ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರ್ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಬಿಎಸ್‌ವೈ

By Prasad
|
Google Oneindia Kannada News

Yeddyurappa endorses Sankeshwar's allegations
ಶಿವಮೊಗ್ಗ, ಏ. 26 : ವಿಜಯ್ ಸಂಕೇಶ್ವರ್ ಅವರು ಬಹಿರಂಗಪಡಿಸಿದ 'ಚೀಟಿ' ಅವ್ಯವಹಾರದ ಚೀಟಿಯಲ್ಲಿರುವ ಬರಹ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರದ್ದೇ. ಅದನ್ನು ಅವರು ತಮ್ಮದಲ್ಲ ಎಂದು ಪ್ರೂವ್ ಮಾಡಲಿ ನಾನು ರಾಜಕೀಯದಿಂದಲೇ ನಿವೃತ್ತಿಯನ್ನು ಪಡೆಯುತ್ತೇನೆ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬಹಿರಂಗ ಸವಾಲ್ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕಿ ಸುಷ್ಮಾ ಸ್ವರಾಜ್ ಅವರು ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿರುವ ಸಂದರ್ಭದಲ್ಲಿ ಕೆಜೆಪಿ ಪರ ಪ್ರಚಾರವನ್ನು ತೀವ್ರಗೊಳಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಬಿಜೆಪಿ ನಾಯಕರ ಮೇಲೆ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸುಷ್ಮಾ ಸ್ವರಾಜ್ ಅವರು ಬಹಿರಂಗವಾಗಿಯೇ ಸ್ಪಷ್ಟನೆ ನೀಡಬೇಕು ಎಂದು ಶುಕ್ರವಾರ ಆಗ್ರಹಿಸಿದ್ದಾರೆ.

ಸಂಕೇಶ್ವರ್ ಬಹಿರಂಗಪಡಿಸಿರುವ ಚೀಟಿಯಲ್ಲಿನ ಬರಹ ಸದಾನಂದ ಗೌಡ ಅವರದ್ದೆ. ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಹಣದ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿಯೂ ವರ್ಗಾವಣೆಗೆ ಸಂಬಂಧಿಸಿದಂತೆ ಹಲವಾರು ಹಗರಣಗಳು ನಡೆದಿವೆ. ಈ ಎಲ್ಲ ಅವ್ಯವಹಾರಗಳ ತನಿಖೆ ನಡೆಯಬೇಕು ಎಂದು ಯಡಿಯೂರಪ್ಪನವರು ಬಿಜೆಪಿ ನಾಯಕರ ಮೇಲೆ ವಾಕ್ ಪ್ರಹಾರ ಮಾಡಿದರು.

ಗುರುವಾರ, ಏ.25ರಂದು ಪತ್ರಿಕಾಗೋಷ್ಠಿಯಲ್ಲಿ ಕೆಜೆಪಿ ಸೇರಿರುವ ವಿಜಯ ಸಂಕೇಶ್ವರ್ ಅವರು, ಸದಾನಂದ ಗೌಡ ಮತ್ತು ಆರ್ ಅಶೋಕ್ ನಡುವೆ ಕೋಟಿ ಕೋಟಿ ರು. ಹಣದ ಅವ್ಯವಹಾರ ನಡೆದಿತ್ತು ಎಂದು ಅಶೋಕ್ ಅವರನ್ನು ಸಂಬೋಧಿಸಿ ಕೈಬರಹದಲ್ಲಿರುವ ಚೀಟಿಯನ್ನು ಬಿಡುಗಡೆ ಮಾಡಿದ್ದರು. ಇದು ಕೇವಲ ಒಂದು ಉದಾಹರಣೆ ಮಾತ್ರ ಎಂದು ನುಡಿದಿದ್ದರು. ಆದರೆ, ಇದರ ಮೂಲ ಯಾವುದು, ಯಾವ ಸಂದರ್ಭದಲ್ಲಿ ಕೊಟ್ಟಿದ್ದು ಎಂದು ಕೇಳಿದಾಗ ಉತ್ತರ ಕೊಡದೆ ನುಣುಚಿಕೊಂಡಿದ್ದರು.

ಆ ಚೀಟಿಯಲ್ಲಿ, "ಅಶೋಕ್ ಅವರಿಗೆ, ಈಗಾಗಲೆ ತಮ್ಮ ಬಳಿ ಚರ್ಚಿಸಿದಂತೆ ಇವರಿಗೆ, ಅಧ್ಯಕ್ಷರು ಬಿಜೆಪಿ ಕರ್ನಾಟಕ, 5 ಕೋಟಿ ರು. ಉಳಿಕೆ ಹಣ ನೀಡುವುದು" ಎಂದು ಬರೆದಿರುವುದು ಸ್ಪಷ್ಟವಾಗಿದೆ. ಆದರೆ, ಅಡಿಯಲ್ಲಿರುವ ಸಹಿ ಯಾರದೆಂಬುದು ಸ್ಪಷ್ಟವಾಗಿಲ್ಲ. ಡಿವಿ ಸದಾನಂದ ಗೌಡ ಅವರು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ತಮ್ಮಿಂದ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇಕಿದ್ದರೆ ತನಿಖೆಗೂ ಸಿದ್ಧ ಎಂದು ಪ್ರತಿಸವಾಲು ಎಸೆದಿದ್ದಾರೆ.

English summary
KJP leader B.S. Yeddyurappa has endorsed the statement given by Vijay Sankeshwar that, there were illegal money transactions between Sadananda Gowda, R Ashok and K.S. Eshwarappa. BSY has challenged that he will take political sanyas if DVS disproves the allegations. DVS has denied the allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X