ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಇನ್ನಿಲ್ಲ

By Mahesh
|
Google Oneindia Kannada News

Human Computer fame Shakunatala Devi passes away Bangalore
ಬೆಂಗಳೂರು, ಏ.21: ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ಶಕುಂತಲಾ ದೇವಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬಸವನಗುಡಿಯ ಸ್ವಗೃಹದಲ್ಲಿ ಭಾನುವಾರ(ಏ.21) ರಂದು ಬೆಳಗ್ಗೆ ಶಕುಂತಲಾ ದೇವಿ ಕೊನೆಯುಸಿರೆಳೆದಿದ್ದಾರೆ ಎಂದು ಶಕುಂತಲಾ ದೇವಿ ಎಜುಕೇಷನ್ ಫೌಂಡೇಷನ್ ಪಬ್ಲಿಕ್ ಟ್ರಸ್ಟ್ ನ ಡಿಸಿ ಶಿವದೇವ್ ಅವರು ಹೇಳಿದರು.

1939, ನವೆಂಬರ್ 4 ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಶಕುಂತಲಾ ದೇವಿ ಜನಿಸಿದ್ದರು. ದೇಗುಲದ ಅರ್ಚಕ ವೃತ್ತಿಗೆ ಸೇರದ ಅವರ ತಂದೆ ಸರ್ಕಸ್ ಸೇರಿದರು. ಮೂರು ವರ್ಷ ವಯಸ್ಸಿನಲ್ಲೇ ಶಕುಂತಲಾ ಅವರು ಇಸ್ಪೀಟ್ ಕಾರ್ಡ್ ಟ್ರಿಕ್ ಗೆ ಸಹಾಯಕರಾದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಆರನೇ ವರ್ಷದಲ್ಲೇ ತನ್ನ ಬುದ್ಧಿಮತ್ತೆಯಿಂದ ಎಲ್ಲರನ್ನು ಸೆಳೆದ ಶಕುಂತಲಾ ಅವರು ಅಂಕಗಣಿತ, ಬೀಜ ಗಣಿತದ ಕಠಿಣ ಲೆಕ್ಕಗಳನ್ನು ಸುಲಭವಾಗಿ ಪರಿಹರಿಸಿದರು.

ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಅವರು 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ 1108 ಒಂದು ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು.

1980ರಲ್ಲಿ ಲಂಡನ್ನಿನಲ್ಲಿ 13 ಅಂಕಿಗಳಿದ್ದ ಸಂಖ್ಯೆ(7,686,369,774,870 x 2,465,099,745,779 )ಗಳ ಗುಣಾಕರವನ್ನು ಮಾಡಿ ಕೇವಲ 28 ಸೆಕೆಂಡುಗಳಲ್ಲಿ ಉತ್ತರ ನೀಡಿದ್ದರು. ಈ ಗಣಿತ ವಿಕ್ರಮ 1995ರ ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಯಿತು.

ಗಿನ್ನಿಸ್ ದಾಖಲೆ ಹೊಂದಿದ್ದ ಶಕುಂತಲಾ ಅವರು ಗಣಿತದ ಅಂಕ ವಿನೋದ,ಲೆಕ್ಕಾಚಾರ, ಅಡುಗೆ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. Puzzles to Puzzle You, Awaken the Genius in Your Child, Book of Numbers, In the Wonderland of Numbers, Perfect Murder and Astrology for You ಮುಂತಾದ ಪುಸ್ತಕಗಳನ್ನು ಹೆಸರಿಸಬಹುದು. ಶಕುಂತಲಾ ದೇವಿ ಅವರು ಎಲ್ಲರಂತೆ ಶಾಲೆ ಹೋಗಿ ಓದು ಕಲಿತವರಲ್ಲ ಎಂಬುದು ವಿಶೇಷ.

English summary
Indian prodigy mental calculator popularly known as Human Computer Shakuntala Devi passed away today(Apr.21) at her residence in Basavanagudi, Bangalore. She was 80.Devi was also an astrologer and gave remedies purportedly based on date and time of birth and place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X