ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲೂ ಆಗಿದೆ ಕಿಡ್ನಾಪ್, ಮದ್ಯ, ಗ್ಯಾಂಗ್ ರೇಪ್

By Srinath
|
Google Oneindia Kannada News

bangalore-nursing-student-kidnap-brutally-raped-youths
ಬೆಂಗಳೂರು, ಏ.24: ಎಲ್ಲೋ ರಾಷ್ಟ್ರದ ರಾಜಧಾನಿಯಲ್ಲಿ ಹಿಂಗೆಲ್ಲಾ ಆಗುತ್ತಂತೆ ಅಂತ ರಿಪೋರ್ಟುಗಳು ಬರುತ್ತಿದ್ದವು. ಆದರೆ ಈಗ ನಮ್ಮ ಮಧ್ಯೆಯೇ ಅದೂ ಬೆಳಗಿನ ವೇಳೆಯೇ ಇಂತಹ ರಾಕ್ಷಸ ಕೃತ್ಯ ಬೆಂಗಳೂರಿನಲ್ಲಿ ನಡೆದುಹೋಗಿದೆ.

ಮೂವರು ದುಷ್ಕರ್ಮಿಗಳು 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರನ್ನು ಕಾರಿನಲ್ಲಿ ಅಪಹರಿಸಿ, ಒಂಟಿ ಮನೆಯಲ್ಲಿ ಬಲವಂತವಾಗಿ ಮದ್ಯ ಕುಡಿಸಿ, ಸಾಮೂಹಿಕ ಅತ್ಯಾಚಾರವೆಸಗಿದ ಕುಕೃತ್ಯ ಭಾನುವಾರ ನಡೆದಿದೆ.

ಬಾಧಿತ ಯುವತಿಯನ್ನು ಒಬ್ಬ ಮಹಿಳೆ ಸೇಂಟ್‌ ಜಾನ್ಸ್ ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದು, ಬಳಿಕ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾನುವಾರ ಬೆಳಗ್ಗೆ ಏನಾಯ್ತು?:
ಬಾಧಿತ ಯುವತಿ ನಗರದ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ ವಿದ್ಯಾರ್ಥಿನಿ ನಿಲಯದಿಂದ ಹೊರಟ ಅವರು ಬೆಳಗ್ಗೆ 9 ಗಂಟೆ ಹೊತ್ತಿಗೆ ಸೇಂಟ್ ಫಿಲೋಮಿನಾ ಆಸ್ಪತ್ರೆ ಬಸ್‌ ನಿಲ್ದಾಣದಲ್ಲಿ ನಿಂತಿದ್ದರು. ಅದೇ ವೇಳೆ, ಬಿಳಿ ಬಣ್ಣದ ಸ್ಕಾರ್ಪಿಯೊ ಕಾರಿನಲ್ಲಿ ಮೂವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಯುವತಿಯೊಂದಿಗೆ ಮಾತನಾಡುತ್ತಲೇ ಆಕೆಯನ್ನು ಕಾರಿನೊಳಕ್ಕೆಳೆದುಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ.

ಮುಂದೆ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಒಂಟಿ ಮನೆಗೆ ಕರೆದೊಯ್ದು ಮನಬಂದಂತೆ ಥಳಿಸಿ, ಅಮಾನುಷವಾಗಿ ವರ್ತಿಸಿದ್ದಾರೆ. ಬಲವಂತವಾಗಿ ಮದ್ಯ ಕುಡಿಸಿದ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂಜೆ ಹೊತ್ತಿಗೆ ಆಕೆಗೆ ಪ್ರಜ್ಞೆ ಬಂದಿದೆ.

ಅದೇ ಮನೆಯಲ್ಲಿ ಕಾಣಿಸಿಕೊಂಡ ಮಹಿಳೆಯೊಬ್ಬರು, ನಗ್ನಾವಸ್ಥೆಯಲ್ಲಿದ್ದ ಆಕೆಗೆ ಬಟ್ಟೆ ತೊಡಿಸಿ ಸಂಜೆ ವೇಳೆಗೆ ಸೇಂಟ್ ಜಾನ್ಸ್ ವೈದ್ಯ ಕಾಲೇಜಿನ ಬಳಿ ಬಿಟ್ಟು ಹೋಗಿದ್ದಾರೆ. ಆಘಾತಕ್ಕೆ ಒಳಗಾಗಿದ್ದ ಆಕೆ ಸುಧಾರಿಸಿಕೊಂಡು ವಿದ್ಯಾರ್ಥಿನಿ ನಿಲಯ ತಲುಪಿದ್ದಾರೆ. ನಂತರ ವಿಷಯ ತಿಳಿದ ವಾರ್ಡನ್ ಆಕೆಯನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಯುವತಿಯ ಪೋಷಕರು ನಗರಕ್ಕೆ ಬಂದಿದ್ದು, ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಯುವತಿಯ ಭವಿಷ್ಯದ ದೃಷ್ಟಿಯಿಂದ ಪ್ರಕರಣದ ತನಿಖೆಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.

English summary
19 year old nursing student in Bangalore kidnapped and brutally raped by 3 youths on April 21 in Koramangala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X