ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರಕ್ಕೆ ಬಿದ್ದ ವಿಮಾನ, ಪ್ರಯಾಣಿಕರು ಪಾರು

By Prasad
|
Google Oneindia Kannada News

Aircraft crashes into ocean off Bali coast, passengers safe
ಜಕಾರ್ತಾ, ಏ. 13 : ಸುಮಾರು 100 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಲಯನ್ ಏರ್ ಕ್ರಾಫ್ಟ್ ಬಾಲಿಯಲ್ಲಿರುವ ಸಮುದ್ರಕ್ಕೆ ಶನಿವಾರ ಬಿದ್ದಿದೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಸಮುದ್ರಕ್ಕೆ ಬಿದ್ದ ಕೂಡಲೆ ವಿಮಾನ ಎರಡು ಭಾಗಗಳಾಗಿದೆ ಎಂದು ಹೇಳಲಾಗಿದೆ. ನಂತರ ಸಮುದ್ರಕ್ಕೆ ನುಗ್ಗಿದ್ದರೂ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ವರದಿಯ ಪ್ರಕಾರ, ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂಡೋನೇಷ್ಯಾದ ರೆಸಾರ್ಟ್ ದ್ವೀಪ ಬಾಲಿಯಲ್ಲಿ ರನ್ ವೇ ನಲ್ಲಿ ಇಳಿಯುತ್ತಿದ್ದಾಗ ನಿಯಂತ್ರಣ ತಪ್ಪಿ ವಿಮಾನ ಸಮುದ್ರಕ್ಕೆ ನುಗ್ಗಿದೆ. ವಿಮಾನ ಬಂಡುಂಗ್‌ನಿಂದ ಬಂದು ಬಾಲಿಯಲ್ಲಿ ಇಳಿಯುತ್ತಿತ್ತು. ಈ ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಕರ್ನಾಟಕದ ಬಜ್ಪೆ ವಿಮಾನ ನಿಲ್ದಾಣದಲ್ಲಿಯೂ 2010ರ ಮೇ 22ರಂದು ಇದೇ ರೀತಿ, ದುಬೈನಿಂದ ಬರುತ್ತಿದ್ದ ವಿಮಾನ ರನ್ ವೇನಿಂದ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿತ್ತು. ಆ ದುರಂತದಲ್ಲಿ 158 ಪ್ರಯಾಣಿಕರು ಸಾವಿಗೀಡಾಗಿದ್ದರು. ಅದೇ ರೀತಿ ಬಾಲಿಯಲ್ಲಿಯೂ ಅಪಘಾತ ನಡೆದಿದ್ದರೂ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.

English summary
A Lion Air aircraft carrying over 100 passengers on Saturday crashed into the ocean off the Bali coast. It is believed that the aircraft split apart as a consequence of the impact as it travelled towards Denpasar and landed in water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X