ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂದಿದೆ ಜಾತಿಗಳ ಆಧಾರದಲ್ಲಿ ಪ್ರತ್ಯೇಕ ಬಡಾವಣೆ

By Srinath
|
Google Oneindia Kannada News

townships-for-brahmins-lingayats-coming-up-at-bagepalli
ಬೆಂಗಳೂರು, ಏ.9: ನಮ್ಮದು ಜಾತ್ಯತೀತ ರಾಷ್ಟ್ರ. ಆದರೂ ಜಾತ್ಯಾತೀತ ಎಂದು ಹೇಳಿಕೊಂಡೇ ಇಲ್ಲಿ ಎಲ್ಲವೂ ಜಾತಿ ಆಧಾರಿತವಾಗಿಯೇ ನಡೆಯುತ್ತದೆ ಎಂಬುದು ಅದಾಗತಾನೇ ಹುಟ್ಟಿದ ಮಗುವಿಗೂ ತಿಳಿಯಹೇಳಲಾಗುತ್ತದೆ. ಆದರೂ ತೀರಾ ಈ ಪರಿ ಇದು ನಿನ್ನ ಜಾತಿಯ ಬಡಾವಣೆ. ಅದು ಅವರ ಜಾತಿಯ ಬಡಾವಣೆ ಅಂತೆಲ್ಲ ಕರೆಯುವುದು ಎಷ್ಟು ಸಮಂಜಸ?

ಆದರೂ ಈ ರಾಜಧಾನಿ ಬೆಂಗಳೂರಿನಿಂದ ಕೇವಲ 100 ಕಿಮೀ ದೂರದಲ್ಲಿ ಜಾತ್ಯಾತೀತ ವ್ಯವಸ್ಥೆಯನ್ನೇ ಅವಹೇಳನ ಮಾಡುವಂತೆ ಎರಡು ಬಡಾವಣೆಗಳು ತಲೆಯೆತ್ತುತ್ತಿವೆ. ಅವು ಬ್ರಾಹ್ಮಣ ಮತ್ತು ಲಿಂಗಾಯತರಿಗಾಗಿ ನಿರ್ಮಾಣವಾಗುತ್ತಿರುವ ಪ್ರತ್ಯೇಕ ಬಡಾವಣೆಗಳು.

ಖಾಸಗಿ ಸಂಸ್ಥೆಯೊಂದು ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದು, ಅದಕ್ಕೆ ಕೊಕ್ಕೆ ಹಾಕಿ Bangalore Metropolitan Region Development Authority ಜಾತಿ ಆಧಾರದಲ್ಲಿ ಬಡಾವಣೆ ನಿರ್ಮಿಸುವುದು ಸರ್ವತಾಸಾಧುವಲ್ಲ. ತಕ್ಷಣ ಈ ನಿರ್ಮಾಣ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕು ಎಂದು ಸರಕಾರಕ್ಕೆ ಸಲಹೆ ನೀಡಿದೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿ ಪ್ರದೇಶಕ್ಕೆ ಅಂಟಿಕೊಂಡಿರುವಂತೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಿಂದ 10 ಕಿಮೀ ದೂರದಲ್ಲಿ ಈ ಯೋಜನೆಗಳು ಕಾರ್ಯಗತವಾಗುತ್ತಿವೆ. ಈ ಟೌನ್ ಷಿಪ್ ಗಳ ಪ್ರಮೋಟರ್ಸ್ ಜಾತಿ ಆಧಾರಿತ ಬಡಾವಣೆಯನ್ನು ನಿರ್ಮಿಸುತ್ತಿರುವುದಾಗಿಯೂ ಅದಕ್ಕೆ ಆಯಾ ಜಾತಿಗಳವರು ಮಾತ್ರವೇ ಅರ್ಜಿ ಹಾಕಬೇಕು ಎಂದು ಮಾಧ್ಯಮಗಳಲ್ಲಿ ಜಾಹೀರಾತು ಹೊರಡಿಸಿದ್ದಾರೆ.

ಬೆಂಗಳೂರಿನ Sanathan Dharma Parirakshana Trust ಶಂಕರ ಅಗ್ರಹಾರ ಹೆಸರಿನಲ್ಲಿ ಬಡಾವಣೆ ನಿರ್ಮಿಸುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ ನಿವೃತ್ತ ಐಎಎಸ್ ಅಧಿಕಾರಿಗಳೂ ಸೇರಿದಂತೆ ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಸೇವೆ ಸಲ್ಲಿಸಿದ ಉನ್ನತಾಧಿಕಾರಿಗಳು ಈ ಟ್ರಸ್ಟಿನ ಆಡಳಿತ ಮಂಡಳಿಯಲ್ಲಿದ್ದಾರೆ.

ಶರಣಾರ್ಥಿ ಸಂಗಮ: Shri Renuka Basaveshwara Divya Dhama ಈ ಬಡಾವಣೆಯನ್ನು ನಿರ್ಮಿಸಿಕೊಡುತ್ತಿದೆ. ಮಾಜಿ ಮುಖ್ಯ ಕಾರ್ಯದರ್ಶಿ ಬಿಆರ್ ಪ್ರಭಾಕರ ಅವರು ಈ ಜಾಹೀರಾತುಗಳನ್ನು ಕಂಡು ಹೌಹಾರಿದ್ದಾರೆ. ತಕ್ಷಣ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ, ಯೋಜನೆ ಸ್ಥಗಿತಗೊಳಿಸುವಂತೆ ಆದೇಶಿಸಿ ಎಂದು ದುಂಬಾಲು ಬಿದ್ದಿದ್ದಾರೆ. Department of Town and Country Planning ಈ ಯೋಜನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. (ಕೃಪೆ: Bangalore Mirror)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Townships for Brahmins and Lingayats coming up at Bagepalli. Two layouts — one for Brahmins and the other for Lingayats — are coming up at Bagepalli in Chickballapur district. Organisations promoting the townships have carried out advertisements in newspapers and have invited applications from members of their communities to own residential sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X