗಮೇಶ್ ಅವರಿಗೆ ಬೆಂಬಲ ಸೂಚಿಸಿದ್ದು, ತೀವ್ರ ಪೈಪೋಟಿ ಎದುರಾಗುವ ಸಂಭವಿದೆ.

ಕೃಷ್ಣ

ಕೃಷ್ಣ

ಜನತಾ ಪರಿವಾರದಿಂದ ಬಂದ ಕೃಷ್ಣ 2004ರಿಂದ 2008ರವರೆಗೆ ವಿಧಾನಸಭೆ ಸ್ಪೀಕರ್ ಆಗಿದ್ದರು. ಕಳೆದ ಚುನಾವಣೆಯಲ್ಲಿ ಸೋತಿದ್ದ ಇವರಿಗೆ ಜೆಡಿಎಸ್ ಟಿಕೆಟ್ ನಿರಾಕರಿಸಿತ್ತು. ಈಗ ಪಕ್ಷೇತರರಾಗಿ ಕಣಕ್ಕಿಳಿದಿರುವ ಅವರು ಮೌಲ್ಯಾಧಾರಿತ ರಾಜಕಾರಣದ ಹೆಸರಿನಲ್ಲಿ ಜನರ ಬಳಿ ಹೋಗಿದ್ದಾರೆ.

ಇವರನ್ನು ಕಡೆಗಣಿಸುವಂತಿಲ್ಲ

ಇವರನ್ನು ಕಡೆಗಣಿಸುವಂತಿಲ್ಲ

ಶ್ರೀರಂಗಪಟ್ಟಣ - ರವೀಂದ್ರ ಶ್ರೀಕಂಠಯ್ಯ
ತರೀಕೆರೆ - ಬಿ.ಆರ್.ನೀಲಕಂಠಪ್ಪ
ಮುಳಬಾಗಲು - ಕೊತ್ತೂರು ಜಿ.ಮಂಜುನಾಥ್
ಕಾರವಾರ - ಸತೀಶ್ ಸೈಲ್
ಕೂಡ್ಲಿಗಿ - ನಾಗೇಂದ್ರ

English summary
In Karnataka assembly election 1,223 independents are in the fray. Halady Srinivas Shetty (Kundapura), Krishnaiah Shetty (Maluru, Vartur Prakash (Kolar), Goolihatti hekhar (Hosadurga) and others are very powerful candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X