ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ಸ್ಮಾರ್ಟ್ ಚುನಾವಣೆ !

|
Google Oneindia Kannada News

Dakshina Kannada
ಮಂಗಳೂರು, ಏ.8 : ಇಂದಿನ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಚುನಾವಣೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಸ್ಮಾರ್ಟ್ ಪೋನ್ ಮೂಲಕ ಚುನಾವಣಾ ವರದಿಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಪಾತ್ರವಾಗಿದೆ.

ಭಾನುವಾರ ಈ ಯೋಜನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಹರ್ಷಾಗುಪ್ತಾ, ಮೊಬೈಲ್ಸ್ ಇನ್ ಎಲೆಕ್ಷನ್ ಮ್ಯಾನೇಜ್ ಮೆಂಟ್ ಎನ್ನುವ ಅಪ್ಲಿಕೇಶನ್ ಪ್ರಾರಂಭಿಸಿ ಪ್ರತಿ ತಾಲೂಕಿನ ಚುನಾವಣಾ ಅಧಿಕಾರಿಗಳಿಗೆ ಸ್ಮಾರ್ಟ್ ಫೋನ್ ವಿತರಿಸಲಾಗುತ್ತಿದೆ. ತಾಲೂಕಿನ ಪ್ರತಿ ಚುನಾವಣಾ ವರದಿಗಳನ್ನು ಅಧಿಕಾರಿಗಳು ಫೋನ್ ಮೂಲಕ ತ್ವರಿತವಾಗಿ ರವಾನಿಸಬಹುದು ಎಂದರು.

ತಾಲೂಕು ವ್ಯಾಪ್ತಿಯ ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಇಂತಹ ಅಪ್ಲಿಕೇಶನ್ ಹೊಂದಿರುವ 24 ಸೆಲ್ ಪೋನ್ ಗಳನ್ನು ವಿತರಣೆ ಮಾಡಲಾಗಿದೆ. ಈ ಅಪ್ಲಿಕೇಶ್ ಗೆ ಭೇಟಿ ನೀಡಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ದಿನದ ವರದಿ, ನೀತಿ ಸಂಹಿತಿ ಉಲ್ಲಂಘನೆ ಪ್ರಕರಣಗಳು ಮುಂತಾದ ಚುನಾವಣಾ ವಿವರಗಳನ್ನು ಅಪ್ ಲೋಡ್ ಮಾಡಬಹುದಾಗಿದೆ ಎಂದು ತಿಳಿಸಿದರು.

ಚುನಾವಣಾ ಸಮಯದಲ್ಲಿ ತಾಲೂಕಿನ ಮಾಹಿತಿಗಳನ್ನು ಪಡೆದುಕೊಳ್ಳುವುದು ವಿಳಂಬವಾಗುತ್ತಿತ್ತು. ತ್ವರಿತವಾದ ಮಾಹಿತಿ ವಿನಿಮಯಕ್ಕಾಗಿ ಇಂತಹ ನೂತನ ಪ್ರಯತ್ನ ಮಾಡಲಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳ ಮಾಹಿತಿ ತಕ್ಷಣ ಜಿಲ್ಲಾಡಳಿತಕ್ಕೆ ತಲುಪಲಿದೆ ಎಂದು ಹೇಳಿದರು.

ಈ ಫೋನ್ ಗಳು ಅಧಿಕಾರಿಗಳಿಗೆ ಅತ್ಯಂತ ಅನುಕೂಲಕರವಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳು ನಡೆದಾಗಿ ಫೋಟೋ ಮತ್ತು ವಿಡಿಯೋಗಳನ್ನು ಸಂಗ್ರಹಿಸಲು ನೆರವಾಗಲಿದೆ. ಈಗಾಗಲೇ 160 ಫೋನ್ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಭವಿಷ್ಯದ ಯೋಜನೆ : ಈ ಫೋನ್ ಗಳನ್ನು ಚುನಾವಣೆಯ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ದಿನನಿತ್ಯದ ವರದಿಗಳನ್ನು ಜಿಲ್ಲಾಡಳಿತಕ್ಕೆ ನೀಡಲು ಉಪಯೋಗಿಸಬಹುದು.

ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಗಳಲ್ಲಿ ಸ್ಮಾರ್ಟ್ ಪೋನ್ ಬಳಸಿ ಆಡಳಿತವನ್ನು ಪಾರದರ್ಶಕಗೊಳಿಸಲು ಆಲೋಚಿಸುತ್ತಿದೆ ಎಂದರು. ಅಂಗನವಾಡಿ ಸೂಪರ್ ವೈಸರ್ ಗಳು, ಬ್ಲಾಕ್ ಶಿಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ತಮ್ಮ ದಿನನಿತ್ಯದ ಚಟುವಟೆಕೆಗಳನ್ನು ವರದಿ ಮಾಡಲು ಫೋನ್ ಬಳಸುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಿದರು.

ಈ ಫೋನ್ ಗಳ ಉಸ್ತುವಾರಿ, ವರದಿಗಳ ಸಂಗ್ರಹಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅತ್ಯಾಧುನಿಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಅಭ್ಯರ್ಥಿಗಳು ಟಿವಿ, ರೆಡಿಯೋ ಮತ್ತು ಮುದ್ರಣ ಮಾಧ್ಯಮಗಳಲ್ಲಿ ನೀಡುವ ಜಾಹೀರಾತಿನ ವಿವಿರಗಳು ದಾಖಲಾಗಲಿವೆ ಎಂದರು. (ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರಗಳ ಪರಿಚಯ )

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
The Dakshina Kannada district administration has found a new way to monitor election process in the district. On Sunday, April, 7 Deputy Commissioner and District Election Officer Harsha Gupta said, By introducing smart phones for the first time in the State, the district administration is all set to make election reporting procedure easy for the supervising officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X