ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬ್ ಸ್ಫೋಟ ರೂವಾರಿ ಬುಹಾರಿ ತಪ್ಪೊಪ್ಪಿಗೆ

By Srinath
|
Google Oneindia Kannada News

bomb-blast-mastermind-kitchen-buhari-confesses-crime
ಬೆಂಗಳೂರು, ಎ.26: ಮಲ್ಲೇಶ್ವರಂನಲ್ಲಿ ಬಿಜೆಪಿ ಕಚೇರಿ ಸಮೀಪ ಏಪ್ರಿಲ್ 17ರಂದು ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಂಡಿದ್ದ ಬೆಂಗಳೂರು ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಸಂಬಂಧ ಬಂಧಿತನಾಗಿದ್ದ Al-Ummah ಸಂಘಟನೆಯ ಕಿಚನ್ ಬುಹಾರಿ ಸ್ಫೋಟಕ ಮಾಹಿತಿಯನ್ನು ನೀಡಿದ್ದಾನೆ. ಸಿಸಿಬಿ ಪೊಲೀಸರ ವಿಚಾರಣೆ ವೇಳೆ ''ಕುಕೃತ್ಯ ನಡೆಸಿದ್ದು ತಾನೇ'' ಎಂದು ಒಪ್ಪಿಕೊಂಡಿರುವ ಬುಹಾರಿ ಈ ಹಿಂದೆ ಸುಮಾರು 12 ದಾಳಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ, ಹಿಂದೂ ಮಕ್ಕಳ ಕಚ್ಚಿಯ ಅಧ್ಯಕ್ಷ ಅರ್ಜುನ್ ಮೇಲೆ ಬುಹಾರಿ ಹಲ್ಲೆ ನಡೆಸಿದ್ದ. ಕರ್ನಾಟಕ ಪೊಲೀಸರು ತಮಿಳುನಾಡು ಪೊಲೀಸರ ನೆರವಿನೊಂದಿಗೆ ಮಂಗಳವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಮಧುರೈನಲ್ಲಿ ಕಿಚನ್ ಬುಹಾರಿಯನ್ನು ಬಂಧಿಸಿದ್ದರು.

ಪೀರ್ ಮೊಯಿದ್ದೀನ್ ಮತ್ತು ಬಶೀರ್ ಎಂಬಿಬ್ಬರನ್ನು ಸೋಮವಾರ ರಾತ್ರಿ ಕೊಯಮತ್ತೂರಿನಲ್ಲಿ ಬಂಧಿಸಿದ್ದರು. ಅವರು ಕೊಟ್ಟ ಸುಳಿವಿನ ಮೇರೆಗೆ ಮಂಗಳವಾರ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರು ಪೊಲೀಸರು ಬುಹಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ಬುಹಾರಿ ಸೂಚನೆಯಂತೆ ಬಾಂಬ್ ಸ್ಫೋಟ ನಡೆಸಿದ್ದಾಗಿ ಪೀರ್ ಮೊಯಿದ್ದೀನ್ ಮತ್ತು ಬಶೀರ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಗಮನಾರ್ಹವೆಂದರೆ ಆಟೋರಾಜ ಈ ಮೂವರನ್ನೂ ಸ್ಫೋಟದ ಹಿಂದಿನ ರಾತ್ರಿ ಸ್ಫೋಟದ ಸ್ಥಳದಲ್ಲಿ ಕಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದ.

English summary
Banglore bomb blast - Mastermind Kitchen Buhari confesses crime. Kitchen Buhari, was arrested on Tuesday morning. suspects Peer Mohideen and Basheer were nabbed on Monday night, while the third accused, Kitchen Buhari, was arrested on Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X