ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
CONG1120
BJP1080
BSP30
OTH00
ರಾಜಸ್ಥಾನ - 199
PartyLW
CONG970
BJP780
BSP40
OTH200
ಛತ್ತೀಸ್ ಗಢ - 90
PartyLW
CONG640
BJP180
BSP+60
OTH20
ತೆಲಂಗಾಣ - 119
PartyLW
TRS861
TDP, CONG+210
AIMIM41
OTH60
ಮಿಜೋರಾಂ - 40
PartyLW
MNF168
CONG70
IND61
OTH20
 • search

ಪ್ರಿಯಕರನಿಗಾಗಿ ಹೆತ್ತ ಮಗು ಬಲಿ ಕೊಟ್ಟ ತಾಯಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Mother, paramour kill her 8-year-old boy
  ಬೆಂಗಳೂರು, ಏ.21: ಪ್ರೀತಿ ಮಾಯೆಯೋ, ಕುರುಡೋ ಗೊತ್ತಿಲ್ಲ. ಇಲ್ಲೊಬ್ಬಳು ತಾಯಿ ತನ್ನ ಪ್ರಿಯಕರನಿಗಾಗಿ ತನ್ನ ಮಗುವನ್ನೇ ಬಲಿ ಕೊಟ್ಟಿದ್ದಾಳೆ. ಪದೇ ಪದೇ ಮನೆಗೆ ಬರುತ್ತಿದ್ದ ಕಾರಣ ಅಂಕಲ್ ಯಾರು ಎಂದು ಪ್ರಶ್ನಿಸುತ್ತಿದ್ದ ಕರುಳ ಕುಡಿಯನ್ನೇ ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿದ ದಾರುಣ ಘಟನೆ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ರಮೇಶ್ ಕಾಶಿನಾಥ್(8) ಎಂಬ ಬಾಲಕನನ್ನು ತಾಯಿಯ ಕಣ್ಮುಂದೆಯೇ ಆಕೆ ಪ್ರಿಯಕರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ತಾಯಿ ತನ್ನ ಮಗುವಿನ ಮೃತದೇಹವನ್ನು ರಾತ್ರೋರಾತ್ರಿ ಹೂತು ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾಳೆ. ಈ ಘಟನೆ ಬಗ್ಗೆ ನಿನ್ನೆ ವಿವರ ತಿಳಿದ ರಾಜಾನುಕುಂಟೆ ಅದ್ದೆ ವಿಶ್ವನಾಥಪುರ ಗ್ರಾಮಸ್ಥರು ಬೆಚ್ಚು ಬಿದ್ದಿದ್ದಾರೆ.

  ಪುತ್ರನನ್ನೇ ಹತ್ಯೆ ಮಾಡಿದ ಅಂಬಿಕಾ ಕಾಶಿನಾಥ್‌ಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ಪ್ರಿಯಕರ ಸರವಣ ನಾಪತ್ತೆಯಾಗಿದ್ದಾನೆ. ಅಂಬಿಕಾಳ ಪತಿ ಕಾಶಿನಾಥ್ 2 ವರ್ಷದ ಹಿಂದೆ ಮೃತಪಟ್ಟಿದ್ದರು. ಅವರ ಸಾವಿನ ನಂತರ ಅಂಬಿಕಾ ಹಾಗೂ ಸರವಣ ನಡುವೆ ಸ್ನೇಹ, ಪ್ರೇಮ ಹುಟ್ಟಿಕೊಂಡಿತ್ತು. ಸರವಣ ಬಹುತೇಕ ಅಂಬಿಕಾ ಮನೆಯಲ್ಲೇ ಇರುತ್ತಿದ್ದ. ಈ ಮಧ್ಯೆ ಅಪರಿಚಿತನ ಬಗ್ಗೆ ಪುತ್ರ ರಮೇಶ್ ಸಂಶಯ ಬಂದು ಪ್ರಶ್ನಿಸಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ತಾಯಿಯ ಬಳಿ ಪದೇ ಪದೇ ಪ್ರಶ್ನಿಸುತ್ತಿದ್ದ.

  ಬಾಲಕ ರಮೇಶ್ ಮತ್ತೆ ಸರವಣನ ಮುಂದೆ ತಾಯಿ ಅಂಬಿಕಾ ಬಳಿ ಪ್ರಶ್ನೆ ಕೇಳಿದ. ಇದರಿಂದ ಕೆರಳಿದ ಸರವಣ ಬಾಲಕನನನ್ನು ಚೆನ್ನಾಗಿ ಥಳಿಸಿದ. ಇದರಿಂದ ಬಾಲಕ ರಮೇಶ್ ಪ್ರಜ್ಞೆ ಕಳೆದುಕೊಂಡ. ಬಳಿಕ ಇಬ್ಬರೂ ಸೇರಿ ಬಾಲಕನ್ನು ನೇಣಿಗೆ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಬಾಲಕನ ತಲೆ ಚೆಚ್ಚಿ ಹಾಕಲಾಗಿದೆ. ಶವ ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

  ಗುಲ್ಬರ್ಗಾದ ಚಂದನಕೆರೆ ಮೂಲದ ಅಂಬಿಕಾ ಅವರು ತನ್ನೂರಿನ ಕಾಶಿನಾಥ್ ಎಂಬಾತನನ್ನು ಮದೆಯಾಗಿದ್ದಳು. ಕಾಶಿನಾಥ್ ಮದ್ಯ ವ್ಯಸನಿಯಾಗಿದ್ದ ಕಾರಣ ಆತನನ್ನು ತೊರೆದು ಆನಂದ್ ಅಲಿಯಾಸ್ ಶರಣಪ್ಪ ಜೊತೆ ಸಾಂಗತ್ಯ ಬೆಳೆಸಿಕೊಂಡಿದ್ದಳು. ಗಂಡನನ್ನು ತೊರೆದು ಮಕ್ಕಳಾದ 8 ವರ್ಷದ ರಮೇಶ್ ಹಾಗೂ 6 ವರ್ಷದ ಲಕ್ಷ್ಮಿ ಇಬ್ಬರು ಮಕ್ಕಳೊಂದಿಗೆ ಬೆಂಗಳೂರು ಸೇರಿದ ಅಂಬಿಕಾ ತನ್ನ ಚಾಳಿ ಮುಂದುವರೆಸಿದ್ದಳು.

  ಯಲಹಂಕ ಸಮೀಪದ ಕಟ್ಟಡವೊಂದರಲ್ಲಿ ತಾತ್ಕಾಲಿಕ ಶೆಡ್ ನಲ್ಲಿ ವಾಸವಿದ್ದ ಅಂಬಿಕಾ ಜೊತೆ ಆನಂದ್ ಪರಿಚಯ ಇನ್ನಷ್ಟು ಗಟ್ಟಿಯಾಯಿತು. ನಂತರ ಆನಂದ್ ಮೇಲೆ ಬಾಲಕ ರಮೇಶ್ ಗೆ ಅನುಮಾನ ಶುರುವಾಯಿತು ಕೊನೆಗೆ ಅನುಮಾನ ಆತನ ಪ್ರಾಣಕ್ಕೆ ಎರವಾಯಿತು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A widow and her paramour are suspected to have killed her 8-year-old son Ramesh Kashinath after he reportedly asked about their relationship in Rajanukunte, off Doddaballapur main road, Bangalore Rural district

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more