ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಆರಂಭ

By Mahesh
|
Google Oneindia Kannada News

K'taka SSLC 2013 Valuation Starts From Today. Results Likely On May 10
ಬೆಂಗಳೂರು, ಏ.15: ಎಸ್ಎಸ್ ಎಲ್ ಸಿ ಪರೀಕ್ಷೆ ಜ್ವರ ಮುಗಿದಿದ್ದು ಬೇಸಿಗೆಯ ಬಿಸಿಲಿನಲ್ಲಿ ಚಿಣ್ಣರು ರಜೆ ಮಜಾ ಅನುಭವಿಸುತ್ತಿದ್ದಾರೆ. ಇನ್ನು ಹದಿನೈದು ದಿನಗಳ ನಂತರ ಮತ್ತೆ ಫಲಿತಾಂಶದ ಕಾವು ಹೆಚ್ಚಲಿದೆ. ಹೌದು, ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಇಂದಿನಿಂದ(ಏ.15)ನಿಂದ ಆರಂಭಗೊಂಡಿದೆ. ಸುಮಾರು 208 ಮೌಲ್ಯಮಾಪನ ಕೇಂದ್ರಗಳಲ್ಲಿ ಭರದಿಂದ ಮೌಲ್ಯಮಾಪನ ನಡೆಯುತ್ತಿದೆ ಎಂದು ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಮೌಲ್ಯಮಾಪಕರು ಮತ್ತು ಪರೀಕ್ಷಾ ಸಿಬ್ಬಂದಿಯ ಭತ್ಯೆಗಳನ್ನು ಪರಿಷ್ಕರಿಸಿ ಹೆಚ್ಚಿಸುತ್ತದೆ. ಅದರಂತೆ ಈ ಬಾರಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಆದರೆ, ಮಂಡಳಿಯ ಈ ಕ್ರಮ ರಾಜ್ಯ ಶಿಕ್ಷಕರ ಮತ್ತು ಉಪನ್ಯಾಸಕರ ಕ್ರಿಯಾಸಮಿತಿ ಅಸಮಾಧಾನದ ನಡುವೆಯೂ ಮೌಲ್ಯಮಾಪನ ಯಾವುದೇ ಅಡ್ಡಿ ಇಲ್ಲದೆ ನಡೆದಿದೆ ಎಂಬ ಸುದ್ದಿ ಸಿಕ್ಕಿದೆ.

ಏ.1 ರಿಂದ ಏ.10ರ ತನಕ ಪರೀಕ್ಷೆ ನಡೆಸಲಾಯಿತು. ಈಗ 208 ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ನಿರ್ಧಾರವಾಗಲಿದೆ. ಸುಮಾರು 63000 ಮೌಲ್ಯ ಮಾಪಕರು ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಫಲಿತಾಂಶ ನೀಡಲು ಶ್ರಮಿಸುತ್ತಿದ್ದಾರೆ. 30 ಜಿಲ್ಲಾಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲ್ಯಮಾಪನ ಸಾಗಿದೆ ಎಂದು ಅಧಿಕಾರಿ ಹೇಳಿದರು.

ಸುಮಾರು 8.49 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದ 3,003 ಕೇಂದ್ರಗಳಲ್ಲಿ ಪರೀಕ್ಷೆಗಳಲ್ಲಿ ಸುಗಮವಾಗಿ ಪರೀಕ್ಷೆ ನಡೆಸಲಾಗಿತ್ತು.

ಯಾವಾಗ ರಿಸಲ್ಟ್?: ಲಭ್ಯ ಮಾಹಿತಿ ಪ್ರಕಾರ ಮೇ.10ರೊಳಗೆ ಪರೀಕ್ಷಾ ಫಲಿತಾಂಶ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ. ಪರೀಕ್ಷೆ ನಡೆದ 30 ದಿನಗಳಲ್ಲಿ ಫಲಿತಾಂಶ ಹೊರ ಹಾಕುವ ಅಲಿಖಿತ ನಿಯಮವನ್ನು ಹಾಕಿಕೊಳ್ಳಲಾಗಿದೆ. ಮೌಲ್ಯ ಮಾಪಕರ ಸಹಕಾರದಿಂದ ಆದಷ್ಟು ಬೇಗ ಫಲಿತಾಂಶ ನೀಡಲು ಮಂಡಳಿ ಸಿದ್ಧತೆ ನಡೆಸಿದೆ.

ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಜೊತೆಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಸೂಕ್ತ ಸಮಯಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇನ್ನು 15-20ದಿನದೊಳಗೆ ಫಲಿತಾಂಶ ನಿರೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆ ಒನ್ ಇಂಡಿಯಾ ನೋಡುತ್ತಿರಿ.

English summary
Answer paper valuation for the Karnataka SSLC (Class 10) public examination started from today- 15th April, 2013. The exam commenced from 1st April and concluded on 10th (Wednesday). The valuation process will be carried out in 208 centers across State. Results are expected on or before 10th May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X