• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಯಾ ಪ್ರಕರಣ, ಮೋದಿ ವಿರುದ್ಧ ಶಿವಸೇನೆ

By Mahesh
|

ಮುಂಬೈ, ಏ.21: ಮುಖ್ಯಮಂತ್ರಿ ನರೇಂದ್ರ ಮೋದಿಯಲ್ಲಿ ಹಿಂದೂ ಸಮುದಾಯವು ವಿವಿಧ ಸಕರಾತ್ಮಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, 2012ರ ನರೋಡಾ ಪಾಟಿಯಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾ ಕೊಡ್ನಾಇನ್ಗೆ ಗಲ್ಲು ಶಿಕ್ಷೆ ಬಯಸಿರುವ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತಿರುಗಿಬಿದ್ದಿದೆ.

ಗುಜರಾತ್ ಮಾಜಿ ಸಚಿವೆ ಮಾಯಾ ಕೊಡ್ನಾನಿ ಹಾಗೂ ಇತರೆ 9 ಮಂದಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಬಯಸಿರುವ ಅವರ ಸರಕಾರದ ಕ್ರಮದಿಂದ ಹಿಂದೂ ಸಮುದಾಯದ ಜನರ ನಿರೀಕ್ಷೆಗಳಿಗೆ ಎಳ್ಳು ನೀರು ಬಿಟ್ಟಂತಾಗಿದೆ ಎಂದು ಶಿವಸೇನೆಯು ಗಂಭೀರ ಆರೋಪ ಮಾಡಿದೆ.

ಮೋದಿ ಹಿಂದೂಗಳ ಸಂರಕ್ಷಕ ಎಂಬ ಭಾವನೆಯು ಹಿಂದೂ ಸಮುದಾಯದ ಜನರಲ್ಲಿತ್ತು. ಆದರೆ ಮಾಯಾ ಕೊಡ್ನಾನಿ ಹಾಗೂ ಬಜರಂಗಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಅಲ್ಲಿನ ಸರಕಾರವು ಬಯಸಿದ್ದು ಹಿಂದೂಗಳ ನಿರೀಕ್ಷೆಗೆ ತನ್ನೀರೆರಚಿದಂತಾಗಿದೆ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಹಿಂದೂಗಳ ಮೇಲೆ ದಾಳಿ ನಡೆಸುವವರು ಹಿಂದೂಗಳೆ ಆಗಿದ್ದಾರೆನ್ನುವುದು ನಿಜಕ್ಕೂ ಖೇದಕರ ಎಂದು ಸಂಪಾದಕೀಯವು ಬೇಸರ ವ್ಯಕ್ತಪಡಿಸಿದೆ. ಫೆಬ್ರವರಿ 28,2002ರಂದು ಅಹ್ಮದಾಬಾದ್‌ನ ನರೋಡಾ ಪಾಟಿಯಾದಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಸುಮಾರು 97 ಮಂದಿ ಸಾವಿಗೀಡಾಗಿದ್ದರು.

ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿದ 7 ತಿಂಗಳ ಬಳಿಕ ಗುಜರಾತ್ ಸರಕಾರವು ಹೈಕೋರ್ಟ್‌ನಲ್ಲಿ ಕೊಡ್ನಾನಿ ಹಾಗೂ ಇತರೆ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಅರ್ಜಿ ಸಲ್ಲಿಸಿದ ಕಾರಣ ಶಿವಸೇನೆಯ ಹೇಳಿಕೆಯು ಹೊರಬಿದ್ದಿದೆ.

ಅಪರಾಧಿಗಳಿಗೆ ತಕ್ಕುದಂತ ಶಿಕ್ಷೆಯನ್ನು ಕೋರ್ಟ್ ವಿಧಿಸಿರುವಾಗ, ಗುಜರಾತ್ ಸರ್ಕಾರ ಅವರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಬಯಸುವುದಾದರೂ ಯಾಕೆ? ಎಂದು ತನ್ನ ಸಂಪಾದಕೀಯದಲ್ಲಿ ಅದು ಪ್ರಶ್ನಿಸಿದೆ. ಅದಾಗ್ಯೂ ಹಿಂಸಾಚಾರವನ್ನು ಸಮರ್ಥಿಸಿರುವ ಶಿವಸೇನೆ ಇದು ಸಬರ್‌ಮತಿ ಎಕ್ಸ್‌ಪ್ರೆಸ್‌ನ್ನು ಅಗ್ನಿಗಾಹುತಿ ಮಾಡಿದುದಕ್ಕೆ ನಡೆದ ಪ್ರತಿಕ್ರಿಯೆ ಹೊರತು ಬೇರೊಂದಲ್ಲ ಎಂದು ಸಾಮ್ನಾದಲ್ಲಿ ಹೇಳಿಕೊಂಡಿದೆ.

ನರೋಡಾ ಪಾಟಿಯಾ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಮೋದಿ ಸರ್ಕಾರ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಮಾಯಾ ಕೊಡ್ನಾನಿ ಹಾಗೂ ಮಾಜಿ ಬಜರಂಗ ದಳ ಮುಖಂಡ ಬಾಬು ಬಜರಂಗಿ ಹಾಗೂ ಇತರರು ಸೇರಿದಂತೆ 32 ಆರೋಪಿಗಳಿಗೆ ವಿಶೇಷ ನ್ಯಾ ಜ್ಯೋತ್ಸ್ನಾ ಯಾಗ್ನಿಕ್ ಅವರಿಗೆ ಅಹಮದಾಬಾದ್ ಕೋರ್ಟ್ ಕಳೆದ ಆಗಸ್ಟ್ ತಿಂಗಳಿನಲ್ಲಿ ಶಿಕ್ಷೆ ಪ್ರಕಟಿಸಿತ್ತು

ಮೋದಿ ಸರ್ಕಾರದ ಮಾಜಿ ಸಚಿವೆ(ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ) ಹಾಗೂ ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದರು.

ಮಾಯಾಬೆನ್ ಕೊಡ್ನಾನಿ ಅವರಿಗೆ ಒಟ್ಟಾರೆ 28 ವರ್ಷ ಶಿಕ್ಷೆ ಪ್ರಮಾಣ ಘೋಷಿಸಲಾಗಿದೆ. ಬಾಬು ಬಜರಂಗಿ ಅವರಿಗೆ ಸಾಯುವ ತನಕ ಜೈಲಿನಲ್ಲಿರುವ ಶಿಕ್ಷೆ ನೀಡಲಾಗಿದೆ. ಉಳಿದ ಆರೋಪಿಗಳಿಗೆ (10 +21) 31 ವರ್ಷ ಶಿಕ್ಷೆ ಪ್ರಮಾಣ ನೀಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಪ್ತೆ ಎನ್ನಲಾದ ಕೊಡ್ನಾನಿ ಅವರಿಗೆ ಐಪಿಸಿಯ ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಶಿಕ್ಷೆ ಪ್ರಮಾಣ ವಿಂಗಡಿಸಲಾಗಿದೆ. ಸೆಕ್ಷನ್ 326 ಅಡಿಯಲ್ಲಿ 10 ವರ್ಷ ಹಾಗೂ 120(B), 302 ಹಾಗೂ 307 ಅಡಿಯಲ್ಲಿ 18 ವರ್ಷ ಶಿಕ್ಷೆ ನೀಡಲಾಗಿದೆ.

English summary
Terming as 'a deadly attack on Hindus', the Gujarat government's nod for seeking death penalty for former BJP minister Maya Kodnani and nine others in the 2002 Naroda Patiya massacre case, Shiv Sena said Hindus have different expectations from Chief Minister Narendra Modi .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X