ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರ್ರಫ್ ಬಂಧನ

|
Google Oneindia Kannada News

Pervez Musharraf
ಇಸ್ಲಾಮಾಬಾದ್, ಏ. 19 : ಬಂಧನ ಭೀತಿಯಿಂದಾಗಿ ಗುರುವಾರ ನ್ಯಾಯಾಲಯದಿಂದ ಓಡಿಹೋಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ‌್ರಫ್ ಅವರನ್ನು ಶುಕ್ರವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.

ಇಸ್ಲಾಮಾಬಾದ್ ನ ತಮ್ಮ ಚಾಕ್ ಶಹ್ಜಾದ್‌ ಫಾರ್ಮ್ ಹೌಸ್ ನಲ್ಲಿ ಅವಿತು ಕುಳಿತಿದ್ದ ಮುಷರ‌್ರಫ್ ಅವರನ್ನು, ಗುರುವಾರ ರಾತ್ರಿಯೇ ಬಂಧಿಸುವ ಸಲುವಾಗಿ ಫಾರ್ಮ್ ಹೌಸ್ ಸುತ್ತುವರೆದಿದ್ದ ಪೊಲೀಸರು, ಶುಕ್ರವಾರ ಬೆಳಗ್ಗೆ ತಮ್ಮ ವಶಕ್ಕೆ ಪಡೆದಿದ್ದಾರೆ.

2007ರಲ್ಲಿ ಹಿರಿಯ ನ್ಯಾಯಾಧೀಶರನ್ನು ಜೈಲಿಗೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಷರ್ರಫ್ ಗೆ ಜಾಮೀನು ನೀಡಲು ಇಸ್ಲಾಮಾಬಾದ್ ಹೈಕೋರ್ಟ್ ಗುರುವಾರ ನಿರಾಕರಿಸಿತ್ತು. ತಕ್ಷಣ ಅವರನ್ನು ಬಂಧಿಸುವಂತೆ ಆದೇಶ ನೀಡಿತ್ತು. ಪಾಕಿಸ್ತಾನ ಸುಪ್ರೀಂ ಕೋರ್ಟ್ ಸಹ ಇವರ ಜಾಮೀನು ಅರ್ಜಿ ವಜಾಗೊಳಿಸಿತ್ತು.

ಬಂಧನದ ಭೀತಿಯಿಂದಾಗಿ ಬೆಂಗಾವಲು ಪಡೆಯೊಂದಿಗೆ ನ್ಯಾಯಾಲಯದ ಹೊರಗೆ ಓಡಿಬಂದು ಮುಷರ್ರಫ್ ಪರಾರಿಯಾಗಿದ್ದರು. ಪೊಲೀಸ್ ಸಿಬ್ಬಂದಿ ನೋಡುತ್ತಿರುವಂತೆ ಇಸ್ಲಾಮಾಬಾದ್‌ ಹೊರವಲಯದ ಚಾಕ್ ಶಹ್ಜಾದ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್ ತಲುಪಿದ್ದರು.

ಓಡಿ ಹೋಗಿಲ್ಲ : ಮುಷರ‌್ರಫ್ ಬಂಧನದ ಭೀತಿಯಿಂದ ಓಡಿ ಹೋಗಿಲ್ಲ ಎಂದು ಮುಷರ‌್ರಫ್ ನೇತೃತ್ವದ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷದ ಕಾರ್ಯದರ್ಶಿ ಮುಹಮದ್ ಅಮ್ಜದ್ ಹೇಳಿದ್ದರು. ಅವರು ಕೋರ್ಟ್‌ನಿಂದ ಪರಾರಿಯಾಗಿಲ್ಲ. ಪಾಕ್ ಸರಕಾರವೇ ಅವರಿಗೆ ರಕ್ಷಣೆ ನೀಡಿ ಫಾರ್ಮ್‌ಹೌಸ್‌ಗೆ ತಲುಪಿಸಿದೆ ಎಂದು ತಿಳಿಸಿದ್ದರು.

ಪ್ರಕರಣದವೇನು : 2007ರಲ್ಲಿ ಪಾಕಿಸ್ತಾನ ಮೇಲೆ ತುರ್ತು ಪರಿಸ್ಥಿತಿ ಹೇರಿದ ಬಳಿಕ ತಮ್ಮ ಆದೇಶದ ಅನ್ವಯ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮುಹಮದ್ ಚೌಧರಿ ಸೇರಿದಂತೆ 60 ನ್ಯಾಯಾಧೀಶರನ್ನು ಮುಷರ‌್ರಫ್ ವಜಾಗೊಳಿಸಿ ಜೈಲಿಗೆ ಕಳುಹಿಸಿದ್ದರು.

ಈ ಬಗ್ಗೆ 2009ರ ಆ.11ರಂದು ಮುಷರ‌್ರಫ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನ್ಯಾಯಾಲಯಕ್ಕೆ ಆಗಮಿಸಿ ವಿವರಣೆ ನೀಡುವಂತೆ ಆದೇಶಿಸಿದ್ದ ನ್ಯಾಯಾಲದ ಸೂಚನೆಯನ್ನು ಮುಷರ‌್ರಫ್ ಲಘುವಾಗಿ ಪರಿಗಣಿಸಿದ್ದರು.

ಆದ್ದರಿಂದ ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಸ್ವಯಂ ಗಡಿಪಾರಿಗೆ ಒಳಗಾಗಿದ್ದ ಮುಷರ್ರಫ್ ಮೇ 11ರಂದು ಪಾಕ್ ಚುನಾವಣೆ ಇರುವುದರಿಂದ ಇತ್ತೀಚೆಗೆ ಪಾಕಿಸ್ತಾನಕ್ಕೆ ಹಿಂದಿರುಗಿದ್ದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Former Pakistani President Pervez Musharraf was arrested from his farmhouse on Friday morning. He was sent to judicial custody. He was later produced in the court of the judicial magistrate. Musharraf had fled a court on Thursday after the latter cancelled his bail and ordered his arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X