• search

ಮೋದಿ vs ರಾಹುಲ್, ಪೂಜಾರಿ vs ಈಶ್ವರಪ್ಪ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Rahul Gandhi vs Narendra Modi in Karnataka
    ಸುಳ್ಯ, ಏ.21: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿ ಎಂದು ಸವಾಲು ಹಾಕಿದ್ದು ನೆನಪಿರಬಹುದು. ಇದಕ್ಕೆ ಪ್ರತಿಯಾಗಿ ತಾಕತ್ತಿದ್ದರೆ ಬಿಜೆಪಿಯವರು ನರೇಂದ್ರ ಮೋದಿಯನ್ನು ರಾಜ್ಯಕ್ಕೆ ಕರೆ ತರಲಿ. ಅವರು ಏನು ಮಾಡಿದ್ದಾರೆಂದು ನಾವು ಜನರೆದುರು ತೆರೆದಿಡುತ್ತೇವೆ ಎಂದು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ.

    ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಏನು ಮಾಡಿದ್ದಾರೆ ಎನ್ನುವುದನ್ನು ಸಿ.ಎ. ಜಿ. ವರದಿ ತಿಳಿಸುತ್ತದೆ. ಸಾವಿರಾರು ಎಕರೆ ಭೂಮಿಯನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ದಾನ ಮಾಡಿದರು. ಲೋಕಾಯುಕ್ತರನ್ನು ನೇಮಿಸದೆ ಭ್ರಷ್ಟಾಚಾರ ಹೊರಬರದಂತೆ ಮಾಡಿದರು. ಮಾನವೀಯತೆ ಮರೆತು ಹತ್ಯಾಕಾಂಡಕ್ಕೆ ಕಾರಣರಾದರು. ಇಂತಹ ಮೋದಿ ಇಲ್ಲಿಗೆ ಬಂದರೆ ಬಿಜೆಪಿಗೆ 50 ಸೀಟು ಕೂಡಾ ದೊರೆಯದು ಎಂದು ಹೇಳಿದರಲ್ಲದೆ, ಯಾವ ಮೋದಿ ಬಂದರೂ ಎದುರಿಸುವ ಶಕ್ತಿ ಕಾಂಗ್ರೆಸ್ಸಿಗೆ ಇದೆ ಎಂದರು.

    ಕಾಂಗ್ರೆಸ್ಸಿಗೂ ಈ ಚುನಾವಣೆ ಪಾಠವಾಗಬೇಕು. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಲ್ಲಿ ಬಿಜೆಪಿಯವರು ಮಾಡಿದ ಹಾಗೆ ಮಾಡಿದಲ್ಲಿ ನಮಗೂ ಜನ ಅದೇ ದಾರಿ ತೋರಿಸುತ್ತಾರೆ ಎಂದರು. ಚುನಾವಣೆ ಬಂದಾಗ ಬಿಜೆಪಿಗೆ ರಾಮ ಮಂದಿರದ ನೆನಪಾಗುತ್ತದೆ. ಈಗ ಮನೆ ಮನೆಗೆ ರಾಮ ಮಂದಿರದ ನೆಪದಲ್ಲಿ ಹೋಗುವ ಜನರಲ್ಲಿ ಬಿಜೆಪಿ ಕಾರ್ಯಕರ್ತರೆ ತುಂಬಿದ್ದಾರೆ.

    ಏ. 22 ರಿಂದ ಸ್ಟಾರ್ ಪ್ರಚಾರಕರು ರಾಜ್ಯದ ನಾನಾ ಭಾಗಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲಿದ್ದಾರೆ. ಮಧುಸೂದನ್ ಮಿಸ್ತ್ರಿ, ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಅಂಬಿಕಾ ಸೋನಿ, ವಯಲಾರ್ ರವಿ, ಸುಶೀಲ್‌ಕುಮಾರ್ ಶಿಂಧೆ, ಅಂಬಿಕಾ ಸೋನಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

    ಏ. 26ರಂದು ಕೋಲಾರ, ತುಮಕೂರು, ಹಾವೇರಿ, ಮೇ 1ರಂದು ಮಂಡ್ಯ, ಹಾಸನ ಹಾಗೂ ಶಿವಮೊಗ್ಗದಲ್ಲಿ ರಾಹುಲ್ ಪ್ರಚಾರ ನಡೆಸಲಿದ್ದಾರೆ

    ಏ. 25ರಂದು ಸೋನಿಯಾ ಗಾಂಧಿ ಆಗಮಿಸಿ ಚಿಕ್ಕಮಗಳೂರು ಹಾಗೂ ಮಂಗಳೂರಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ಏ 30ರಂದು ಗುಲ್ಬರ್ಗ ಹಾಗೂ ಬೆಳಗಾವಿ, ಮೇ 2ರಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೋನಿಯಾ ಭಾಗವಹಿಸಲಿದ್ದಾರೆ.

    ಪ್ರಧಾನಿ ಡಾ.ಮನಮೋಹನ್ ಸಿಂಗ್ ಏ. 29ರಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಹಾಗೂ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಕೆಪಿಸಿಸಿ ಪ್ರಕಟಿಸಿದೆ.

    ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವಂಥ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಅವರು ರಾಷ್ಟ್ರೀಯ ಮುಖಂಡರಿಗೆ ಸೂಚನೆ ನೀಡಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುವಂಥ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ ಎಂದು ರಾಜ್ಯ ನಾಯಕರಿಗೂ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Its Rahul Gandhi vs Narendra Modi in Karnataka this time, BJP leader KS Eshwarappa and Congress leader Janardhan poojary challenging against each using Modi and Rahul names

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more