ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಟಿಗಾಗಿ ನೋಟು ಪಡೆದರೆ ಜೈಲು ಖಾಯಂ

|
Google Oneindia Kannada News

 voters
ನವದೆಹಲಿ, ಏ. 23 : ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಲು ನಗದು ಅಥವ ಉಡುಗೊರೆ ಪಡೆದರೆ ಜೈಲು ಶಿಕ್ಷೆ ಅನುಭವಿಸುವ ದಿನಗಳು ದೂರವಿಲ್ಲ. ಮತದಾನ ಮಾಡಲು ಲಂಚ ನೀಡುವವರ ಜೊತೆ ಪಡೆಯುವವರ ಮೇಲೂ ಕಠಿಣ ಕ್ರಮ ಜರುಗಿಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಕೇಂದ್ರ ಗೃಹ ಮಂತ್ರಾಲಯದ ಅನುಮತಿ ದೊರೆತರೆ ಈ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ಮತದಾನಕ್ಕಾಗಿ ಆಮಿಷ ಒಡ್ಡುವವರ ಜೊತೆ ಹಣ ಮತ್ತು ಉಡುಗೊರೆ ಪಡೆಯುವರನ್ನು ಬಂಧಿಸಲು ಜಾಮೀನು ರಹಿತ ಅಧಿಕೃತ ಕಾನೂನು ಜಾರಿಯಾಗಲಿದೆ.

ಮತ ಹಣ ಮತ್ತು ಉಡುಗೊರೆ ಪಡೆಯುವುದು ಸದ್ಯ ಜಾಮೀನು ದೊರೆಯವ ಅಪರಾಧ. ಚುನಾವಣೆಗಳಲ್ಲಿ ಹಣದ ಪ್ರಾಬಲ್ಯ ಕಡಿಮೆಗೊಳಿಸುವ ಉದ್ದೇಶದಿಂದ ಇದನ್ನು ಜಾಮೀನುರಹಿತ ಎಂದು ಪರಿಗಣಿಸಿ ಕಾನೂನಿಗೆ ತಿದ್ದುಪಡಿ ತರಬೇಕೆಂಬುದು ಕೇಂದ್ರ ಚುನಾವಣಾ ಆಯೋಗದ ನಿಲುವು ಚಿಂತನೆ ನಡೆಸಿದೆ. ನೂತನ ಕಾನೂನಿನ ಶಿಫಾರಸ್ಸನ್ನು ಕೇಂದ್ರ ಗೃಹ ಮಂತ್ರಾಯಲಕ್ಕೆ ಕಳುಹಿಸಿದೆ.

ಚುನಾವಣಾ ಆಯೋಗದ ಕ್ರಮಕ್ಕೆ ಈಗಾಗಲೇ ಹತ್ತೊಂಬತ್ತು ರಾಜ್ಯಗಳು ಸಮ್ಮತಿ ಸೂಚಿಸಿದ್ದು, ಕೇಂದ್ರ ಗೃಹ ಮಂತ್ರಾಲಯ ಅಂತಿಮ ನಿರ್ಧಾರ ಮಾತ್ರ ಬಾಕಿ ಇದೆ. ಅಂತಿಮ ನಿರ್ಧಾರ ಹೊರಬಂದ ತಕ್ಷಣ ಕಾನೂನು ಜಾರಿಯಾಗಲಿದೆ.

ತಮಿಳುನಾಡು ಕಾರಣ : ಮತನೀಡಲು ಪ್ರತಿಫಲ ಪಡೆಯುವ ಜನರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕಾರಣವಾಗಿರುವುದು ತಮಿಳುನಾಡು ರಾಜ್ಯ.2011ರಲ್ಲಿ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಉಡುಗೊರೆಗಳ ಮಹಾಪೂರವೇ ಹರಿದಿತ್ತು.

ಟಿವಿ, ಫ್ಯಾನ್, ವಾಷಿಂಗ್ ಮೆಷಿನ್, ಕುಕ್ಕರ್ ಮುಂತಾದ ಆರ್ಕಷಕ ವಸ್ತಗಳು ಮತದಾರರ ಮೆನ ಸೇರಿದ್ದವು. ಇವುಗಳನ್ನು ನೀಡಿದ್ದು, ರಾಜಕೀಯ ಪಕ್ಷಗಳು. ಯಾರು ಮತದಾರರಿಗೆ ಉಡುಗೊರೆ ಹಂಚುತ್ತಿದ್ದಾರೆ ಎಂದು ಪತ್ತೆ ಹಚ್ಚುವುದು ಆಯೋಗಕ್ಕೆ ದೊಡ್ಡ ಸವಾಲಾಗಿತ್ತು.

ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಚುನಾವಣಾ ಆಯೋಗ ಪ್ರತಿಫಲ ನೀಡುವವರು ಮಾತ್ರವಲ್ಲ, ಪಡೆಯುವವರ ಮೇಲೂ ಕ್ರಮ ಜರುಗಿಸಲು ಮುಂದಾಗಿದೆ. ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬಹುದು ಎಂಬುದು ಆಯೋಗದ ಲೆಕ್ಕಾಚಾರ.

ಈ ಹಿನ್ನೆಲೆಯಲ್ಲಿ ಲಂಚ ನೀಡುವ ಮತ್ತು ಪಡೆಯುವ ಅಪರಾಧವನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸಿ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ತರುವಂತೆ ಕೇಂದ್ರ ಗೃಹ ಮಂತ್ರಾಲಯಕ್ಕೆ ಆಯೋಗ ಶಿಫಾರಸು ಮಾಡಿದೆ.

ಕೇಂದ್ರದಿಂದ ಅನುಮತಿ ದೊರೆತರೆ ಕರ್ನಾಟಕ ವಿಧಾನಸಭೆ ಚುನಾವಣೆಯಿಂದಲೇ ಈ ಕಾಯ್ದೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಒಂದು ಅಮೂಲ್ಯವಾದ ಮತಕ್ಕಾಗಿ ಆಮಿಷಗಳನ್ನು ಬಲಿಯಾಗದೇ ಪ್ರಾಮಾಣಿಕವಾಗಿ ಮತದಾನ ಮಾಡಿ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Central Election Commission wish to introduce new law. The voters who have receive money and other gifts for voting he will arrested with non bailable warrant . The 19 states approved for new law Election Commission send recommendation for Central Home Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X