ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಕೃಷ್ಣಯ್ಯ ಶೆಟ್ಟಿ

|
Google Oneindia Kannada News

Krishnaiah Shetty
ಬೆಂಗಳೂರು, ಏ.10: ಬಿಜೆಪಿ ಸರ್ಕಾರದ ಮತ್ತೊಂದು ವಿಕೆಟ್ ಪತನಗೊಂಡಿದೆ. ಮಾಲೂರು ಕ್ಷೇತ್ರದ ಬಿಜೆಪಿ ಶಾಸಕ ಕೃಷ್ಣಯ್ಯ ಶೆಟ್ಟಿ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಲೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದರು. ಏ.15ರಂದು ನಾಮಪತ್ರ ಸಲ್ಲಿಸುವುದಾಗಿಯೂ ತಿಳಿಸಿದರು.

ಬಿಜೆಪಿ ಮೊದಲನೇ ಪಟ್ಟಿಯಲ್ಲಿ ಟಿಕೆಟ್ ದೊರೆಯಲಿಲ್ಲ ಎಂದು ನಿವೃತ್ತಿ ಮಾತನಾಡಿದ್ದ ಶೆಟ್ಟರು ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ನಿರ್ಧಾರ ಹಿಂಪಡೆದಿದ್ದರು. ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ದೊರೆಯಲಿಲ್ಲ ಎಂದು ಬಿಜೆಪಿ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. (ಶೆಟ್ಟಿಗೆ ಲಾಡು ಕೊಟ್ಟ ಬಿಜೆಪಿ )

ಕಾಂಗ್ರೆಸ್ ನಲ್ಲೂ ಬಂಡಾಯ : ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲಗಳು ಬಗೆಹರಿದಿಲ್ಲ. ಟಿಕೆಟ್ ಸಿಗದ ಅಭ್ಯರ್ಥಿಗಳು ಬಂಡಾಯದ ಕಹಳೆ ಊದಿದ್ದಾರೆ. ಬಳ್ಳಾರಿ, ಶ್ರವಣಬೆಳಗೊಳ ಕ್ಷೇತ್ರಗಳ ಟಿಕೆಟ್ ಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.
ಶ್ರವಣಬೆಳಗೊಳದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಗೋಪಾಲಸ್ವಾಮಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಸಿ.ಎಸ್.ಪುಟ್ಟೇಗೌಡ ಅವರಿಗೆ ಟಿಕೆಟ್ ನೀಡಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.(ಕಾಂಗ್ರೆಸ್ ಪಟ್ಟಿ)

ಜೆಡಿಎಸ್ ಅಪ್ಪಿದ ಅಪ್ಪೊಗೋಳ : ಚಲನಚಿತ್ರ ನಿರ್ಮಾಪಕ ಹಾಗೂ ಕಿತ್ತೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಆನಂದ್ ಅಪ್ಪುಗೋಳ ಟಿಕೆಟ್ ಕೈತಪ್ಪಿದ ಕಾರಣ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

ವರ್ತೂರು ನಂ.1 : ಜವಳಿ ಸಚಿವ ವರ್ತೂರು ಪ್ರಕಾಶ್ ಚುನಾವಣಾ ಅಧಿಸೂಚನೆ ಪ್ರಕಟಗೊಂಡ ದಿನವೇ ನಾಮಪತ್ರ ಸಲ್ಲಿಸಿದ ಮೊದಲ ರಾಜಕಾರಣಿಯಾಗಿದ್ದಾರೆ. ಇಂದು ವರ್ತೂರು ಪ್ರಕಾಶ್ ನಾಮಪತ್ರ ಸಲ್ಲಿಸಿದರು. (ಇಂದು ಅಮಮಾಸ್ಯೆ ಅಲ್ವಾ)

ಈಶ್ವರಪ್ಪ ಮೇಲೆ ದೂರು : ಕಳೆದಬಾರಿ ಚುನಾವಣೆ ಪ್ರಚಾರದಲ್ಲಿ ಕೈ ಕಡಿಯಿರಿ, ನಾಲಿಗೆ ಸೀಳಿ ಎಂದು ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದ ಈಶ್ವರಪ್ಪ, ಈ ಬಾರಿ ಮುಸ್ಲಿಂ ಸಮುದಾಯದ ವಿರುದ್ಧ ಲವ್ ಜಿಹಾದ್ ಹೇಳಿಕೆ ನೀಡಿ ಕೇಸು ಹಾಕಿಸಿಕೊಂಡಿದ್ದಾರೆ. (ಈಶ್ವರಪ್ಪ ಹೇಳಿಕೆ ಏನು )

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Malur constituency BJP MLA S.N. Krishnaiah Shetty quits BJP. On Wednesday, April 10, he said that, i will contest for Assembly Election as indipendent candidate. i will quit BJP on April 15. BJP did not issued ticket for Krishnaiah Shetty so he quits the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X