ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ನ್ಯಾಯಪಾಲನೆ: ಇದು ಕುಮಾರಣ್ಣನ ತಾಕತ್ತು

By Srinath
|
Google Oneindia Kannada News

ಬೆಂಗಳೂರು, ಏ.22: ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯಪಾಲನೆಯಲ್ಲಿ ಜೆಡಿಎಸ್ ಪಕ್ಷವು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಸಾಕಷ್ಟು ಮುಂದಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ 10 ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಇತರೆ ಪಕ್ಷಗಳಿಗೆ ಭರ್ಜರಿ ಸವಾಲು ಎಸೆದಿದ್ದಾರೆ.

ktk-assembly-election-jds-candidates-caste-wise-list

10 ಸಾಮಾನ್ಯ ಕ್ಷೇತ್ರಗಳಲ್ಲಿ 4 ಪರಿಶಿಷ್ಟ ಜಾತಿ ಮತ್ತು 6 ಪರಿಶಿಷ್ಟ ಪಂಗಡ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಜೆಡಿಎಸ್ ನಿಜಕ್ಕೂ ಮಾದರಿಯಾಗಿದೆ. ಸೋಲು-ಗೆಲುವನ್ನು ಪಕ್ಕಕ್ಕಿಟ್ಟು ಒಮ್ಮೆ ಇತರೆ ಪಕ್ಷಗಳೂ ಈ ಪಟ್ಟಿಯನ್ನು ನೋಡುವುದು ಒಳಿತು.

ಒಟ್ಟಾರೆಯಾಗಿ ಹಾಲಿ ವಿಧಾನ ಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡಕ್ಕೆ ಮೀಸಲು ಕಾಯ್ದಿರಿಸಲಾಗಿದೆ, ಆದರೆ ಜೆಡಿಎಸ್ ಹೆಚ್ಚುವರಿಯಾಗಿ 10 ಸಾಮಾನ್ಯ ಕ್ಷೇತ್ರಗಳಲ್ಲಿ 6 ಪರಿಶಿಷ್ಟ ಪಂಗಡ, 4 ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ದಲಿತರಿಗೆ ಪ್ರಾಧಾನ್ಯತೆ ನೀಡಿದೆ.

ಇದು ಮತ್ತಷ್ಟು ಶ್ಲಾಘನೀಯವಾಗುತ್ತದೆ ಏಕೆಂದರೆ:

ಇದು ಮತ್ತಷ್ಟು ಶ್ಲಾಘನೀಯವಾಗುತ್ತದೆ ಏಕೆಂದರೆ:

ಹಾಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುರುಮಿಠ್ಕಲ್ ಮೀಸಲು ಕ್ಷೇತ್ರದಿಂದ ಸತತ 8 ಬಾರಿ ಜಯ ದಾಖಲಿಸಿದ್ದಾರೆ. ಆದರೆ ಆ ಮೀಸಲು ಕ್ಷೇತ್ರವು ಪುನರ್ ವಿಂಗಡಣೆ ವೇಳೆ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಗಿಬಿಟ್ಟಿತು.

ಆದರೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ತಮಗೆ ರಾಜಕೀಯ ಭೂಮಿಕೆ ನೀಡಿದ್ದ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದೇ ತಡ ಅಲ್ಲಿಂದ ಕಾಲ್ಕಿತ್ತರು! ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಖರ್ಗೆ ಸಾಹೇಬರು ಅಲ್ಲಿಯೇ ಚುನಾವಣೆಗೆ ನಿಲ್ಲುವ ಧೈರ್ಯ ತೋರದಿರುವುದು ವಿಪರ್ಯಾಸವೇ ಸರಿ.

10 ಪರಿಶಿಷ್ಟ ಅಭ್ಯರ್ಥಿಗಳು ಯಾರೆಂದರೆ

10 ಪರಿಶಿಷ್ಟ ಅಭ್ಯರ್ಥಿಗಳು ಯಾರೆಂದರೆ

ಕ್ಷೇತ್ರಗಳು -ಅಭ್ಯರ್ಥಿ -ಜಾತಿ
1. ಗಾಂಧಿನಗರ - ಸುಭಾಷ್ ಭರಣಿ - ಪರಿಶಿಷ್ಟ ಜಾತಿ
2. ಕೃಷ್ಣರಾಜ - ಹೆಚ್ ವಾಸು - ಪರಿಶಿಷ್ಟ ಜಾತಿ
3. ಶಿಗ್ಗಾಂವ್ - ಟಿಎನ್ ಸುಮಂಗಲ ಕಡಪ - ಪರಿಶಿಷ್ಟ ಜಾತಿ
4. ಹೊಸದುರ್ಗ - ಮಲ್ಲೇಶ್ ನಾಯಕ್ - ಪರಿಶಿಷ್ಟ ಜಾತಿ
5. ವರುಣ - ಚಲುವರಾಜು ನಾಯಕ್ - ಪರಿಶಿಷ್ಟ ಪಂಗಡ
6 ಹಾನಗಲ್ - ಮೋಹನ್ ಕುಮಾರ್ - ಪರಿಶಿಷ್ಟ ಪಂಗಡ
7. ಚನ್ನಗಿರಿ - ರಮೇಶ್ ನಾಯಕ್ - ಪರಿಶಿಷ್ಟ ಪಂಗಡ
8. ಸವದತ್ತಿ - ಡಿಬಿ ನಾಯಕ್ - ಪರಿಶಿಷ್ಟ ಪಂಗಡ
9. ಹಿರೇಕೆರೂರು - ಡಿ.ಎಂ ಸಾಲಿ - ಪರಿಶಿಷ್ಟ ಪಂಗಡ
10. ದಾವಣಗೆರೆ - ಉತ್ತರ ದಾಸ್ ಕರಿಯಪ್ಪ - ಪರಿಶಿಷ್ಟ ಪಂಗಡ

ಸಿಎಂ ಶೆಟ್ಟರ್ ವಿರುದ್ಧ ವಿಕಲಚೇತನ ಅಭ್ಯರ್ಥಿ

ಸಿಎಂ ಶೆಟ್ಟರ್ ವಿರುದ್ಧ ವಿಕಲಚೇತನ ಅಭ್ಯರ್ಥಿ

ಕುತೂಹಲಕಾರಿ ಸಂಗತಿಯೆಂದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸ್ಪರ್ಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಶೆಟ್ಟರ್ ಅವರಿಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಪಕ್ಷವು ತಬ್ರೆಜ್ ಎಂಬ ಅಂಗವಿಕಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಮಹಿಳೆಯರೂ 10 ಮಂದಿ ಇದ್ದಾರೆ!:

ಮಹಿಳೆಯರೂ 10 ಮಂದಿ ಇದ್ದಾರೆ!:

1. ಶ್ವೇತ - ಮಲ್ಲೇಶ್ವರಂ
2. ಹೇಮಲತಾ ಸುರೇಶ್ ರಾಜ್ - ಸಿವಿ ರಾಮನ್‌ ನಗರ
3. ಕನ್ಯಾಕುಮಾರಿ - ವಿಜಯನಗರ
4. ಅನಿತಾ ಕುಮಾರಸ್ವಾಮಿ - ಚನ್ನಪಟ್ಟಣ
5.ರೇಷ್ಮಾ ಪಡ್ನೇಕರ್ - ದೇವರ ಹಿಪ್ಪರಗಿ
6. ಡಾ. ಸುಮಂಗಲ ಕಡಪ - ಶಿಗ್ಗಾಂವ್
7. ಶಾರದ ಪೂರ್‍ಯ ನಾಯಕ್ - ಶಿವಮೊಗ್ಗ ಗ್ರಾಮಾಂತರ
8. ರಾಜಶ್ರೀ ಹೆಗಡೆ - ಬೆಳ್ತಂಗಡಿ
9. ಪರಿಮಳ ನಾಗಪ್ಪ - ಹನೂರು
10. ಶ್ರದ್ಧಾ ಧರ್ಮರಾಜ್ - ಬೆಳಗಾವಿ ಉತ್ತರ

ಜೆಡಿಎಸ್ ಜಾತಿವಾರು ಅಭ್ಯರ್ಥಿಗಳು ಹೀಗಿದ್ದಾರೆ:

ಜೆಡಿಎಸ್ ಜಾತಿವಾರು ಅಭ್ಯರ್ಥಿಗಳು ಹೀಗಿದ್ದಾರೆ:

ಪರಿಶಿಷ್ಟ ಜಾತಿ/ಪಂಗಡ - 61
ಮುಸ್ಲಿಂ - 20
ಕುರುಬರು - 13
ಕ್ರೈಸ್ತರು - 1
ಬ್ರಾಹ್ಮಣರು - 5
ಲಿಂಗಾಯತರು - 44
ಒಕ್ಕಲಿಗರು - 50
ರೆಡ್ಡಿಗಳು - 6

English summary
Karnataka Assembly Election- JDS election candidates caste-wise list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X