ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಮಂದಿ ಪಡೆದಿದ್ದು ಸಾಲವೋ, ದೇಣಿಗೆಯೋ?

By Srinath
|
Google Oneindia Kannada News

ಬೆಂಗಳೂರು, ಏ.9: ಕಾಂಗ್ರೆಸ್ ಪಕ್ಷದ ಒಂದೇ ಕುಟುಂಬದ ಇಬ್ಬರು ಶಾಸಕರ ಪೈಕಿ, ಹಾಲಿ ವಿಧಾಸನಭೆಯ ಅತ್ಯಂತ ಕಿರಿಯ ಶಾಸಕ ಎಂಬ ಹೆಗ್ಗಳಿಕೆಯ ಪ್ರಿಯಕೃಷ್ಣ ಅವರು ತಾವು ಗಳಿಸಿರುವ ಅಪಾರ ಆಸ್ತಿಯಲ್ಲಿ ಕೊಂಚ ಹಣವನ್ನು ತಮ್ಮ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೂ ಹಂಚಿದ್ದಾರೆ. ಜತೆಗೆ, ತಾವು ಕೊಟ್ಟಿದ್ದು ಸಾಲ ಎಂದೂ ಹೇಳಿದ್ದಾರೆ.

ಆದರೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪಕ್ಷದ ನಾಯಕರಿಗೆ ದೇಣಿಗೆಯ ರೂಪದಲ್ಲಿ ಸಂದಾಯ ಮಾಡಿರುವ ಸಾಲ ಇದಾಗಿದೆ ಎಂಬುದನ್ನು ರಾಜಕೀಯ ಬಲ್ಲವರು ಯಾರೇ ಆದರೂ ಹೇಳಬಹುದು. ಭ್ರಷ್ಟಾಚಾರ ವಿರೋಧಿ ವೇದಿಕೆಯೂ ಇದನ್ನೇ ಹೇಳಿದೆ.

ಪ್ರಿಯಕೃಷ್ಣ ಮುಖ್ಯವಾಗಿ ಪಕ್ಷದ 4 ನಾಯಕರಿಗೆ ಹೀಗೆ ಸಾಲ ರೂಪದ ದೇಣಿಗೆಯನ್ನು ನೀಡಿ ಕೃತಾರ್ಥರಾಗಿದ್ದಾರೆ. 2008ಕ್ಕೂ ಮುಂಚೆಯೇ ಈ ನಾಲ್ವರಿಗೂ ಒಟ್ಟು 96 ಲಕ್ಷ ರೂ ಸಾಲ ನೀಡಿರುವುದಾಗಿ ತಮ್ಮ ಆದಾಯ ತೆರಿಗೆ ಘೋಷಣೆಯಲ್ಲಿ ಅಧಿಕೃತವಾಗಿಯೇ ನಮೂದಿಸುತ್ತಾ ಬಂದಿದ್ದಾರೆ.

ಆದರೆ ಹೀಗೆ ಸಾಲ ಪಡೆದ ನಾಲ್ವರೂ ತಾವು ಇಷ್ಟಿಷ್ಟು ಸಾಲ ಪಡೆದಿದ್ದೇವೆ ಎಂದು ತಮ್ಮ assets-liabilities ಕಾಲಂನಲ್ಲಿ ಅದನ್ನು ತೋರಿಸಿಯೇ ಇಲ್ಲ ಎಂಬುದು ವೇದಿಕೆಯ ಆರೋಪವಾಗಿದೆ.

ವೇದಿಕೆಯ ಮತ್ತೂ ಒಂದು ಪ್ರಮುಖ ಆರೋಪ ಏನೆಂದರೆ ಕಾಂಗ್ರೆಸ್ ಪಕ್ಷವು ಒಂದು ಕುಟುಂಬಕ್ಕೆ ಒಂದೇ ಚುನಾವಣಾ ಟಿಕೆಟ್ ಎಂಬ ನೀತಿಯನ್ನು ಅಳವಡಿಸಿಕೊಂಡಿದೆ. ಆದರೆ ಈ ನೀತಿಯನ್ನು ಬದಿಗೊತ್ತಿ ಪ್ರಿಯಕೃಷ್ಣಗೂ ಮತ್ತು ಅವರ ತಂದೆಗೂ ಟಿಕೆಟ್ ನೀಡಿದೆ. ಇದು ಸಾಧ್ಯವಾಗಿರುವುದು ಈ ಸಾಲ/ದೇಣಿಗೆಯಿಂದಾಗಿ ಎಂಬ ಗುರುತರ ಆರೋಪವನ್ನೂ ವೇದಿಕೆ ಮಾಡಿದೆ.

ವಿಜಯನಗರ ಶಾಸಕ ಎಂ ಕೃಷ್ಣಪ್ಪ ಮತ್ತು ಅವರ ಪುತ್ರ ಗೋವಿಂದರಾಜ ನಗರದ ಶಾಸಕ ಪ್ರಿಯಕೃಷ್ಣ ಅವರು ಕಾಂಗ್ರೆಸ್ ಮಂದಿಗೆ ನೀಡಿರುವ ಸಾಲದ ಲೆಕ್ಕಾಚಾರ ಹೀಗಿದೆ:

ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ

ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ

ಅಪ್ಪ-ಮಗ ಇಬ್ಬರೂ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ 20 ಲಕ್ಷ ರೂ ಸಾಲ ನೀಡಿದ್ದಾರಂತೆ. ಮತ್ತು ಚೆಕ್ ರೂಪದಲ್ಲಿ ಸಾಲ ನೀಡಿದ್ದು ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ ಎನ್ನಲಾಗಿದೆ. ಮೊಯ್ಲಿ ಅವರ ಪುತ್ರ ಕಾರ್ಪೊರೇಟ್ ಸಂಸ್ಥೆಯೊಂದರಿಂದ ಇಂತಹುದೇ ದೇಣಿಗೆ ಪಡೆದಿರುವುದು ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿಗೆ

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿಗೆ

ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ (ಬೆಂಗಳೂರು ದಕ್ಷಿಣ) ತೇಜಸ್ವಿನಿ ಗೌಡ ಅವರು ಗರಿಷ್ಠ ಮೊತ್ತದ ಸಾಲ ಪಡೆದವರು. ಅಂದರೆ ಕೃಷ್ಣಪ್ಪ ಅವರ ಕುಟುಂಬದಿಂದ 60 ಲಕ್ಷ ರೂ. ಸಾಲ ಪಡೆದಿದ್ದಾರೆ.

ರಾಜಾಜಿನಗರದ ಶಾಸಕ ನೆಲ ನರೆಂದ್ರ ಬಾಬುಗೆ

ರಾಜಾಜಿನಗರದ ಶಾಸಕ ನೆಲ ನರೆಂದ್ರ ಬಾಬುಗೆ

ರಾಜಾಜಿನಗರದ ಶಾಸಕ ನೆಲ ನರೆಂದ್ರ ಬಾಬುಗೆ 10 ಲಕ್ಷ ರೂ. ಸಾಲ ಸಂದಾಯವಾಗಿದೆ.

ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿಗೂ

ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿಗೂ

ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಖುರ್ಷಿದ್ ಬೇಗಂ ಅವರಿಗೂ 6 ಲಕ್ಷ ರೂ ಸಾಲ ಪಾವತಿಯಾಗಿದೆ.

ಕೃಷ್ಣಪ್ಪ ಕುಟುಂಬಸ್ಥರಿಂದ ಇನ್ನೂ ಹೆಚ್ಚು ಸಾಲ

ಕೃಷ್ಣಪ್ಪ ಕುಟುಂಬಸ್ಥರಿಂದ ಇನ್ನೂ ಹೆಚ್ಚು ಸಾಲ

ಕಾಂಗ್ರೆಸ್ ನಾಯಕರಿಗಷ್ಟೇ ಅಲ್ಲದೆ ಕೃಷ್ಣಪ್ಪ ಕುಟುಂಬಸ್ಥರು ಅಂದರೆ ಅಪ್ಪ ಮತ್ತು ಇಬ್ಬರು ಮಕ್ಕಳಾದ ಪ್ರಿಯಕೃಷ್ಣ ಹಾಗೂ ಪ್ರದೀಪ್ ಕೃಷ್ಣ ಬೇರೆಯವರಿಗೂ ಸಾಲ ನೀಡಿದ್ದು (ಒಟ್ಟು 36.62 ಕೋಟಿ ರೂ. ಸಾಲ) ಅದನ್ನು ಆದಾಯ ತೆರಿಗೆಯಲ್ಲಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.
ಕೃಷ್ಣಪ್ಪ ವೈಯಕ್ತಿಕ ಖಾತೆಯಿಂದ 5.3 ಕೋಟಿ
ಪ್ರಿಯಕೃಷ್ಣ - 8.11 ಕೋಟಿ ರೂ.
ಪ್ರದೀಪ್ ಕೃಷ್ಣ - 23.48 ಕೋಟಿ ರೂ.

English summary
Govindaraj Nagar MLA Harikrishna paid Rs 96 lakh loan to 4 Congress Leaders alleges Karnataka Bhrashtachar Virodhi Vedike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X