• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದಿರಾ ವಿರುದ್ಧ ಬಂಡಾಯಕ್ಕೆ ಫ್ರಾನ್ಸ್ ನೆರವು?

By Mahesh
|

ನವದೆಹಲಿ, ಏ.9: ಅಮೆರಿಕದ ಸಾಮ್ರಾಜ್ಯಶಾಹಿ ನೀತಿ ಮತ್ತು ವಿದೇಶಿ ಬಂಡವಾಳಕ್ಕೆ ವಿರುದ್ಧ ತಿರುಗಿಬಿದ್ದಿದ್ದ ಕೇಂದ್ರದ ಮಾಜಿ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌, ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮತ್ತು ಫ್ರಾನ್ಸ್‌ ಸರ್ಕಾರಗಳಿಂದ ಧನ ಸಹಾಯ ಬಯಸಿದ್ದರು ಎಂದು ವಿಕಿಲೀಕ್ಸ್ ರಹಸ್ಯ ಮಾಹಿತಿ ಬಹಿರಂಗ ಪಡಿಸಿದೆ.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ ಸ್ವದೇಶಕ್ಕೆ ಕಳುಹಿಸಿದ್ದ ರಹಸ್ಯ ಕಡತಗಳನ್ನು ವಿಕಿಲೀಕ್ಸ್‌ ಬಿಡುಗಡೆ ಮಾಡಿದೆ. ಆದರೆ, ಅಮೆರಿಕದ ಕಡತದಲ್ಲಿರುವ ಈ ಮಾಹಿತಿ ಕಪೋಲ ಕಲ್ಪಿತ ಎಂದು ಜಾರ್ಜ್‌ ಪತ್ನಿ ಲೈಲಾ ನಿರಾಕರಿಸಿದ್ದಾರೆ.

1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ, ಕಾರ್ಮಿಕ ನಾಯಕರಾಗಿದ್ದ ಜಾರ್ಜ್‌ ಫ‌ರ್ನಾಂಡಿಸ್‌ ಭೂಗತರಾಗಿ ಹಲವೆಡೆ ದುಷ್ಕೃತ್ಯಗಳನ್ನು ನಡೆಸುತ್ತಿದ್ದರು. ಸರ್ಕಾರಿ ಕಚೇರಿಗಳನ್ನು ಡೈನಾಮೈಟ್‌ ಇಟ್ಟು ಸ್ಫೋಟಿಸುವ ವಿಧ್ವಂಸಕ ಯೋಜನೆಗಳನ್ನು ಹಾಕಿಕೊಂಡಿದ್ದರು.

ಇಂಥ ಸಂದರ್ಭದಲ್ಲೇ ಅವರು ರಹಸ್ಯವಾಗಿ ಭಾರತದಲ್ಲಿನ ಫ್ರಾನ್ಸ್‌ ರಾಯಭಾರ ಕಚೇರಿಯ ಕಿರಿಯ ಸಿಬ್ಬಂದಿ ಮತ್ತು ಕಾರ್ಮಿಕ ಸಚಿವರನ್ನು ಭೇಟಿ ಮಾಡಿ ಧನ ಸಹಾಯ ಬಯಸಿದ್ದರು ಎನ್ನಲಾಗಿದೆ.

ಈ ವೇಳೆ ತುರ್ತು ಪರಿಸ್ಥಿತಿ ವಿರೋಧಿಸಿ, ಬಾಂಬೆ ಮತ್ತು ಪೂನಾ ನಡುವಣ ಸೇತುವೆಯನ್ನು ನಾವು ಸ್ಫೋಟಿಸಿದ್ದೇವೆ. ಬಾಂಬೆ ಅಂಚೆ ಕಚೇರಿಗೆ ಬೆಂಕಿ ಹಚ್ಚಿದ್ದೇವೆ ಹಾಗೂ ನನ್ನ ಜತೆಗಿರುವ ನಕ್ಸಲರು ಮದ್ರಾಸ್‌ನಲ್ಲಿರುವ ಎಲ್‌ಐಸಿ ಕಟ್ಟಡಕ್ಕೆ ಕಿಚ್ಚಿಕ್ಕಲು ಯೋಜನೆ ರೂಪಿಸಿದ್ದಾರೆ ಎಂದಿದ್ದರು.

ಆದರೆ ಫ್ರಾನ್ಸ್‌ ರಾಯಭಾರ ಕಚೇರಿ ಧನ ಸಹಾಯಕ್ಕೆ ನಿರಾಕರಿಸಿದಾಗ, ಹಾಗಿದ್ದರೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎನಿಂದ ಹಣ ಪಡೆಯಲೂ ನಾನು ಸಿದ್ಧ. ಈ ಬಗ್ಗೆ ನೆರವು ನೀಡಿ ಎಂದೂ ಕೇಳಿಕೊಂಡಿದ್ದರು. ಆದರೆ ಫ್ರಾನ್ಸ್‌ ಸರ್ಕಾರ ಈ ಸಹಾಯವನ್ನೂ ನಿರಾಕರಿಸಿತ್ತು ಎಂಬ ಮಾಹಿತಿ ಕಡತದಲ್ಲಿದೆ.

ಇದರ ಜೊತೆಗೆ, ಭಾರತದಲ್ಲಿ ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದ ಸ್ವೀಡನ್ ಜೆಟ್ ವಿಮಾನ ಖರೀದಿಯಲ್ಲಿನ ಅಕ್ರಮಗಳ ಬಗ್ಗೆ ಹೊಸಬೆಳಕು ಚೆಲ್ಲಿರುವ ವಿಕಿಲೀಕ್ಸ್ 'ಸ್ವೀಡನ್ ಜೆಟ್ ಖರೀದಿ ಕರ್ಮಕಾಂಡದಲ್ಲಿ Mister Clean ರಾಜೀವ್ ಗಾಂಧಿ ಸ್ವೀಡನ್ ಕಂಪನಿಗೆ ದಲ್ಲಾಳಿಯಾಗಿದ್ದರು' ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿತ್ತು.

ಭಾರತೀಯ ವಾಯುಪಡೆಗೆ ಶಸ್ತ್ರ ಖರೀದಿ ವ್ಯವಹಾರದಲ್ಲಿ ಕಾಂಗ್ರೆಸ್ಸಿನ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹೆಸರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಇತ್ತೀಚೆಗೆ ಇಟಲಿ ಹೆಲಿಕಾಪ್ಟರ್ ಹಗರಣದ ಸೇರಿದಂತೆ ಈಗಾಗಲೇ ಹತ್ತಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಪುರಾತನ ಕಾಂಗ್ರೆಸ್ ಪಕ್ಷಕ್ಕೆ 'ರಾಜೀವ್ ಗಾಂಧಿ ಸ್ವೀಡನ್ ಕಂಪನಿಯ ದಲ್ಲಾಳಿ' ಎಂಬುದು ಮಾರಕವಾಗಿ ಪರಿಣಮಿಸಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a sensational revelation, the WikiLeaks have alleged that firebrand socialist leader George Fernandes had sought funds from the American Central Intelligence Agency (CIA) to overthrow Indira Gandhi's government in the 1970s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more