• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳ ಕುಟುಂಬಕ್ಕೆ ದಕ್ಕುತ್ತಾ 5000 ಕೋಟಿ ರೂ?

By Srinath
|

ತಿರುವನಂತಪುರ, ಏ.22: ಎರಡು ವರ್ಷಗಳ ಹಿಂದೆ ಇಲ್ಲಿನ ಪದ್ಮನಾಭ ದೇಗುಲದಲ್ಲಿ ಲಕ್ಷಾಂತರ ಕೋಟಿ ರೂಪಾಯಿ ಅನಂತ ಸಂಪತ್ತು ಬೆಳಕಿಗೆ ಬಂದಿತ್ತು. ಅದೇ ರೀತಿ ಕೇರಳಕ್ಕೆ ಮತ್ತೊಂದು ಬಂಪರ್ ಪ್ರಾಪ್ತಿಯಾಗಿದೆ.

ಇದು ಒಂದು ಮುಸ್ಲಿಂ ಕುಟುಂಬಕ್ಕೆ ಸೇರಿದ್ದಾಗಿದ್ದು. ಮೊತ್ತವೂ ಅಗಾಧವಾಗಿದೆ. ಇದು ಕಣ್ಣೂರು ಜಿಲ್ಲೆಯಲ್ಲಿನ ಕೇಯಿ ಎಂಬ ಕುಟುಂಬಕ್ಕೆ ಸೇರಿದ್ದಾಗಿದೆ. ಆದರೆ ಇದು ಸದ್ಯಕ್ಕೆ ಸೌದಿ ಅರೇಬಿಯಾ ಸಂಸ್ಥಾನದ ಖಜಾನೆಗೆ ಸೇರಿದೆ. ಇದನ್ನು ಸದರಿ ಕುಟುಂಬದವರಿಗೆ ಬಿಡಿಸಿಕೊಡುವಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಮೊರೆಯಿಟ್ಟಿದೆ.

ಇಷ್ಟೊಂದು ಭಾರಿ ಮೊತ್ತವು 1950 ನೇ ಇಸ್ವಿಯಿಂದಲೂ ಅಂದರೆ ಆರು ದಶಕಗಳಿಂದ ಸೌದಿ ಖಜಾನೆಯಲ್ಲಿ ಕೊಳೆಯುತ್ತಿದೆ. 1950ರ ದಶಕದಲ್ಲಿ ಇದರ ಒಟ್ಟು ಮೊತ್ತ 1.4 ದಶಲಕ್ಷ ಸೌದಿ ರಿಯಾಲ್. ಒಂದು ರಿಯಾಲ್ ಮೌಲ್ಯ ಈಗ ಸುಮಾರು 15 ರೂ. ಆಷ್ಟಿದೆ.

ಗಮನಾರ್ಹವೆಂದರೆ ಕಳೆದ 10 ವರ್ಷಗಳಿಂದ ಕೇಯಿ ಕುಟುಂಬದವರು ಈ ಹಣವನ್ನು ವಾಪಸ್ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅಲ್ಪಸಂಖ್ಯಾತ ಸಚಿವಾಲಯದ ನಿರ್ದೇಶಕ ಪಿ. ನಾಸೀರ್ ಹೇಳಿದ್ದಾರೆ. ತತ್ಫಲವಾಗಿ, ಕೇರಳ ಸರಕಾರ ಈ ಸಂಪತ್ತು ವರ್ಗಾವಣೆ ಪ್ರಕ್ರಿಯೆನ್ನು ಯಶಸ್ವಿಗೊಳಿಸಲು ವಿಶೇಷಾಧಿಕಾರಿಯನ್ನು ನೇಮಿಸಿದೆ.

ನಾಸೀರ್ ಹೇಳುವಂತೆ ಈ ಸಂಪತ್ತಿನ ಕಥಾನಕ ಹೀಗೆ ಸಾಗುತ್ತದೆ:

136 ವರ್ಷಗಳ ಹಿಂದೆ ಕೇಯಿ ಕುಟುಂಬದವರೊಬ್ಬರು ಮೆಕ್ಕಾ ಬಳಿ ಭೂಮಿಯನ್ನು ಖರೀದಿಸಿದರು. ಅಲ್ಲಿ ಹಜ್ ಯಾತ್ರಿಗಳಿಗಾಗಿ ತಂಗುದಾಣ ನಿರ್ಮಿಸಿದ್ದರು. 1950ರಲ್ಲಿ ಮೆಕ್ಕಾ ಸುತ್ತಮುತ್ತ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸ್ಥಳೀಯ ಆಡಳಿತವು ಈ ಜಾಗವನ್ನು ತನ್ನ ಕಬ್ಜಾಗೆ ತೆಗೆದುಕೊಂಡಿತು.

ಇದಕ್ಕೆ ಪರಿಹಾರಾರ್ಥವಾಗಿ 1.4 ದಶಲಕ್ಷ ಸೌದಿ ರಿಯಾಲ್ ಮೊತ್ತವನ್ನು ನೀಡುವುದಾಗಿ ಅಂದಿನ ಸರಕಾರ ಘೋಷಿಸಿತ್ತು. ಆದರೆ ಸೂಕ್ತ ದಾಖಲೆಗಳ ಅಲಭ್ಯತೆಯಿಂದಾಗಿ ಕೇಯಿ ಕುಟುಂಬದವರಾರೂ ಈ ಪರಿಹಾರ ಮೊತ್ತ ತಮಗೆ ಸೇರಬೇಕು ಎಂದು ಕೇಳಲಾಗಲಿಲ್ಲ.

ವಕ್ಫ್ ಕಾನೂನು ಪ್ರಕಾರ ಅಲ್ಲಾಗೆ ಸಮರ್ಪಿಸಿದ ಯಾವುದೇ ಆಸ್ತಿಯನ್ನು ಆ ಸಂಪತ್ತಿನ ಒಡೆಯನಾಗಲಿ ಅಥವಾ ಆತನ ವಾರಸುದಾರನಾಗಲಿ ಮಾತ್ರವೇ ಪಡೆಯತಕ್ಕದ್ದು. ಬೇರೆ ಯಾರಿಗೂ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗಾಗಿ ಕೇಯಿ ಕುಟುಂಬ ಈ ಪರಿಹಾರ ಮೊತ್ತದ ವಾರಸುದಾರರಾಗಿದ್ದು, ಅದನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ನಾಸೀರ್ ತಿಳಿಸಿದ್ದಾರೆ.

ಈಗಿನ ಅಂದಾಜು ಪ್ರಕಾರ ಅಂದಿನ ಪರಿಹಾರದ ಮೊತ್ತ ಈಗ 5,000 ಕೋಟಿ ರೂ. ಗೆ ತಲುಪಿದೆ. ಸೌದಿ ಕಾನೂನು ಪ್ರಕಾರ ಈ ಮೊತ್ತವನ್ನು ಸೌದಿಯಿಂದ ಹೊರಕ್ಕೆ ತರುವಂತಿಲ್ಲ. ಒಂದು ವೇಳೆ ಕೇಯಿ ಕುಟುಂಸಬ್ಥರಿಗೆ ಇದು ಪ್ರಾಪ್ತಿಯಾದರೂ ಅಷ್ಟನ್ನೂ ಅಲ್ಲೇ ಬಳಕೆ ಮಾಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala Keyis family awaits Rs 5000 crore Saudi bonanza. The state government is urging the centre to intervene to ensure the transfer of the money, amounting, in the 1950s, to 1.4 million Saudi riyals, which has been lying in the Saudi treasury for the past nearly six decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more