ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q3: ಎಚ್ ಸಿಎಲ್ ಶೇ72.6 ರಷ್ಟು ಲಾಭ ಜಿಗಿತ

By Mahesh
|
Google Oneindia Kannada News

HCL Tech reports strong Q3 FY 2013 numbers; PAT up 72.6%
ಬೆಂಗಳೂರು, ಏ.17: ನೋಯ್ಡಾ ಮೂಲದ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ಸತತವಾಗಿ ಬದ್ಧವೈರಿ ಇನ್ಫೋಸಿಸ್ ಗೆ ಟಾಂಗ್ ನೀಡಿದೆ. ಬುಧವಾರ (ಏ.17) ಪ್ರಕಟಿಸಲಾದ ಮೂರನೇ ತ್ರೈಮಾಸಿಕ ವರದಿಯಂತೆ ನಿವ್ವಳ ಆದಾಯ ಶೇ 72.6 ರಷ್ಟು ಏರಿಕೆ ಕಂಡು 1,040 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 7.8 ರಷ್ಟು ಅಧಿಕ ಲಾಭ ಬಂದಿದೆ.

ಮಾರ್ಚ್ 31,2013ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ವರ್ಷದಿಂದ ವರ್ಷಕ್ಕೆ ಶೇ 23.2 ರಂತೆ 6,425 ಕೋಟಿ ರು ಗಳಿಕೆಯಾಗಿದೆ. EBIT ವರ್ಷದಿಂದ ವರ್ಷಕ್ಕೆ ಶೇ 56 ರಷ್ಟು ಏರಿಕೆ ಕಂಡು 1,276 ಕೋಟಿ ರು ಬಂದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ2.5 ರಷ್ಟು ಏರಿಕೆಯಾಗಿದೆ.

ಇದೇ ಖುಷಿಯಲ್ಲಿ ಸಂಸ್ಥೆ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 2 ರು ನಂತೆ ಡಿವಿಡೆಂಡ್ ಘೋಷಿಸಿದೆ. ಸತತ 41 ತ್ರೈಮಾಸಿಕ ಡಿವಿಡೆಂಡ್ ನೀಡಿಕೆ ಮೂಲಕ ಅದ್ಭುತ ದಾಖಲೆ ನಿರ್ಮಿಸಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಕೇಕಿ ಮಿಸ್ತ್ರಿ ಅವರನ್ನು ಸ್ವತಂತ್ರ ನಿರ್ದೇಶಕರಾಗಿ ಬೋರ್ಡ್ ಗೆ ಸೇರಿಸಿಕೊಳ್ಳಲಾಗಿದೆ.

ಕಳೆದ ತ್ರೈಮಾಸಿಕದಲ್ಲಿ ಆನಂದ್ ಗುಪ್ತ ಅವರಿಗೆ ಬಡ್ತಿ ನೀಡಿ, ಕಂಪನಿಯ ನೂತನ ಸಿಇಒ ಎಂದು ಘೋಷಿಸಲಾಗಿದೆ. ವಿನೀತ್ ನಾಯರ್ ಅವರು ಕಂಪನಿಯ ಉಪಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಎಚ್ ಸಿಎಲ್ ಪ್ರಕಟಿಸಿತ್ತು.

ತ್ರೈಮಾಸಿಕ ವರದಿ ಪ್ರಕಟವಾಗುತ್ತಿದ್ದಂತೆ ಬಿಎಸ್ ಇನಲ್ಲಿ ಬುಧವಾರ ಕಂಪನಿಯ ಷೇರುಗಳು ಉತ್ತಮ ಆರಂಭ ಪಡೆಯಿತು. ಕಳೆದ 52 ವಾರಗಳಿಗೆ ಹೋಲಿಸಿದರೆ ಅಧಿಕ ಲಾಭ ಗಳಿಕೆಯತ್ತ ಷೇರುಗಳು ಮುನ್ನುಗ್ಗುತ್ತಿತ್ತು. ಆದರೆ, ಮಧ್ಯಾಹ್ನ 3.30ರ ವೇಳೆಗೆ ಬಿಎಸ್ ಇನಲ್ಲಿ 753.00 ರು ನಂತೆ ಶೇ 1.27 ರಷ್ಟು ಕುಸಿತ ಕಂಡಿದ್ದರೆ, ಎನ್ ಎಸ್ ಇನಲ್ಲಿ 753.45 ರು ನಂತೆ ಶೇ 1.23ರಷ್ಟು ಇಳಿಕೆಯಾಗಿದೆ.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಆರ್ಥಿಕ ವರ್ಷ ಜೂನ್ 30ಕ್ಕೆ ಕೊನೆಗೊಳ್ಳುತ್ತದೆ. ಕಳೆದ ತ್ರೈಮಾಸಿಕದಲ್ಲಿ ಟಾಪ್ ಮೂರು ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ತ್ರೈಮಾಸಿಕ ಗಳಿಕೆಯನ್ನು ಮೀರಿಸಿ ಬೆಳೆದಿದೆ

Xerox ಕಾರ್ಪೊರೇಷನ್ ಹಾಗೂ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ Inc ನಂಥ ಗ್ರಾಹಕರನ್ನು ಹೊಂದಿರುವ ಎಚ್ ಸಿಎಲ್ ಗೆ ಇನ್ಫೋಸಿಸ್ ಸಂಸ್ಥೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 100 ಬಿಲಿಯನ್ ಡಾಲರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಇನ್ಫೋಸಿಸ್ ನ back office ಸೇವಾ ವಿಭಾಗದ ಆದಾಯ ಮುಖ್ಯವಾಗಿ ಅಮೆರಿಕ ಹಾಗೂ ಯುರೋಪ್ ಕ್ಲೈಂಟ್ ಗಳ ಮೇಲೆ ಅವಲಂಬಿತವಾಗಿದೆ.

English summary
The country’s fourth largest software services company HCL Technologies Ltd has beat market expectations to announce a 73 per cent rise in quarterly profit. HCL Tech has reported a strong set of numbers for Q3 FY 2013 with net profit surging to Rs 1040 crores, up 72.6 per cent year-on-year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X