ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಟ್ ಟಾಪ್ ಬಾಕ್ಸ್ ಏ.16ಕ್ಕೆ ಅಂತಿಮ ತೀರ್ಪು

|
Google Oneindia Kannada News

Karnataka high court
ಬೆಂಗಳೂರು, ಏ.10: ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಏ.16ರ ಅಂತಿಮ ಆದೇಶದ ವರೆಗೂ ಕೇಬಲ್ ಪ್ರಸಾರ ಸ್ಥಗಿತಗೊಳಿಸದಂತೆ ಕೇಬಲ್ ಆಪರೇಟರ್ ಗಳಿಗೆ ನಿರ್ದೇಶನ ನೀಡಿದೆ.

ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಕಾಲಾವಕಾಶ ನೀಡುವಂತೆ ಕೋರಿ ಕೇಬಲ್ ಅಸೋಸಿಯೇಷನ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ಮುಂದುವರೆಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಏಕಸದಸ್ಯ ಪೀಠ, ಅರ್ಜಿದಾರರ ಮತ್ತು ಕೇಂದ್ರ ಸರ್ಕಾರದ ವಾದ ಆಲಿಸಿ ವಿಚಾರಣೆಯನ್ನು ಪೂರ್ಣಗೊಳಿಸಿತು.

ಏ.16ರಂದು ಮಂಗಳವಾರ ಅಂತಿಮ ತೀರ್ಪು ಪ್ರಕಟಿಸಲಾಗುತ್ತದೆ. ಅಲ್ಲಿಯವರೆಗೂ ಕೇಬಲ್ ಪ್ರಸಾರ ಸ್ಥಗಿತಗೊಳಿಸದಂತೆ ಮಧ್ಯಂತರ ಆದೇಶ ನೀಡಿತು. ಇದರಿಂದಾಗಿ ಜನರು ಆರು ದಿನಗಳ ಮಟ್ಟಿಗೆ ನಿರಾಳವಾಗಿ ಟಿವಿ ವೀಕ್ಷಿಸಬಹುದಾಗಿದೆ.

ಎಷ್ಟು ಕೇಬಲ್ ಸಂಪರ್ಕಗಳಿವೆ : ಬೆಂಗಳೂರು ಮಹಾನಗರದಲ್ಲಿರುವ ಕೇಬಲ್ ಸಂಪರ್ಕ ಎಷ್ಟು? ಕೇಬಲ್ ಆಪರೇಟರ್ ಗಳ ಪ್ರಕಾರ 15 ಲಕ್ಷ. ಆದರೆ ಮಲ್ಟಿ ಸಿಸ್ಟಂ ಆಪರೇಟರ್ಸ್‌ ಪ್ರಕಾರ 26 ಲಕ್ಷ. ಹೌದು ಇಂತಹ ಮಾಹಿತಿಯನ್ನು ಸ್ವತಃ ಕೇಬಲ್ ಅಪರೇಟರ್ ಗಳು ಹೈಕೋರ್ಟ್ ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಸಲ್ಲಿಸಿದ್ದಾರೆ.

ನಿಖರವಾದ ಕೇಬಲ್ ಸಂಪರ್ಕದ ಸಂಖ್ಯೆಯನ್ನು ಆಪರೇಟರ್ ಗಳು ನೀಡದೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಷ್ಟವಾಗುತ್ತಿದೆ ಎಂದು ಹಿರಿಯ ವಕೀಲ ಕೆ.ಜಿ.ರಾಘವನ್ ನ್ಯಾಯಪೀಠದ ಮುಂದೆ ವಾದ ಮಂಡಿಸಿದ್ದರು.

ಆದ್ದರಿಂದ ನ್ಯಾಯಾಲಯ ನಿಖರ ಮಾಹಿತಿ ನೀಡುವಂತೆ ಕೇಬಲ್ ಆಪರೇಗಳಿಗೆ ಸೂಚಿಸಿತ್ತು. ಈ ವೇಳೆ ಪ್ರಮಾಣ ಪತ್ರ ಸಲ್ಲಿಸಿದ ಆಪರೇಟರ್ ಗಳು ಬೆಂಗಳೂರು ನಗರದಲ್ಲಿ 26 ಲಕ್ಷ ಸಂಪರ್ಕಗಳಿವೆ ಎಂದು ಪ್ರಮಾಣ ಪತ್ರ ಸಲ್ಲಿಸಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ನೀಡಿರುವ ಅಂಕಿ-ಅಂಶದಂತೆ ಕೇಬಲ್ ಸಂಪರ್ಕ ಹೊಂದಿರುವ ಶೇ.68ರಷ್ಟು ಮನೆಗಳು ಸೆಟ್ ಟಾಪ್ ಬಾಕ್ಸ್ ಅಳವಡಿಕೆ ಮಾಡಿಕೊಂಡಿವೆ. ತಕ್ಷಣ ಸೆಟ್ ಟಾಪ್ ಬಾಕ್ಸ್ ಆಳವಡಿಕೆ ಸಾಧ್ಯವಿಲ್ಲ, ಕಾಲಾವಕಾಶ ನೀಡುವಂತೆ ಕೋರಿ ಕೇಬಲ್ ಆಪರೇಟರ್ ಗಳು ಹೈಕೋರ್ಟ್ ಮೊರೆ ಹೋಗಿದ್ದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Karnataka high court on Wednesday, April 10, Extend deadline for compulsory digitization till April,16. Ministry of Information and Broadcasting orders that, for Bangalore and Mysore City March 31, 2013 is the deadline to replace analogue cable connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X