ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೂರು ಬಿಟ್ಟು ಕೆ.ಆರ್ ಪೇಟೆಯಲ್ಲಿ ಭವಾನಿ ಸ್ಪರ್ಧೆ?

By Mahesh
|
Google Oneindia Kannada News

Deve Gowda okays Bhavani Revanna political entry
ಮಂಡ್ಯ, ಏ.11: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸೊಸೆ, ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು ತಮ್ಮ ತವರೂರು ಬೇಲೂರು ಬಿಟ್ಟು ಮಂಡ್ಯ ಜಿಲ್ಲೆ ಕಡೆಗೆ ಬರುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಕೇಳಿ ಬಂದಿದೆ. ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಅವರಿಗಾಗಿ ಕಾಯ್ದಿರಿಸಲಾಗಿದೆ. ಯಾವುದಕ್ಕೂ ಜೆಡಿಎಸ್ ಮುಂದಿನ ಪ್ರಕಟಣೆಗಾಗಿ ನಿರೀಕ್ಷಿಸಿ ಎಂಬ ಉತ್ತರ ಜೆಡಿಎಸ್ ವಕ್ತಾರರಿಂದ ಬಂದಿದೆ.

ಕೆ.ಆರ್‌.ಪೇಟೆಯಲ್ಲಿ ಮಾಜಿ ಸ್ಪೀಕರ್‌ ಕೃಷ್ಣ ಹಾಗೂ ಕೆ.ಸಿ.ನಾರಾಯಣಗೌಡರ ನಡುವಿನ ಕಿತ್ತಾಟವನ್ನು ಹತ್ತಿಕ್ಕಲು ಭವಾನಿ ಅವರಿಗೆ ಟಿಕೆಟ್ ನೀಡಲು ಜೆಡಿಎಸ್ ವರಿಷ್ಠ ದೇವೇಗೌಡರು ಯೋಚಿಸಿದ್ದಾರೆ ಎಂಬ ಸುದ್ದಿ ಇದೆ. ಆದರೆ, ಜೆಡಿಎಸ್ ಎರಡನೇ ಪಟ್ಟಿಯಲ್ಲಿ ಕೆ.ಆರ್ ಪೇಟೆಯಿಂದ ಕೃಷ್ಣ ಅವರು ಸ್ಪರ್ಧಿಸುತ್ತಾರೆ ಎಂದು ಪ್ರಕಟಿಸಲಾಗಿದೆ. ಆದರೆ, ಇನ್ನೂ ಬಿ ಫಾರಂ ಕೊಡುವುದು ಖಾತ್ರಿಯಾಗಿಲ್ಲ.

ಹೀಗಾಗಿ ಭವಾನಿ ಮೇಡಂ ರಾಜಕೀಯ ಪ್ರವೇಶಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ. ಅತ್ತ ಓರಗಿತ್ತಿ ಅನಿತಾ ಕುಮಾರಸ್ವಾಮಿ ಅವರು ಏ.15 ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಭವಾನಿ ರೇವಣ್ಣ ಅವರು ಮೈಸೂರಿನ ಕೆ.ಆರ್‌.ನಗರ ಅಥವಾ ಹಾಸನದ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಒಲವು ಹೊಂದಿದ್ದು ನಿಜ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಮ್ಮತಿ ನೀಡಿಲ್ಲ.

ಬೇಲೂರು ಕ್ಷೇತ್ರದಲ್ಲಿ ಜೆಡಿಎಸ್ ನಿಷ್ಠಾವಂತ ಎಚ್ ಕೆ ಜವರೇಗೌಡರಿಗೆ ಅನ್ಯಾಯವಾಗುವುದು ದೊಡ್ಡ ಗೌಡರಿಗೆ ಇಷ್ಟವಿಲ್ಲ. ಕೆ.ಆರ್ ನಗರದಿಂದ ಸಾರಾ ಮಹೇಶ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಹೀಗಾಗಿ ಭವಾನಿ ಅವರಿಗೆ ಟಿಕೆಟ್ ಸಿಗುವುದೇ ಅನುಮಾನ ಎಂಬ ಸುದ್ದಿಯೂ ಚಾಲ್ತಿಯಲ್ಲಿದ್ದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಶ್ರವಣಬೆಳಗೊಳದಲ್ಲಿ ಸಂಬಂಧಿ ಬಾಲಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಭವಾನಿ ರೇವಣ್ಣ ಅವರನ್ನೂ ಸ್ಪರ್ಧೆಗೆ ಇಳಿಸಿದರೆ ಜೆಡಿಎಸ್ ಬರೀ ಕುಟುಂಬ ಪಕ್ಷ ಎಂಬ ಕುಹಕಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಬೆಳೆಯಲಿದೆ ಎಂಬ ಆಲೋಚನೆಯೂ ದೇವೇಗೌಡರ ಮನಸ್ಸಿನಲ್ಲಿದೆ.

ಭವಾನಿ ರೇವಣ್ಣ ಅವರ ಸ್ಪರ್ಧೆ ಅನುಮಾನವಾದರೆ ಮಗ ಪ್ರಜ್ವಲ್ ಪ್ರಯತ್ನ, ಜಿಲ್ಲಾ ಮಹಿಳಾ ಘಟಕದ ಒತ್ತಾಯ, ಪತಿ ರೇವಣ್ಣ ಅವರ ನೋವಿಗೆ ಬೆಲೆ ಇಲ್ಲದ್ದಂತಾಗುತ್ತದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
JDS supremo HD Deve gowda finally okays Bhavani Revanna's entry to Political arena. But, Now Bhavani Revanna's entry seems to be doubtful as KR Pet candidate former speaker Krishna likely to get B Form. Former Prime Minister Deve Gowda still saying Bhavani will not be entering politics now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X