ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳ್ಳಕೆರೆ ಗ್ರಾಮದಿಂದ ಚುನಾವಣೆ ಬಹಿಷ್ಕಾರ

By Mahesh
|
Google Oneindia Kannada News

ಚಳ್ಳಕೆರೆ, ಏ.16: ಪೊಲೀಸರ ದೌರ್ಜನ್ಯ, ಕಾನೂನು ಉಲ್ಲಂಘನೆ ಮೂಲ ಸೌಕರ್ಯ ಕೊರತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಚಳ್ಳಕೆರೆ ತಾಲೂಕಿನ ಗ್ರಾಮವೊಂದರ ಜನತೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನವನ್ನು ಬಹಿಷ್ಕರಿಸಿದೆ. ಬಹಿಷ್ಕಾರಕ್ಕೆ ಮೂಲ ಕಾರಣ ಅಮೃತ್ ಮಹಲ್ ಕಾವಲು ರಾಸುಗಳ ತಳಿ ಸಂರಕ್ಷಣೆ ಎಂಬುದು ಇಲ್ಲಿ ಗಮನಾರ್ಹ

ಕುಂದಾಪುರ, ವರವು ಕಾವಲು ಹಾಗೂ ಉಳ್ಳಾರ್ತಿ ಅಮೃತ ಮಹಲ್ ಕಾವಲು ತಳಿಗಳನ್ನು ಡಿಆರ್ ಡಿಒ, ಇಸ್ರೋ, ಐಐಎಸ್ಸಿ , BARC ಇತರೆ ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ನೀಡಿರುವುದನ್ನು ಖಂಡಿಸಿ ಸೋಮವಾರ(ಏ.15) ಚಳ್ಳಕೆರೆ ತಾಲೂಕಿನ 80 ಗ್ರಾಮದವರು ಕಾಲ್ ನಡಿಗೆ ಜಾಥ ಹಮ್ಮಿಕೊಂಡಿದ್ದರು.

Challakere Villagers to Boycott Assembly Elections

ಜೀವನದ ಪ್ರತಿಯೊಂದು ವಿಷಯಕ್ಕೂ ಕಾವಲುಗಳನ್ನು ಅವಲಂಬಿಸಿರುವ ಈ ಗ್ರಾಮದ ಜನತೆಗೆ ಯಾವುದೇ ಮೂಲ ಸೌಕರ್ಯ ಸಿಗುತ್ತಿಲ್ಲ. ಜೀವನೋಪಾಯಕ್ಕೆ ಆಧಾರವಾಗಿದ್ದ ಕಾವಲು ರಾಸುಗಳನ್ನು ಗ್ರಾಮಸ್ಥರ ಅನುಮತಿ ಇಲ್ಲದೆ ಗ್ರಾಮ ಪಂಚಾಯತಿ ಸದಸ್ಯರು ಗೌಪ್ಯವಾಗಿ ಹಂಚಿಕೆ ಮಾಡಿದ್ದಾರೆ.

ಇದರಿಂದ ಜನ ಜಾನುವಾರುಗಳಿಗೆ ನೀರು, ಮೇವು ಇಲ್ಲದೆ ತುಂಬ ತೊಂದರೆಗಳಾಗಿದೆ. ಇದನ್ನು ಪ್ರತಿಭಟಿಸಿ ಜಾಥಾ ಹಮ್ಮಿಕೊಂಡಿದ್ದರೆ ಅದಕ್ಕೆ ಚುನಾವಣೆ ಅಧಿಕಾರಿಗಳಿಂದ ಹಾಗೂ ಪೊಲೀಸ್ ಸಿಬ್ಬಂದಿಯಿಂದ ಅಡ್ಡಿ ಉಂಟಾಗಿದೆ. ಪೂರ್ವ ನಿಗದಿಯಾಗಿದ್ದ ಈ ಜಾಥಾಕ್ಕೆ ವಿನಾಕರಣ ಅಡ್ಡಿಪಡಿಸಲಾಗಿದೆ. ಹಿಂದಿನ ದಿನ ತಡರಾತ್ರಿ ಕರೆ ಮಾಡಿ ಜಾಥಾ ನಿಲ್ಲಿಸಿ ಎಂದಿದ್ದಾರೆ ಕೆಲಸ ಕಾರ್ಯ ಬಿಟ್ಟು ನ್ಯಾಯ ಕೇಳಲು ಬಂದಿದ್ದ ಅನೇಕ ಗ್ರಾಮಸ್ಥರಿಗೆ ಇದರಿಂದ ಭಾರಿ ತೊಂದರೆಯಾಗಿದೆ.

ನಮ್ಮ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗಿದೆ. ನಾವು ಈ ದೇಶದ ಪ್ರಜೆಗಳಲ್ಲವೇ? ನಮ್ಮ ಮೇಲೆ ಏಕೆ ಈ ದೌರ್ಜನ್ಯ ಎಂದು ನೊಂದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಹೀಗಾಗಿ ದೊಡ್ಡ ಉಳ್ಳಾರ್ತಿ ಗ್ರಾಮದ ಎಲ್ಲಾ ಮತದಾರರು ಒಮ್ಮತದಿಂದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

English summary
Dodda Ullarthi Village, Challakere to Boycott Vidhana Sabha Elections in Protest against Police Clamp Down of their Peaceful Protest Demanding Access to Grazing Pastures, Water and Fodder for Animals said AMRITHMAHAL KAVAL PROTECTION COMMITTEE of the village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X