ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭವಿಷ್ಯ ನಿರ್ಧರಿಸುವ 10 ಕಠಿಣ ಪರೀಕ್ಷೆಗಳು

By Mahesh
|
Google Oneindia Kannada News

ಉನ್ನತ ವ್ಯಾಸಂಗ ಬಯಸುವವರಿಗೆ ವಿದೇಶಿ ವಿವಿಗಳಿಗೆ ಸಮಾನಾಗಿ ನಿಲ್ಲಬಲ್ಲ ವಿವಿಗಳು ನಮ್ಮ ದೇಶದಲ್ಲೇ ಹುಟ್ಟಿಕೊಂಡಿದೆ. ಆದರೆ, ಅದರಲ್ಲಿ ಹೆಚ್ಚಿನ ಬುದ್ಧಿಮತ್ತೆ ಇರುವ ವಿದ್ಯಾರ್ಥಿಗಳು ಇರುತ್ತಾರೆಯೇ? ಎಂಬುದು ಮುಖ್ಯ ಪ್ರಶ್ನೆ.

ಪರೀಕ್ಷೆ ಎಂದರೆ ಸಾಕು ಏನೋ ಒಂದು ರೀತಿ ಭಯ, ಸಂಕಟ ಕಾಮನ್. ಈಗ ಪ್ರವೇಶ ಪರೀಕ್ಷೆ ಇಲ್ಲದೆ ಮುಂದಿನ ವ್ಯಾಸಂಗ ಕಷ್ಟ. ಸಿಇಟಿ ಇರಲಿ ಜಿಮ್ಯಾಟ್ ಇರಲಿ ಅಭ್ಯರ್ಥಿಯ ಬುದ್ಧಿ ಮಾಪಕವಾಗಿ ಪ್ರವೇಶ ಪರೀಕ್ಷೆಗಳು ಕಾದು ಕೂತಿರುತ್ತವೆ.

ವೃತ್ತಿಪರ ಕೋರ್ಸ್ ಗಳಾದ ಇಂಜಿನಿಯರಿಂಗ್, ಡೆಂಟಲ್, ಮೆಡಿಕಲ್, ಮ್ಯಾನೇಜ್ಮೆಂಟ್ ಹಾಗೂ ಕಾನೂನು ಪದವಿ ಪಡೆಯುವ ಬಯಕೆ ಉಳ್ಳವರು ಮೊದಲಿಗೆ ಕಠಿಣಕರ ಪ್ರವೇಶ ಪರೀಕ್ಷೆ ಎದುರಿಸಲೇಬೇಕು. ಭಾರತದಲ್ಲಿ ವೃತ್ತಿಪರ ಕೋರ್ಸ್ ಆಯ್ಕೆ ಗೊಂದಲದ ಜೊತೆಗೆ ಪ್ರವೇಶ ಪರೀಕ್ಷೆಗೆ ತಯಾರಿ ಕೂಡಾ ಭರ್ಜರಿಯಾಗಿ ನಡೆಯುತ್ತದೆ.

ಭಾರತ ಟಾಪ್ 10 ಇಂಜಿನಿಯರಿಂಗ್ ಕಾಲೇಜ್</a><br>* <a href=ಭಾರತದ ಟಾಪ್ 10 ಮೆಡಿಕಲ್ ಕಾಲೇಜು ಪಟ್ಟಿ" title="ಭಾರತ ಟಾಪ್ 10 ಇಂಜಿನಿಯರಿಂಗ್ ಕಾಲೇಜ್
* ಭಾರತದ ಟಾಪ್ 10 ಮೆಡಿಕಲ್ ಕಾಲೇಜು ಪಟ್ಟಿ" />ಭಾರತ ಟಾಪ್ 10 ಇಂಜಿನಿಯರಿಂಗ್ ಕಾಲೇಜ್
* ಭಾರತದ ಟಾಪ್ 10 ಮೆಡಿಕಲ್ ಕಾಲೇಜು ಪಟ್ಟಿ

ಚುಟುಕಾದ ಪ್ರಶ್ನೆಗಳಿಗೆ ಆ ಕ್ಷಣಕ್ಕೆ ಕೊಡುವ ಉತ್ತರ ಮುಂದಿನ ಭವಿಷ್ಯ ನಿರ್ಧರಿಸಬಲ್ಲ ಹತ್ತು ಪರೀಕ್ಷೆಗಳಲ್ಲದೆ ಇನ್ನಷ್ಟು ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಎದುರುಗೊಳ್ಳುತ್ತದೆ. ಆದರೆ, ಇಲ್ಲಿನ ಚಿತ್ರಸರಣಿಯಲ್ಲಿರುವ ಪರೀಕ್ಷೆಗಳು ಅಖಿಲ ಭಾರತ ಮಟ್ಟದಲ್ಲಿ ಎಲ್ಲರಿಂದಲೂ ಕಠಿಣ ಎಂದು ಕರೆಸಿಕೊಂಡಿರುವ ಪರೀಕ್ಷೆಗಳು.. ಟಾಪ್ 10 ಕ್ಲಿಷ್ಟಕರ ಪರೀಕ್ಷೆಗಳನು ಯಾವುದು ಮುಂದೆ ಓದಿ....

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Common Admission Test (CAT)

ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಡೆಸುವ CAT ಪರೀಕ್ಷೆ ವಿಶ್ವದ ಎಲ್ಲಾ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಸ್ಪರ್ಧಾತ್ಮಕ ಚಿಂತನೆ, ವಾಕ್ಬಲ, ಮಾಹಿತಿ ಕೌಶಲ್ಯ, ತಾಂತ್ರಿಕ ಜ್ಞಾನ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಅಭ್ಯರ್ಥಿಯ ಪ್ರಬುದ್ಧತೆ ಪರೀಕ್ಷಿಸಲಾಗುತ್ತದೆ. ಪಾಸಾದವರು ಐಐಎಂನ ಬಿಸಿನೆಸ್ ಅಡಳಿತಾತ್ಮಕ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಾರೆ.

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Joint Entrance Examination (JEE )

IIT-JEE ಎಂದು ಕರೆಯಲ್ಪಡುತ್ತಿದ್ದ JEE ಪರೀಕ್ಷೆಯನ್ನು JEE ಅಪೆಕ್ಸ್ ಬೋರ್ಡ್ ನಡೆಸುತ್ತದೆ. ಪದವಿ ಎನ್ ಐಟಿ, ಐಐಐಟಿ ಇನ್ನಿತರ ತಾಂತ್ರಿಕ ವಿದ್ಯಾಲಯಗಳ ಪದವಿಪೂರ್ವ ಇಂಜಿನಿಯರಿಂಗ್ ಪೋಗ್ರಾಂಗೆ ಸೇರ್ಪಡೆಗೊಳ್ಳಲು ಈ ಪರೀಕ್ಷೆ ಅವಶ್ಯ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Graduate Aptitude test for Engineering (GATE)

ಹಲವು ಐಐಟಿಗಳು ಹಾಗೂ ಬೆಂಗಳೂರಿನ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ GATE ಪರೀಕ್ಷೆಯನ್ನು ನಡೆಸುತ್ತದೆ. ಐಐಟಿ ನಡೆಸುವ ಎಂ.ಇ/ಎಂ.ಟೆಕ್ ಕೋರ್ಸ್ ಗೆ ಸೇರಲು GATE ಪಾಸಾಗುವುದು ಅವಶ್ಯ. ಅಲ್ಲದೆ ಸರ್ಕಾರಿ ಸ್ವಾಮ್ಯದ ಕಂಪನಿಗಳು, ಸಾರ್ವಜನಿಕ ವಲಯ ಸಂಸ್ಥೆ ಉದ್ಯೋಗಕ್ಕೂ ಸಹಕಾರಿ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

National Eligibility cum Entrance Test (NEET) Earlier known as AIEEE

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(CBSE) ನಡೆಸುವ NEET ಪರೀಕ್ಷೆ ವೈದ್ಯ ಶಿಕ್ಷಣ ರಂಗದಲ್ಲಿ ಕಠಿಣ ಪರೀಕ್ಷೆ ಎನಿಸಿದೆ. ದಂತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಪ್ರವೇಶಕ್ಕೆ NEET ಅವಶ್ಯ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

National Eligibility Test (NET)

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ನಡೆಸುವ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ ಅಥವಾ NET ಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (MHRD) ನೇರ ಅನುದಾನವಿದೆ.

NET ಪಾಸಾದ ಮೇಲೆ ಜ್ಯೂನಿಯರ್ ರಿಸರ್ಚ್ ಫೆಲೊ ಅಥವಾ ಲೆಕ್ಚರರ್ ಆಗಬಹುದು. ಓದು ಹಾಗೂ ಸಂಶೋಧನೆಯನ್ನು ಮುಂದುವರೆಸುವ ಅವಕಾಶವಿರುತ್ತದೆ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Common Law Admission Test (CLAT)

CLAT ಇದು ಅಖಿಲ ಭಾರತ ಕಾನೂನು ಪದವಿ ಪ್ರವೇಶ ಪರೀಕ್ಷೆಯಾಗಿದ್ದು 11 ಕಾನೂನು ವಿಶ್ವವಿದ್ಯಾಲಯಗಳು ನಡೆಸುತ್ತವೆ. ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿ(LL.B ಹಾಗೂ LL.M) ಪಡೆಯಲು ಪರೀಕ್ಷೆ ಅವಶ್ಯ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

UPSC Civil Service Examination

ಎಲ್ಲಾ ಪರೀಕ್ಷೆಗಳ ಕಠಿಣತೆಯಲ್ಲಿ ಸಮಾನವಾಗಿ ತೂಗಬಲ್ಲ UPSC ಪರೀಕ್ಷೆಗಾಗಿ ಎಲ್ಲಾ ಕ್ಷೇತ್ರದ ವಿಷಯಗಳನ್ನು ಅರೆದು ಕುಡಿದಿರಬೇಕು. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆ ಕಠಿಣಾತಿಕಠಿಣ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

AIIMS Medical Entrance Exam

ಎಂಬಿಬಿಎಸ್ ಕೋರ್ಸ್ ಗಾಗಿ ಆಲ್ ಇಂಡಿಯಾ ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(AIIMS) ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುತ್ತದೆ. 70 ಸೀಟುಗಳಿಗೆ ಅನೇಕ ಜನ ಪ್ರವೇಶ ಬಯಸಿ ಪರೀಕ್ಷೆ ತೆಗೆದುಕೊಳ್ಳುತ್ತಾರೆ.
ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Xavier Aptitude Test (XAT)

ಇದು ಮ್ಯಾನೇಜ್ಮೆಂಟ್ ಕೋರ್ಸ್ ಪ್ರವೇಶ ಪರೀಕ್ಷೆಯಾಗಿದ್ದು, ಜೇಮ್ಶೇಡ್ ಪುರದ ಕ್ಸೇವಿಯರ್ ಲೇಬರ್ ರಿಲೇಷನ್ಸ್ ಇನ್ಸ್ಟಿಟ್ಯೂಟ್ (XLRI) XAT ಪರೀಕ್ಷೆ ನಡೆಸುತ್ತದೆ. ಸ್ನಾತಕೋತ್ತರ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಪ್ರವೇಶಕ್ಕಾಗಿ ಪ್ರತಿವರ್ಷ ಜನವರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

ಟಾಪ್ 10 : ಕಠಿಣಕರ ಪ್ರವೇಶ ಪರೀಕ್ಷೆಗಳು

Birla Institute of Technology & Science Admission Test (BITSAT)

ಇದು ಆನ್ ಲೈನ್ ಪ್ರವೇಶ ಪರೀಕ್ಷೆಯಾಗಿದೆ. BITSನ ಪಿಲಾನಿ, ಗೋವಾ, ಹೈದರಾಬಾದ್ ಕ್ಯಾಂಪಸ್ ನ ಮೊದಲ ವರ್ಷದ ಪದವಿ ಕೋರ್ಸ್ ಗೆ ಸೇರಲು BITSAT ಬರೆಯಬೇಕಾಗುತ್ತದೆ.

English summary
Entrance Exam is an assessment conducted by many educational institutions through which admissions are provided for eligible candidates. These exams may be administered at any level of education, from primary to higher education, although they are more common at higher levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X