ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಪಕ್ಷದ್ದೇ ಸಮೀಕ್ಷೆ ಏನ್ ಹೇಳ್ತಿದೆ ಗೊತ್ತಾ?

By Srinath
|
Google Oneindia Kannada News

ಬೆಂಗಳೂರು, ಏ. 16: ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಕಥೆ ಮುಗಿಯಿತಾ? ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಕೊಚ್ಚಿ ಹೋಯ್ತಾ? ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಕ್ಕೆ ಅಭ್ಯರ್ಥಿಗಳೇ ಸಿಗುತ್ತಿಲ್ಲವಾಗಿ ಪಕ್ಷ ಚುನಾವಣೆಗೂ ಮುನ್ನವೇ ಸೋತು ಹೋಗಿದೆಯಾ? ಹಾಗಾದರೆ ಮುಂದೇನು? ಮುಂದೆ ಯಾರು ರಾಜ್ಯವನ್ನು ಆಳುತ್ತಾರೆ? ಅಥವಾ hungನರಮನೆ ನೇತಾಡಲಿದೆಯಾ?

ಈ ಪ್ರಶ್ನೆಗಳಿಗೆಲ್ಲ ಉತ್ತರರೂಪವಾಗಿ ಬಿಜೆಪಿ ರಾಷ್ಟ್ರೀಯ ವರಿಷ್ಠರ ಪರವಾಗಿ ನಡೆಸಿರುವ ಸಮೀಕ್ಷೆಯನ್ನು ಆಧರಿಸಿ ಹೇಳುವುದಾದರೆ ಕೊನೆಯ ಪ್ರಶ್ನೆಗೆ ಹೌದು ಎಂಬ ಉತ್ತರ ಹೊರಬಿದ್ದಿದೆ. ಈ ಕ್ಷಣದ ಮತದಾರನ ಮೂಡ್ ಅನ್ನು ಆಧರಿಸಿ ಹೇಳುವುದಾದರೆ ಕರ್ನಾಟಕ ಹಂಗಿನರಮನೆಯಲ್ಲಿ ಓಲಾಡಲಿದೆ. ಅಂದರೆ ಬಿಜೆಪಿ ಮತ್ತು ಕಾಂಗ್ರೆಸ್ ಸಮ-ಸಮ ಪ್ರದರ್ಶನ ನೀಡಲಿದೆ.

ಇದನ್ನು ಆಧರಿಸಿಯೇ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಆಂಗ್ಲ ಪತ್ರಿಕೆಗೆ ಹೀಗೆ ಹೇಳಿದ್ದಾರೆ: ನಾನು ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ಬಗ್ಗೆ ಜನರ ಅಭಿಪ್ರಾಯ ಬದಲಾಗಿದೆ. ಆಡಳಿತ ಪರಿಸ್ಥಿತಿ ಸುಧಾರಿಸಿದೆ. ನೋಡ್ತಿರಿ ನಾವು 130 ಸ್ಥಾನ ಗೆಲ್ಲುತ್ತೇವೆ ಎಂದು ಶೆಟ್ಟರ್ ಅತ್ಯುತ್ಸಾಹ ತೋರಿದ್ದಾರೆ. ಆದರೆ ಸಮೀಕ್ಷೆ ಹೇಳುವುದೇ ಬೇರೆ ಕಥೆಯನ್ನು.

ಕುತೂಹಲವೆಂದರೆ ಬಿಜೆಪಿ ನಿರ್ದೇಶಿತ ಮುಂಬೈ ಮೂಲದ Prabodhan Research Group ಸಮೀಕ್ಷಾ ವರದಿ ಅತ್ಯಂತ ನಿಖರವಾಗಿದೆಯಂತೆ. ಈ ಹಿಂದೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶವನ್ನೂ ಅತ್ಯಂತ ನಿಖರವಾಗಿ ಮೊದಲೇ ಹೇಳಿತ್ತಂತೆ.

ಜನವರಿ ಮತ್ತು ಮಾರ್ಚ್ ನಡುವಣ ಅವಧಿಯಲ್ಲಿ ಮಧ್ಯಮ ಮತ್ತು ಕೆಳವರ್ಗಕ್ಕೆ ಸೇರಿದ 80 ಸಾವಿರ ಮತದಾರರನ್ನು ಸಮೀಕ್ಷಿಸುವುದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 350 ಮತದಾರರನನ್ನು ಮಾತನಾಡಿಸಿ ಈ ಸಮೀಕ್ಷೆ ನಡೆಸಲಾಗಿದೆ.
Prabodhan Research Group ಸಮೀಕ್ಷಾ ಫಲಿತಾಂಶ ಹೀಗಿದೆ:

ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸೀಟು?

ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸೀಟು?

95

ಬಿಜೆಪಿ ಪಾಲು ಎಷ್ಟು?

ಬಿಜೆಪಿ ಪಾಲು ಎಷ್ಟು?

ಬಿಜೆಪಿಗೆ81 ಸ್ಥಾನಗಳಷ್ಟೇ . ಇನ್ನು ಕರ್ನಾಟಕ ಬಿಜೆಪಿ ಕೈಗೊಂಡಿದ್ದ ಆಂತರಿಕ ಸಮೀಕ್ಷೆ ಪ್ರಕಾರ ಪಕ್ಷಕ್ಕೆ 60 ಸೀಟು ಬಂದರೆ ಅದೇ ಪುಣ್ಯ! ಬಿಜೆಪಿಯ ಮತಗಳನ್ನು ಕೆಜೆಪಿ ಛಿದ್ರಗೊಳಿಸುವುದೇ ಇದಕ್ಕೆ ಕಾರಣವಾಗಲಿದೆಯಂತೆ.

ಜೆಡಿಎಸ್ ಗೆ ಎಷ್ಟು?

ಜೆಡಿಎಸ್ ಗೆ ಎಷ್ಟು?

ಜೆಡಿಎಸ್ ಪಕ್ಷಕ್ಕೆ 27 ಸ್ಥಾನ.

ಯಡಿಯೂರಪ್ನೋರ ಕೆಜೆಪಿಗೆ?

ಯಡಿಯೂರಪ್ನೋರ ಕೆಜೆಪಿಗೆ?

ಯಡಿಯೂರಪ್ನೋರ ಕೆಜೆಪಿಗೆ 8 ಅಷ್ಟೇ.

ಬಿಎಸ್ಸಾರು?

ಬಿಎಸ್ಸಾರು?

ಐದೇ 5.

ಪಕ್ಷೇತರ ಸ್ವತಂತ್ರರು?

ಪಕ್ಷೇತರ ಸ್ವತಂತ್ರರು?

ಪಕ್ಷೇತರ ಸ್ವತಂತ್ರರು 8 ಮಂದಿ ವಿಧಾನಸಭೆಗೆ ಪ್ರವೇಶ

ಬಾಂಬೆ-ಕರ್ಬಾಟಕ ಭಾಗದಲ್ಲಿ ಬಿಜೆಪಿ ಹೇಗೆ?

ಬಾಂಬೆ-ಕರ್ಬಾಟಕ ಭಾಗದಲ್ಲಿ ಬಿಜೆಪಿ ಹೇಗೆ?


ಹಿಂದಿನ ಚುನಾವಣೆಯಂತೆ ಈ ಬಾರಿಯೂ ಬಿಜೆಪಿ ತನ್ನ ಅಧಿಪತ್ಯ ಉಳಿಸಿಕೊಳ್ಳಲಿದೆ.

ಬೆಂಗಳೂರು ಮತ್ತು ಹೈದರಾಬಾದ್-ಕರ್ನಾಟಕ ಭಾಗದಲ್ಲಿ?

ಬೆಂಗಳೂರು ಮತ್ತು ಹೈದರಾಬಾದ್-ಕರ್ನಾಟಕ ಭಾಗದಲ್ಲಿ?

ಬೆಂಗಳೂರು ಮತ್ತು ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸಲಿದೆ. ಹೈ-ಕ ಭಾಗದಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಸಹ ಕೆಲವೊಂದು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಹಾಸನ ಮತ್ತು ಮಂಡ್ಯದಲ್ಲಿ ಯಾರ ಪಾರುಪತ್ಯ?

ಹಾಸನ ಮತ್ತು ಮಂಡ್ಯದಲ್ಲಿ ಯಾರ ಪಾರುಪತ್ಯ?

ಹಾಸನ ಮತ್ತು ಮಂಡ್ಯದಲ್ಲಿ ಜೆಡಿಎಸ್ ತನ್ನ ಅಧಿಪತ್ಯ ಮುಂದುವರಿಸಲಿದೆ.

English summary
Karnataka Assembly Election- The survey report by a Mumbai-based research group, Prabodhan Research Group, says the Congress will get 95 out of the 224 seats in the assembly, the BJP 81, JD(S) 27, the KJP and independents 8 each and the BSR Congress 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X