ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3: ವಿಪ್ರೋ 1729 ಕೋಟಿ ರು ಲಾಭ

By Mahesh
|
Google Oneindia Kannada News

Wipro's Q4 PAT at Rs 1729 crores; guidance disappoints
ಬೆಂಗಳೂರು, ಏ.19: ವಿಪ್ರೋ ಸಂಸ್ಥೆ ತನ್ನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಮಾರ್ಚ್ 31,2013ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 16.73 ರಂತೆ 1,728.7 ಕೋಟಿ ರು ಗಳಿಸಿದೆ. ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಯ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ 1,480.9 ಕೋಟಿ ರು ನಷ್ಟು ಬಂದಿದೆ.

ಜನವರಿ- ಮಾರ್ಚ್ ತ್ರೈಮಾಸಿಕ 2013ರಲ್ಲಿ ಒಟ್ಟಾರೆ ನಿವ್ವಳ ಆದಾಯದಲ್ಲಿ ಶೇ 13 ರಷ್ಟು ಏರಿಕೆ ಕಂಡಿದ್ದು 9,613.1 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,506.1 ಕೋಟಿ ರು ಗಳಿಸಿತ್ತು ಎಂದು ಬಿಎಸ್ ಇ ಗೆ ಸಂಸ್ಥೆ ಮಾಹಿತಿ ನೀಡಿದೆ.

ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಕೊನೆಯಲಿ ಸಂಸ್ಥೆ ನಿವ್ವಳ ಲಾಭ ಶೇ 19.07 ರಂತೆ 6,635.9 ಕೋಟಿ ಗಳಿಕೆಯಾಗಿದೆ. 2011-12ರಲ್ಲಿ 5,573 ಕೋಟಿ ರು ಗಳಿಕೆಯಾಗಿತ್ತು.

ವಿಪ್ರೋ ಐಟಿ ವಿಭಾಗದಲ್ಲಿ ಮಾರ್ಚ್ 31, 2013ಕ್ಕೆ ಅನ್ವಯವಾಗುವಂತೆ 1,45,812 ಉದ್ಯೋಗಿಗಳಿದ್ದಾರೆ. 2,907 ಹೆಚ್ಚಿನ ಮಂದಿಯನ್ನು ತ್ರೈಮಾಸಿಕದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಸುಮಾರು 52 ಹೊಸ ಗ್ರಾಹಕರನ್ನು ಹೊಂದಲಾಗಿದೆ.

ಡಾಲರ್ ಎಣಿಕೆಯಲ್ಲಿ ವಿಪ್ರೋ ಸಂಸ್ಥೆ ಆದಾಯ 7.95 ಬಿಲಿಯನ್ ಡಾಲರ್ ಬಂದಿದೆ. ನಿವ್ವಳ ಲಾಭ 1.22 ಬಿಲಿಯನ್ ಡಾಲರ್ ನಷ್ಟಿದೆ. ಐಟಿ ಸರ್ವಿಸಸ್ ಆದಾಯ 6.21 ಬಿಲಿಯನ್ ಡಾಲರ್ ಆಗಿದೆ.

ಆದರೆ, ಇನ್ಫೋಸಿಸ್ ಸಂಸ್ಥೆ ಮಾದರಿಯಲ್ಲಿ ಹೊಸ ಆರ್ಥಿಕ ವರ್ಷಕ್ಕೆ ಯಾವುದೇ ಸೂಕ್ತ ಮಾರ್ಗದರ್ಶನ ಒದಗಿಸಲು ವಿಪ್ರೋ ಸಂಸ್ಥೆ ವಿಫಲವಾಗಿರುವುದು ಷೇರುದಾರರಿಗೆ ನಿರಾಶೆ ಮೂಡಿಸಿದೆ.

ಇದೇ ಖುಷಿಯಲ್ಲಿ ದೇಶದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ವಿಪ್ರೋ, ತನ್ನ ಷೇರುದಾರರಿಗೆ ಪ್ರತಿ ಈಕ್ವಿಟಿ ಷೇರುಗಳಿಗೆ 5 ರು ಪ್ರತಿ ಷೇರಿನಂತೆ ಡಿವೆಂಡೆಡ್ ಘೋಷಿಸಿದೆ.

ವಿಪ್ರೋ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ನಿರೀಕ್ಷೆಗೂ ಮೀರಿ ಭರ್ಜರಿ ಇಳುವರಿ ಕಂಡಿತ್ತು. ಜ.18, 2013 ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ QoQ ನಂತೆ ನಿವ್ವಳ ಲಾಭದಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,7616 ಕೋಟಿ ರು ಗಳಿಸಿತ್ತು.

ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಕ್ಕಿದೆ. ಗ್ರಾಹಕರು ಹಾಗೂ ಉದ್ಯೋಗಿಗಳ ನಡುವೆ ನಿರಂತರ ಸಂಪರ್ಕ ಈ ಸಾಧನೆಗೆ ಪೂರಕವಾಗಿದೆ. ಕ್ಲೌಡ್, ಮೊಬಿಲಿಟಿ, ಅನಾಲಿಟಿಕ್ಸ್ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮುಂದುವರೆಯಲಿದೆ ಎಂದು ವಿಪ್ರೋ ಸಂಸ್ಥೆಯ ಸಿಎಫ್ ಒ ಸುರೇಶ್ ಸೇನಾಪತಿ ಹೇಳಿದ್ದಾರೆ.

English summary
Wipro has reported revenues and net profits marginally below expectations for Q4 2013. While net profits were placed at Rs 1729 crores, the total revenues for Q4FY 2013 has come in at Rs 11,026 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X