ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಫೋಟ: ಗಾಯಾಳುಗಳ ಪೈಕಿ ರಕ್ಷಿತಾ ಸ್ಥಿತಿ ಗಂಭೀರ

By Mahesh
|
Google Oneindia Kannada News

ಬೆಂಗಳೂರು, ಏ.19: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಿನ್ನೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಶೆಟ್ಟರ್ ಅವರು ಭರವಸೆ ನೀಡಿದ್ದಾರೆ.

ಗಾಯಗೊಂಡವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ(ಏ.18) ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಬಾಂಬ್ ಸ್ಪೋಟದಿಂದ ಗಾಯಗೊಂಡವರು ಪ್ರಾಣಾಪಯದಿಂದ ಪಾರಾಗಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಸ್ಫೋಟದಿಂದ ಜಖಂಗೊಂಡ ವಾಹನ, ಮನೆ ಹಾಗೂ ಅಂಗಡಿಗಳ ಮಾಲೀಕರಿಗೂ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ರಕ್ಷಿತಾ ಸ್ಥಿತಿ ಗಂಭೀರ: ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ರಕ್ಷಿತಾ ಸ್ಥಿತಿ ಬಿಗಡಾಯಿಸಿದೆ. ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ , ಅರಮನೆ ನಗರ ಬಿಬಿಎಂಪಿ ಸದಸ್ಯ ಡಾ. ಶಿವಪ್ರಸಾದ್ ಅವರು ರಕ್ಷಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುವುದರಿಂದ ಸ್ಥಿತಿ ಬಿಗಡಾಯಿಸಿದೆ ಎಂದಿದ್ದಾರೆ.

ಆದರೂ ಸೂಕ್ತ ಚಿಕಿತ್ಸೆ ನೀಡುವ ಮೂಲಕ ನೀರನ್ನು ಹೊರಗೆ ತೆಗೆಯಬಹುದಾಗಿದೆ. ರಕ್ಷಿತಾ ಪರಿಸ್ಥಿತಿ ಗಂಭೀರವಾಗಿದ್ದರೂ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿ ಲಿಷಾಗೆ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಸಿ.ಜನರಲ್ ಆಸ್ಪತ್ರೆಯಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಮತ್ತಿಬ್ಬರ ಕಿವಿಯ ತಮಟೆಗೆ ಹಾನಿಯಾಗಿದ್ದು, ಸದ್ಯ ಅವರಿಗೆ ಕೇಳಿಸುತ್ತಿಲ್ಲ. ಹಂತ ಹಂತವಾಗಿ ಚಿಕಿತ್ಸೆ ನೀಡುವ ಮೂಲಕ ಕಿವಿಯ ಸಮಸ್ಯೆಯಿಂದ ಗುಣಮುಖವಾಗಲಿದ್ದಾರೆ. ಈ ಸಂಬಂಧ ಅವರಿಗೆ ಸೂಕ್ತ ಚಿಕತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನುಳಿದ ಗಾಯಾಳುಗಳು ಚೇತರಿಸಿಕೊಂಡಿದ್ದಾರೆಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಕೆಸಿ ಜನರಲ್ ಆಸ್ಪತ್ರೆ, ವಿಠಲ್ ಮಲ್ಯ ಹಾಗೂ ನಿಮ್ಹಾನ್ಸ್ ನಲ್ಲಿ ದಾಖಲಾಗಿರುವ ಎಲ್ಲಾ ಸ್ಫೋಟ ಸಂತ್ರಸ್ಥ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಭರವಸೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ.

ಗಾಯಗೊಂಡವರು: ಮೇಲ್ನೊಟಕ್ಕೆ ಕೆಎಸ್ ಆರ್ಪಿ ಪೊಲೀಸರೇ ಟಾರ್ಗೆಟ್ ಎನ್ನಬಹುದು ಸುಮಾರು 8 ಜನ ಪೊಲೀಸರು ಸೇರಿದಂತೆ 19 ಮಂದಿ ಗಾಯಗೊಂಡಿದ್ದಾರೆ. ರಾಮೇಗೌಡ, ವೆಂಕಟಪ್ಪ, ವಿಶ್ವೇಶ್ವರಯ್ಯ, ನಾಗರಾಜ್, ನಾಗೇಶ್ವರ್, ರಂಜಿತಾ, ಜೇಡ್ರಪ್ಪ ಗಾಯಗೊಂಡಿರುವ ಪೊಲೀಸರು. ಗಾಯಗೊಂಡವರಲ್ಲಿ ಮೂವರಿಗೆ ಕಿವಿ ಕೇಳಿಸುತ್ತಿಲ್ಲ. ನಿಷಾ ಹಾಗೂ ರಕ್ಷಿತಾ ಎಂಬ ವಿದ್ಯಾರ್ಥಿನಿಯರು ಸಿಇಟಿ ಪರೀಕ್ಷೆ ಟ್ಯೂಷನ್ ಗೆ ತೆರಳುತ್ತಿದ್ದವರು ಸ್ಫೋಟಕ್ಕೆ ಸಿಲುಕಿದ್ದಾರೆ. ಉಳಿದಂತೆ ಬಾಲಕೃಷ್ಣ, ಸದೀನ್ ಷಾ ಎಂಬುವರು ಕೂಡಾ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
A bomb exploded near the BJP's office in Bangalore this morning, injuring 19 people, including 11 policemen and two teen girls. Karnataka government is giving free medical assistance to all the victims admitted in KC General Hospital, Nimhans and Vittal Mallya hospital said Chief Minister Jagadish Shettar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X