ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಾಣಿ ವಿರುದ್ಧ ಅಭ್ಯರ್ಥಿಯನ್ನೇ ನಿಲ್ಲಿಸದ ಕೆಜೆಪಿ

|
Google Oneindia Kannada News

Murugesh Nirani.
ಬಾಗಲಕೋಟೆ, ಏ. 19 : ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜೊತೆಗೆ ಬರುವುದಾಗಿ ಹೇಳಿ, ಕೊನೆಯ ಕ್ಷಣದಲ್ಲಿ ಕೈ ಕೊಟ್ಟ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೇಲೆ ಯಡಿಯೂರಪ್ಪ ಕೋಪ ಮಾಡಿಕೊಂಡಿದ್ದಾರೆ ಎಂದರೆ ತಪ್ಪು. ಮುರುಗೇಶ್ ನಿರಾಣಿ ಎದುರು ಕೆಜೆಪಿ ಅಭ್ಯರ್ಥಿಗಳನ್ನೆ ಕಣಕ್ಕಿಳಿಸದೆ ಪಕ್ಷ ಹೊಸ ತಂತ್ರ ರೂಪಿಸಿದೆ.

ಬಾಲಗಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಕೆಜೆಪಿ ಹೋಗುವ ಶಾಸಕರ ಪಟ್ಟಿಯ ಮೊದಲ ಸ್ಥಾನದಲ್ಲಿದ್ದ ನಿರಾಣಿ ಕೊನೆಗೂ ತಮ್ಮ ನಿರ್ಧಾರ ಬದಲಿಸಿ, ಬಿಜೆಪಿಯಲ್ಲೇ ಉಳಿದಿದ್ದರು.

ಕೊನೆ ಕ್ಷಣದಲ್ಲಿ ತಮಗೆ ಕೈ ಕೊಟ್ಟ ಬೆಂಬಲಿಗನ ವಿರುದ್ಧ ಸಿಟ್ಟಾದಗೇ ಯಡಿಯೂರಪ್ಪ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಅನುಮಾನ ಪ್ರಾರಂಭವಾಗಿದೆ. ಮುರುಗೇಶ್ ನಿರಾಣಿ ವಿರುದ್ಧ ಕೆಜೆಪಿ ಅಭ್ಯರ್ಥಿಯನ್ನೆ ಕಣಕ್ಕಳಿಸದೇ ಯಡಿಯೂರಪ್ಪ ಬೆಂಬಲಿಗೆ ಬೆನ್ನು ತಟ್ಟಿದ್ದಾರೆ.

ಕೆಜೆಪಿ ಅಂತಿಮ ಪಟ್ಟಿ ಬಿಡುಗಡೆಗೊಂಡಾಗ ಬೀಳಗಿ ಕ್ಷೇತ್ರದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಅಂಗಡಿ ಅವರನ್ನು ಘೋಷಿಸಿ ಬಿ ಫಾರ್ಮ್ ನೀಡಲಾಗಿತ್ತು. ಆದರೆ, ಅನಾರೋಗ್ಯದ ಕಾರಣ ಅಂಗಡಿ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾದವರು ನಾಮಪತ್ರ ಸಲ್ಲಿಸಸಿಲ್ಲ. (ಕೆಜೆಪಿ ಅಂತಿಮ ಪಟ್ಟಿ)

ಬಾಗಲಕೋಟೆಯ ಕುತ್ಬುದ್ದೀನ್ ಖಾಜಿ ತಾವು ಕೆಜೆಪಿ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದರು. ಆದರೆ. ಬಿ ಫಾರ್ಮ್ ಇಲ್ಲದ ಕಾರಣ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದಾಗಿ ಬೀಳಗಿ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಗಳೇ ಇಲ್ಲದಂತಾಗಿದೆ.

ಮುರುಗೇಶ್ ನಿರಾಣಿ ಎದುರು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಯಡಿಯೂರಪ್ಪ ಪಾಠ ಕಲಿಸುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕಟ್ಟಾ ಶಿಷ್ಯನ ವಿರುದ್ಧ ಅಭ್ಯರ್ಥಿಯನ್ನು ನಿಲ್ಲಿಸದೇ ಯಡಿಯೂರಪ್ಪ ಪರೋಕ್ಷವಾಗಿ ನಿರಾಣಿಗೆ ಬೆಂಬಲ ಸೂಚಿಸಿದ್ದಾರೆ.

ಚುನಾವಣೆ ಬಹಿಷ್ಕಾರ ಬೆದರಿಕೆ : ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಜನರು ಎಚ್ಚರಿಗೆ ನೀಡಿದ್ದಾರೆ. ಕಳೆದ 9 ತಿಂಗಳ ಹಿಂದೆ ತಾಲೂಕಿನ ಪಿ.ಎಂ ಬುದ್ನಿ ಗ್ರಾಮದ ನಿವಾಸಿ ಭೂಸೇನಾ ಯೋಧ ಅಶೋಕ ಹನಮಂತ ಬಡಕಲಿ (28)ಯನ್ನು ಕಾಣೆಯಾಗಿದ್ದಾನೆ.

ಆದರೆ, ಇದುವರೆಗೂ ಅವರ ಪತ್ತೆಯಾಗಿಲ್ಲ. ಯೋಧನನ್ನು ಹುಡುಕಿ ಕೊಡುವಂತೆ ತಹಸೀಲ್ದಾರ್, ಜಿಲ್ಲಾಧಿಕಾರಿ, ರಾಜ್ಯಪಾಲ ಮತ್ತು ರಾಷ್ಟ್ರಪತಿ ಅವರಿಗೆ ಸಲ್ಲಿಸಿದ ಮನವಿಗೆ ಯಾರು ಸ್ಪಂದಿಸಿಲ್ಲ ಆದ್ದರಿಂದ ಚುಣಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ತಾಲೂಕಿನ ಜನರು ತಹಸೀಲ್ದಾರಿಗೆ ಗುರುವಾರ ಪತ್ರದ ಮೂಲಕ ತಿಳಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
KJP has not announced candidate in Bilagi constituency opposite to BJP candidate Murugesh Nirani. Nirani is stay away from KPJ joining dessication last minute. But Yeddyurappa will not put candidate against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X