ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಕಾಂಗೈಗೇ; ಆದ್ರೂ ಕುಮಾರಸ್ವಾಮಿಯೇ ಸಿಎಂ!

By Srinath
|
Google Oneindia Kannada News

ನವದೆಹಲಿ‌, ಏ.26: ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ. ಕರ್ನಾಟಕದ ರಾಜಕೀಯದ ಬಗ್ಗೆ 'ಸಿಎನ್‌ಎನ್‌-ಐಬಿಎನ್‌ ಮತ್ತು ದಿ ವೀಕ್‌' ಸಮ್ಮಿಶ್ರ ಸಮೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. Centre for the Study of Developing Societies (CSDS) ಸಂಸ್ಥೆಯು ಈ ಸಮೀಕ್ಷೆಯನ್ನು ನಡೆಸಿದೆ.

ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಭಾರೀ ಸೋಲು ಎನ್ನುತ್ತಿದೆ ತಾಜಾ ಸಮೀಕ್ಷೆ. ಇದು ಇತ್ತೀಚಿಗೆ ಪ್ರಕಟಗೊಂಡ ಕೆಲ ಸಮೀಕ್ಷೆಗಳು ಘೋಷಿಸಿದ್ದ ಫ‌ಲಿತಾಂಶವನ್ನೇ ಮುಂದುವರಿಸಿದ್ದು, ಟ್ರೆಂಡ್‌ ಹಾಗೇ ಇದೆ.

ಆದರೆ ಒಂದೇ ವ್ಯತ್ಯಾಸ, ಮುಖ್ಯಮಂತ್ರಿ ಹುದ್ದೆಯಲ್ಲಿ ಜೆಡಿಎಸ್ ಪಕ್ಷದ ಎಚ್‌ಡಿ ಕುಮಾರಸ್ವಾಮಿಯನ್ನು ಪ್ರತಿಷ್ಠಾಪಿಸಿದ್ದು, ಅವರೇ ಸಿಎಂ ಸೀಟಿಗೆ ಫೇವರಿಟ್ ಎಂದಿದೆ. ಕುತೂಹಲಕಾರಿ ಸಂಗತಿಯೆಂದರೆ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಎರಡನೇ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಇನ್ನು, ಸಿದ್ದರಾಮಯ್ಯನವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಈ ಸಮೀಕ್ಷೆಯ ಸಂಬಂಧ ಕೆಲವೊಂದು ಮುಖ್ಯಾಂಶಗಳು ಹೀಗಿವೆ: ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಮುನ್ನವೇ ನಡೆಸಲಾದ ಸಮೀಕ್ಷೆಯಿದು. ಈ ಸಮೀಕ್ಷೆಯನ್ನು ರಾಜ್ಯದ 75 ವಿಧಾನಸಭಾ ಕ್ಷೇತ್ರಗಳ 294 ಸ್ಥಳಗಳಲ್ಲಿ 4198 ಜನರನ್ನು ಮಾತ್ರವೇ ಸಂದರ್ಶಿಸಿ ಸಿದ್ಧಪಡಿಸಲಾಗಿದೆ. ಆದರೆ ಅದನ್ನೇ ಆಧಾರವಾಗಿಸಿಕೊಂಡು, ಎಲ್ಲ 224 ಸ್ಥಾನಗಳಿಗೂ ಅನ್ವಯಿಸಿಕೊಂಡು ಫಲಿತಾಂಶ ಪ್ರಕಟಿಸಲಾಗಿದೆ.

ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ?

ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ?

ಕಾಂಗ್ರೆಸ್ ಸ್ಥಾನ ಗಳಿಕೆ 117 - 129

ಆಡಳಿತಾರೂಢ ಬಿಜೆಪಿ ಪಾಲಿಗೆ ಎಷ್ಟು?

ಆಡಳಿತಾರೂಢ ಬಿಜೆಪಿ ಪಾಲಿಗೆ ಎಷ್ಟು?

ಬಿಜೆಪಿಗೆ 39-49

ಜೆಡಿಎಸ್ ಎಷ್ಟು ಗೆಲ್ಲಬಹುದು?

ಜೆಡಿಎಸ್ ಎಷ್ಟು ಗೆಲ್ಲಬಹುದು?

ಜೆಡಿಎಸ್ 34- 44

ಕಣದಲ್ಲಿರುವ ಇನ್ನಿತರೆ ಪಕ್ಷಗಳ ಸಾಧನೆ ಏನು?

ಕಣದಲ್ಲಿರುವ ಇನ್ನಿತರೆ ಪಕ್ಷಗಳ ಸಾಧನೆ ಏನು?

ಕೆಜೆಪಿ ಸೇರಿದಂತೆ ಇತರೆ ಪಕ್ಷಗಳು: 14-22

ಇನ್ನೂ ಒಂದಷ್ಟು ಹೈಲೈಟ್ಸ್:

ಇನ್ನೂ ಒಂದಷ್ಟು ಹೈಲೈಟ್ಸ್:

ಸಮೀಕ್ಷೆಯಲ್ಲಿ ನೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಶೇ. 18ರಷ್ಟು ಜನ ಕುಮಾರಸ್ವಾಮಿಗೆ ಜೈ ಎಂದಿದ್ದರೆ, ಶೇ. 10ರಷ್ಟು ಮಂದಿಯ ಬೆಂಬಲ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಪಾಲಾಗಿದೆ. ಶೇ. 8 ರಷ್ಟು ಮಂದಿ ಸಿದ್ದರಾಮಯ್ಯ ಜತೆಗಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್‌ ಶೇ. 2ರಷ್ಟು ಹೆಚ್ಚು ಮತ ಪಡೆದುಕೊಳ್ಳಲಿದೆ. ಬಿಜೆಪಿಗೆ ಶೇ. 11ರಷ್ಟು ಮತ ನಷ್ಟ. ಜೆಡಿಎಸ್‌ ಗೆ ಶೇ. 1ರಷ್ಟು ಹೆಚ್ಚು ಮತ ಪ್ರಾಪ್ತಿಯಾಗಲಿದೆ. ಇನ್ನು ಕೆಜೆಪಿ ಶೇ. 7 ಮತ ಪಡೆದು ಬಿಜೆಪಿಗೆ ಅಡ್ಡಗಾಲಾಗಲಿದೆ.

English summary
The results of the Karnataka Assembly Election pre-poll survey conducted by CNN-IBN The Week is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X