• search

ಮೊಬೈಲ್ ಸಂದೇಶ ಬಂದ್ರೆ ತಕ್ಷಣ ದೂರು ಕೊಡಿ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    BBMP commissioner appeal to Voters
    ಬೆಂಗಳೂರು, ಏ.21: ಈ ಬಾರಿ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳು ವಿವಿಧ ತಂತ್ರಜ್ಞಾನ ಬಳಸುತ್ತಿದ್ದಾರೆ. ಮೊಬೈಲ್ ಗಳಿಗೆ ಮತಯಾಚನೆಯ ಸಂದೇಶ ಕಳಿಸಿ ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ, ಅಂಥ ಸಂದೇಶಗಳು ನಿಮಗೆ ಕಿರಿಕಿರಿಯಾದರೆ ಚುನಾವಣಾ ಕಚೇರಿಗೆ ತಕ್ಷಣವೇ ದೂರು ನೀಡಬಹುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದ್ದಾರೆ.

    ಚುನಾವಣಾ ಪ್ರಚಾರಕ್ಕಾಗಿ ಕೆಲವು ಅಭ್ಯರ್ಥಿಗಳು ಮೊಬೈಲ್ ಗಳಿಗೆ ಅನಧಿಕೃತವಾಗಿ ಮತಯಾಚನೆಯ ಸಂದೇಶಗಳನ್ನು ರವಾನಿಸುತ್ತಿರುವುದು ಕಂಡುಬಂದಿದೆ. ಚುನಾವಣಾ ಕಚೇರಿಯ ಅನುಮತಿ ಪಡೆಯದೇ ಮತದಾರರ ಮೊಬೈಲ್ ಗಳಿಗೆ ಚುನಾವಣಾ ಸಂದೇಶ ರವಾನಿಸುವುದು ಕಾನೂನು ಬಾಹಿರವಾಗಿರುತ್ತದೆ.

    ಇಂಥ ಸಂದೇಶಗಳು ಸಾರ್ವಜನಿಕರಿಗೆ ಬಂದಲ್ಲಿ ದಯಮಾಡಿ ಈ ಬಗ್ಗೆ ಮಾಹಿತಿಗಳನ್ನು ರಾಜ್ಯ ಚುನಾವಣಾ ಕಚೇರಿ ಅಥವಾ ಬೆಂಗಳೂರಿನ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತರಬಹುದು ಎಂದು ಸಿದ್ದಯ್ಯ ಹೇಳಿದರು.

    ದೂರು ನೀಡಲು ಹೆಚ್ಚಿನ ವಿವರಗಳು ಬೇಕಿದ್ದರೆ, ರಾಜ್ಯ ಚುನಾವಣಾ ಕಚೇರಿಯ ಉಚಿತ ಸಹಾಯವಾಣಿ: 1950 ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಚೇರಿಯಲ್ಲಿರುವ ಚುನಾವಣಾ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆಗಳಾದ 080-22270143 ಹಾಗೂ 080-22270148 ಗಳಿಗೆ ಕರೆ ಮಾಡಿ ತಿಳಿಸಲು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ.

    ಬಿಬಿಎಂಪಿ ಮನವಿ: ಯಾವುದೇ ತರಹದ ನಗದು, ಮದ್ಯ, ಉಡುಗೊರೆ ವಸ್ತುಗಳು ಅಥವಾ ಉಚಿತ ಆಹಾರ ಸಾಮಾಗ್ರಿಗಳನ್ನು ಚುನಾವಣಾ ಸಮಯದಲ್ಲಿ ಮತದಾರರಿಗೆ ನೀಡುವುದು ಲಂಚವೆನ್ನಿಸಿಕೊಳ್ಳುವುದು. ಲಂಚ ನೀಡುವ ಮತ್ತು ಸ್ವೀಕರಿಸುವ ವ್ಯಕ್ತಿಗಳೆಲ್ಲರೂ ಒಂದು ವರ್ಷದ ಶಿಕ್ಷೆಗೆ ಒಳಪಡುವರು ಹಾಗೂ ದಂಡ ಪಾವತಿಸಬೇಕಾಗುತ್ತದೆ.

    ಫ್ಲೈಯಿಂಗ್ ಸ್ಕ್ವಾಡ್ ಗಳು ಮತ್ತು ವಿ‌ಚಕ್ಷಣಾ ತಂಡಗಳು ಇಂಥ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಓಲೈಕೆಗಾಗಿ ನೀಡುವ ಇಂಥ ಉಡುಗೊರೆಗಳ ಮೇಲೆ ಕಟ್ಟೆಚ್ಚರ ವಹಿಸಲಿದೆ.

    ಈ ರೀತಿ ಲಂಚ ಪ್ರಕರಣಗಳು ಕಂಡು ಬಂದರೆ ತಕ್ಷಣವೇ ದೂರು ಮೇಲ್ವಿಚರಣಾ ನಿಯಂತ್ರಣ ಕೊಠಡಿಗೆ ಮೇಲ್ಕಂಡ ಉಚಿತ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    BBMP commissioner Siddaiah has appealed Bangalore voters not to take any cash, jewels, gifts, free food items from assembly candidates as it will be treated as bribe and punishable. if any candidate try to please Voters through mobile sms that can also be reported to BBMP office or DC

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more