ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಸಂಧಾನ ನಗೆ ನಾಟಕಕ್ಕೆ ತಪ್ಪದೇ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಏ.9: ಸಾಕ್ಷರತೆ ಮಹತ್ವದ ಸಾರುವ ಕನ್ನಡ ನಗೆ ನಾಟಕ 'ಶ್ರೀಕೃಷ್ಣ ಸಂಧಾನ' ಈಗ ಮತ್ತೊಮ್ಮೆ ನಿಮ್ಮೂರಿನ ರಂಗ ಮಂದಿರಕ್ಕೆ ಕಾಲಿಡುತ್ತಿದೆ. ಈಗಾಗಲೇ ಜನಪ್ರಿಯಗೊಂಡಿರುವ ಈ ನಾಟಕವನ್ನು ಅವಿರತ ಸಂಸ್ಥೆಯ ಟೆಕ್ಕಿಗಳು ಪ್ರಸ್ತುತ ಪಡಿಸುತ್ತಿದ್ದಾರೆ.

ಐಟಿ ಬಿಟಿ ಕ್ಷೇತ್ರ, ವೈದ್ಯಕೀಯ ರಂಗದಲ್ಲಿರುವ ಅನೇಕ ಸದಸ್ಯರು ಕೂಡಿ ಈ ನಾಟಕವನ್ನು ನಿಮ್ಮ ಮುಂದಿಡುತ್ತಿದ್ದೇವೆ. ರಿಹರ್ಸಲ್ ಮಾಡುವುದೇ ನಮಗೆ ಕಷ್ಟವಾಗಿತ್ತು. ವೀಕೆಂಡ್ ಗಳಲ್ಲಿ ಫುಲ್ ಅಭ್ಯಾಸದ ಜೊತೆಗೆ ಪ್ರತಿ ನಿತ್ಯ ವಿನೂತನವಾಗಿ ರಿಹರ್ಸಲ್ ಮಾಡಿದೆವು.

ಎಲ್ಲರೂ ಸ್ಮಾರ್ಟ್ ಫೋನ್ ಬಳಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ತಮ್ಮ ಡೈಲಾಗ್ಸ್ ಹೇಳುತ್ತಾ ಅಭಿನಯ ತಯಾರಿ ನಡೆಸಿದೆವು. ಈಗಾಗಲೇ ಜಾನಪದ ಲೋಕದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹುಮ್ಮಸ್ಸಿನಲ್ಲಿ ಮತ್ತೊಮ್ಮೆ ರಂಗವೇದಿಕೆ ಏರುತ್ತಿದ್ದೇವೆ. ಈ ನಾಟಕದಿಂದ ಸಂಗ್ರಹಿತವಾಗುವ ಹಣವನ್ನು ಅವಿರತ ನಡೆಸುತ್ತಿರುವ ಗ್ರಾಮೀಣ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವಿರತ ಸಂಸ್ಥೆ ಅಧ್ಯಕ್ಷ ಕೆ.ಟಿ ಸತೀಶ್ ಗೌಡ ಅವರು ಒನ್ ಇಂಡಿಯಾಗೆ ತಿಳಿಸಿದರು.

Srikrishna Sandhana Comedy Mythology Play

ನಾಟಕ : ಶ್ರೀ ಕೃಷ್ಣ ಸಂಧಾನ ( ಹಾಸ್ಯ ನಾಟಕ)
ರಚನೆ ಮತ್ತು ಸಂಗೀತ : ವಿ.ಎನ್. ಅಶ್ವತ್ಥ
ಮೂಲ ನಿರ್ದೇಶನ : ವಿ. ರಾಮ ರಾವ್ ಪುಟಾಣಿ
ತಂಡ : ಅವಿರತ ನಾಟಕ ಮಂಡಳಿ

ದಿನಾಂಕ : 14 ಏಪ್ರಿಲ್ 2013 ಭಾನುವಾರ ಮಧ್ಯಾಹ್ನ 3.30 ಮತ್ತು 6.30 ಕ್ಕೆ
ಸ್ಥಳ : ಕೆ.ಎಚ್. ಕಲಾಸೌಧ ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ, ಬೆಂಗಳೂರು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಸತೀಶ್ ಗೌಡ: 98800 86300

ಪ್ರಾಯೋಜಕರು : ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೆ ದೋಸೆ ( ನೆಟ್ಟಕಲ್ಲಪ್ಪ ವೃತ್ತ)

Disclaimer : ಈ ನಾಟಕ ಯಾರನ್ನು ಅವಹೇಳನ ಮಾಡಲು ಮಾಡಿರುವುದಲ್ಲ ಹಾಗೆಯೇ ಕೇವಲ ಹಾಸ್ಯಕ್ಕಾಗಿ ರೂಪುಗೊಂಡ ನಾಟಕವೂ ಅಲ್ಲ ಬದಲಾಗಿ ಅನಕ್ಷರತೆಯ ಪಿಡುಗಿನಿಂದ ಅ ಕಾರ ಹ ಕಾರ ಇಲ್ಲದೇ ಇರುವುದು ಒಂದಾದರೆ ಇದರ ನಡುವೆ ಕಲಾವಿದರ ನಡುವೆ ವಯಕ್ತಿಕ ದ್ವೇಷ ಇದ್ದರೆ ಮುಗಿದೇ ಹೋಯಿತು ಎಂತಹ ಗಂಭೀರ ಸನ್ನಿವೇಶಗಳಿದ್ದರು ಕೂಡ ಹೇಗೆ ಹಾಸ್ಯದ ತಿರುವು ಪಡೆಯುತ್ತದೆ ಎಂಬುದನ್ನು ಪ್ರತಿಬಿಂಬಿಸುವ ಈ ನಾಟಕದ ಗೆಜ್ಜೆ ಪೂಜೆ ಅಥವ ರಂಗ ತಾಲೀಮು ಅಥವ ಫೈನಲ್ ರಿಹರ್ಸಲ್ ಸಾಕ್ಷರತೆಯ ಅನಿವಾರ್ಯತೆಯನ್ನು ಎತ್ತಿ ತೋರುತ್ತದೆ.

ಶ್ರೀ ಕೃಷ್ಣ ಸಂಧಾನ ನಾಟಕದ ಮೂಲಕ ಅಕ್ಷರ ಜ್ಞಾನ ಬೇಕೆ ಬೇಕು ಅನಕ್ಷರತೆಯನ್ನು ಹೊಡೆದೋಡಿಸಲೇ ಬೇಕು ಎಂಬ ನಮ್ಮ ಘನ ಸರ್ಕಾರದ ನೀತಿಗೆ ಸ್ಪಂದಿಸುವ ಸಲುವಾಗಿ ಅವಿರತ ತಂಡದ ಕಾರ್ಯಕರ್ತರೇ ಬಣ್ಣ ಹಚ್ಚಿ ವೇದಿಕೆ ಮೇಲೆ ನಿಮ್ಮ ಮುಂದೆ ಬರುತ್ತಿದ್ದಾರೆ . ಪಾತ್ರಧಾರಿಗಳೆಲ್ಲರು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವವರು ಹಾಗು ವೈದ್ಯ ವೃತ್ತಿಯಲ್ಲಿ ಇರುವವರು.

English summary
Srikrishna Sandhana Comedy Mythology Play enacted techies from by Aviratha Team will be staged on Apr 14 at KH Kala soudha, SriRamanjaneya Gudda Hanumanthanagar, Bangalore. The amount raised from this play will be utilised for Notebook drive free distribution of books to rural children Aviratah President KT Sateesh Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X