ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಜೆಪಿ ತೆಂಗಿನಕಾಯಿ, ಬಿಎಸ್‌ಆರ್ ಫ್ಯಾನ್ ಚಿಹ್ನೆ ಕಾಯಂ

By Srinath
|
Google Oneindia Kannada News

Karnataka Assembly Election - BSR Congress gets fan while KJP gets coconut symbol CEC
ಬೆಂಗಳೂರು‌, ಏ.9: ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ತ ಚುನಾವಣೆ ಆಯೋಗವು ಬಿಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ ತೆಂಗಿನಕಾಯಿ ಚಿಹ್ನೆ ಮತ್ತು ಬಿ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷಕ್ಕೆ ಸೀಲಿಂಗ್‌ ಫ್ಯಾನ್‌ ಚಿಹ್ನೆಯನ್ನು ಸೋಮವಾರ ದಯಪಾಲಿಸಿದೆ.

ಇದರಿಂದ ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷಕ್ಕೆ ಕಾಡುತ್ತಿದ್ದ ಆತಂಕ ದೂರವಾಗಿದ್ದು, ಈ ಚಿಹ್ನೆಗಳನ್ನು ಧಾರಾಳವಾಗಿ ಬಳಸಬಹುದಾಗಿದೆ. ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷದ ಕೇಂದ್ರ ಸ್ಥಾನವಾದ ಬಳ್ಳಾರಿಯಲ್ಲಿ ಬಿರುಬಿಸಿಲು ನೆತ್ತಿಗೇರಿರುವಾಗ ಚುನಾವಣೆ ಪ್ರಚಾರಕ್ಕಾಗಿ ಆ ಪಕ್ಷದ ಅಭ್ಯರ್ಥಿಗಳು ಫ್ಯಾನ್‌ ಚಿಹ್ನೆಯನ್ನು ಈ ಬೇಸಿಗೆಯಲ್ಲಿ ನಿರಂತರವಾಗಿ ತಿರುಗಿಸಬಹುದಾಗಿದೆ.

ಮತದಾನ ಅವಧಿ ವಿಸ್ತರಣೆಗೆ ಒಕ್ಕೊರಲ ಮೊರೆ:
ಮತದಾನದ ಅವಧಿಯನ್ನು ಒಂದು ಗಂಟೆ ಕಾಲ ಮೊಟಕುಗೊಳಿಸಿರುವುದರ ವಿರುದ್ಧ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಗರಂ ಆಗಿದ್ದು, ರಾಜ್ಯದಲ್ಲಿ ಬೇಸಿಗೆ ಕಾಲವಿದೆ. ಹಾಗಾಗಿ ಮತದಾನಕ್ಕೆ ಹೆಚ್ಚಿನ ಕಾಲಾವಕಾಶ ಕಲ್ಪಿಸಿ, ಮತದಾನಕ್ಕೆ ಪ್ರೋತ್ಸಾಹಿಸುವ ಬದಲು ಅವಧಿಯನ್ನು ಮೊಟಕುಗೊಳಿಸಿ ಮತದಾರರನ್ನು ನಿರುತ್ಸಾಹಿಗಳನ್ನಾಗಿ ಮಾಡುತ್ತಿದೆ ಎಂದು ಅಲವತ್ತುಕೊಂಡಿವೆ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಯ ಮತದಾನದ ಅವಧಿ ವಿಸ್ತರಿಸಲು ಚುನಾವಣಾ ಆಯೋಗಕ್ಕೆ ಒಕ್ಕೊರಲ ಮನವಿ ಮಾಡಿವೆ.

ರಾಜ್ಯದಲ್ಲಿ ಚುನಾವಣಾ ಪೂರ್ವಸಿದ್ಧತೆಗಳ ಪರಿಶೀಲನೆಗಾಗಿ ಆಗಮಿಸಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿಎಸ್ ಸಂಪತ್‌ ಅವರನ್ನು ಸೋಮವಾರ ಭೇಟಿ ಮಾಡಿದ ರಾಜಕೀಯ ಪಕ್ಷಗಳ ನಿಯೋಗವು, ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಭಾಗಗಳಲ್ಲಿ ಮಧ್ಯಾಹ್ನ ಸುಡು ಬಿಸಿಲು ಇರುವುರಿಂದ ಮತದಾರರು ಮತಗಟ್ಟೆಗಳತ್ತ ಬರುವುದು ಕಷ್ಟ. ಹೀಗಾಗಿ ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಸಮಯ ಕೊಟ್ಟರೆ ಮತದಾನದಲ್ಲಿ ಪಾಲ್ಗೊಳ್ಳಲು ಜನರಿಗೆ ಅನುಕೂಲವಾಗುತ್ತದೆ. ಹೀಗಾಗಿ, ಬೆಳಗ್ಗೆ 6 ರಿಂದ ಸಂಜೆ 6 ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದವು.

ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಲೋಪ-ದೋಷ ಹಿನ್ನೆಲೆಯಲ್ಲಿ ತಿರಸ್ಕೃತವಾದರೆ ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬುದರ ಮಾಹಿತಿ ಅರ್ಜಿದಾರನಿಗೆ ನೀಡಬೇಕು. ಸಂಪೂರ್ಣ ವಿವರ ಆಯೋಗದ ವೆಬ್‌ ಸೈಟ್‌ ನಲ್ಲಿ ದೊರೆಯುವಂತಾಗಬೇಕು.

ಹಣ, ಮದ್ಯ, ಉಡುಗೊರೆ ಹಂಚಿಕೆ, ಸಾಮೂಹಿಕ ಭೋಜನದಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಭಯದ ವಾತಾವರಣ ಮೂಡಿದ್ದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳು ಮನವಿ ಮಾಡಿದವು.

ಮಂಗಳವಾರ ಡಿಸಿ, ಎಸ್‌ಪಿ ಸಭೆ
ಸಿಇಸಿ ಸಂಪತ್‌ ಅವರು ಆಯುಕ್ತರಾದ ಎಚ್‌ಎಸ್ ಬ್ರಹ್ಮ, ಡಾ. ಸೈಯದ್‌ ಸಸೀಂ ಅಹಮದ್‌ ಜೈದಿ ತಂಡವು ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಗೃಹ, ಕಂದಾಯ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಹಾಗೂ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ ನೀಡಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Karnataka Assembly Election - CEC on Monday gave the symbols to BSR Congress (fan) and KJP (coconut) symbol for upcoming Assembly Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X