ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷ ಆಡಳಿತ ಸಮರ್ಥ ನಾಯಕತ್ವದ ಕಾಂಗ್ರೆಸ್ ಪ್ರಣಾಳಿಕೆ

|
Google Oneindia Kannada News

A. K. Antony
ಬೆಂಗಳೂರು, ಏ. 24 : ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಂಡಿದೆ. ದಕ್ಷ ಆಡಳಿತ ಸಮರ್ಥ ನಾಯಕತ್ವ ಎಂಬ ಹೆಸರಿನ ಪ್ರಣಾಳಿಕೆಯಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವುದು, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ರೈತರ ಕೃಷಿ ಸಾಲಗಳಿಗೆ ಬಡ್ಡಿದರ ವಿನಾಯಿತಿ ನೀಡುವುದು ಮುಂತಾದ ಭರವಸೆಗಳನ್ನು ನೀಡಲಾಗಿದೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಕ್ಷೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮಶ್ವರ್, ವಿಪಕ್ಷ ನಾಯಕ ಸಿದ್ಧರಾಮಯ್ಯ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಣಾಳಿಕೆಗಳ ಮುಂಖ್ಯಾಶಗಳು

* 2 ಲಕ್ಷ ರೂ.ವರೆಗಿನ ಕೃಷಿ ಸಾಲಕ್ಕೆ ಬಡ್ಡಿದರ ವಿನಾಯಿತಿ
* ಹಾಲು ಉತ್ಪಾದಕರಿಗೆ 4 ರೂ. ಪ್ರೋತ್ಸಾಹ ಧನ
* ಶೇ 3ರ ಬಡ್ಡಿದರದಲ್ಲಿ 5 ಲಕ್ಷ ಸಾಲದ ವರೆಗಿನ ಕೃಷಿ ಸಾಲ
* ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ
* ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ
* ಬೆಂಗಳೂರಿನ 5 ಭಾಗಗಳಲ್ಲಿ ಕಲಾಮಂದಿರ
* ಪ್ರತಿ ಜಿಲ್ಲೆಗೆ ಒಂದು ಮಹಿಳಾ ಕಾಲೇಜು
* ಬೆಂಗಳೂರಿನಲ್ಲಿ ಸುಸಜ್ಜಿತ ಫಿಲಂ ಸೊಸೈಟಿ ಸ್ಥಾಪನೆ
* ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಡಿಜಿಟಲ್ ನೋಟ್ ಬುಕ್
* ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ
* ಗ್ರಾಮೀಣ ದೇವಾಲಯಗಳಿಗೆ ಮಾಸಿಕ 2 ಸಾವಿರ ಅನುದಾನ
* ರೈತರ ಪಂಪ್ ಸೆಟ್ ಗಳಿಗೆ 24 ಗಂಟೆ ವಿದ್ಯುತ್
* ಬೆಂಗಳೂರಿನಲ್ಲಿ ಕ್ರೀಡಾ ಸಮುಚ್ಛಯ, ಸಸ್ಯ ಕಾಶಿ ಉದ್ಯಾನವನ ನಿರ್ಮಾಣ
* ಬಿಬಿಎಂಪಿ ಆಡಳಿತ ವ್ಯವಸ್ಥೆಯ ವಿಕೇಂದ್ರಕರಣ ಯೋಜನೆ
* ಏಳನೇ ತರಗತಿವರೆಗೆ ಕನ್ನಡ ಕಡ್ಡಾಯ
* ಪ್ರತಿ ಜಿಲ್ಲೆಯಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆ
* ನೂತನ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ
* ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ದೇವರಾಜ್ ಅರಸು ಫೌಂಡೇಷನ್ ಸ್ಥಾಪನೆ
* ಬಿಪಿಎಲ್ ಕಾರ್ಡ್ ದಾರರಿಗೆ ಒಂದು ಕೆಜೆಯಂತೆ ತಿಂಗಳಿಗೆ 30 ಕೆ.ಜೆ.ಅಕ್ಕಿ
* ಪ್ರಾಕೃತಿಕ ವಿಕೋಪ ನಿದಿಗೆ 1,500 ಕೋಟಿ ಹಣ
* ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ವಿಚಾರಣೆಗೆ ತ್ವರಿತ ಗತಿ ನ್ಯಾಯಾಲಯ

ಬಿಜೆಪಿ ಪ್ರಣಾಳಿಕೆ ಬಿಜೆಪಿ ಪ್ರಣಾಳಿಕೆ

ಬಿಎಸ್ಆರ್ ಕಾಂಗ್ರೆಸ್ ಪ್ರಣಾಳಿಕೆಬಿಎಸ್ಆರ್ ಕಾಂಗ್ರೆಸ್ ಪ್ರಣಾಳಿಕೆ

ಕೆಜೆಪಿ ಪ್ರಣಾಳಿಕೆ ಕೆಜೆಪಿ ಪ್ರಣಾಳಿಕೆ

ಜೆಡಿಎಸ್ ಪ್ರಣಾಳಿಕೆ ಜೆಡಿಎಸ್ ಪ್ರಣಾಳಿಕೆ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Defense Minister A. K. Antony released Congress election manifesto In Bangalore on 24th April, 2013. The manifesto promises power 24/7 for Agriculture pump set. Medical college for every dist among many. KPCC president G.Parameshwar, Opposition leader Siddaramaiah and other leaders were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X