ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯೊಬ್ಬರೇ ದೇಶದ ಏಕೈಕ ಪ್ರಾಮಾಣಿಕ ರಾಜಕಾರಣಿ

By Srinath
|
Google Oneindia Kannada News

ಗಾಂಧಿನಗರ, ಏ.8: ಗುಜರಾತಿನ ಬಿಜೆಪಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮತ್ತೊಂದು ಹೊಗಳಿಕೆ/ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನರೇಂದ್ರ ಮೋದಿಯನ್ನು ಭ್ರಷ್ಟರನ್ನಾಗಿಸಲು ಸಾಧ್ಯವಿಲ್ಲ. ಹೇಳಬೇಕು ಅಂದರೆ ಅವರು ಭಾರತದ ಏಕೈಕ ಪ್ರಾಮಾಣಿಕ ರಾಜಕಾರಣಿ ಮೋದಿ ಎಂಬ ಜಾಗತಿಕ ಮಟ್ಟದ ಮನ್ನಣೆಗೆ ಪಾತ್ರರಾಗಿದ್ದಾರೆ.

ಖುದ್ದು ಅಮೆರಿಕದಿಂದಲೇ ಈ ಸತ್ಯ ಹೊರಬಿದ್ದಿದೆ. ಅಮೆರಿಕದ ಗುಪ್ತ ಸತ್ಯಗಳನ್ನು ಜಗತ್ತಿನೆದುರು ನಗ್ನಗೊಳಿಸಿದ ವಿಕಿಲೀಕ್ಸ್ ಮತ್ತು ಅಸಾಂಜೆ ಗೊತ್ತಲ್ಲಾ? ಅವರೇ ಮೋದಿ ಕುರಿತಾದ ಈ ಸತ್ಯವನ್ನೂ ಹೊರಹಾಕಿದ್ದಾರೆ.

Narendra Modi Incorruptible lone honest Indian politician WikiLeaks

ಏನಪಾ ಅಂದರೆ ಮೋದಿಗೆ ವೀಸಾ ಕೊಡೋದಿಲ್ಲ ಎಂದು ಅಮೆರಿಕ ಮೊಂಡುವಾದ ಮಾಡುತ್ತಾ ಬಂದಿದೆ. ಈ ವಿಷಯದಲ್ಲಿ ಮೋದಿಗೆ ಆಮಿಷವೊಡ್ಡಲು ಅಮೆರಿಕದ ರಾಯಭಾರ ಮಟ್ಟದ ಅಧಿಕಾರಿಯೊಬ್ಬರು ಯತ್ನಿಸಿ ಪಡಿಪಾಟಿಲು ಬಿದ್ದಿದ್ದಾರೆ ಎಂದು ವಿಕಿಲೀಕ್ಸ್ ಕೇಬಲ್ಸ್ ತಿಳಿಸಿದೆ.

2006ರ ನವೆಂಬರ್ 6: ಮುಂಬೈನ ಕಾನ್ಸುಲ್ ಜನರಲ್ ಮೈಖೇಲ್ ಎಸ್ ಓವೆನ್ ಅವರು ಅಮೆರಿಕದ ಶ್ವೇತಭವನಕ್ಕೆ ರಹಸ್ಯ ಸಂದೇಶವೊಂದನ್ನು ಕಳಿಸಿದ್ದರು. ಮೋದಿ ಅವರು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಮಾನವ ಹಕ್ಕುಗಳ ವಿಷಯ ಬಂದಾಗ ಆತನೊಂದಿಗೆ ನೇರವಾಗಿ ಭಾಗಿಯಾಗುವ ಅಗತ್ಯವಿದೆ.

ಮೋದಿಯ ಬಗ್ಗೆ ಮತ್ತಷ್ಟು ಬರೆಯುತ್ತಾ ಓವೆನ್ ಹೀಗೆ ಹೇಳಿದ್ದಾರೆ: ತಾನು ಭ್ರಷ್ಟಚಾರಿ ಅಲ್ಲ, ಪರಿಣಾಮಕಾರಿ ಆಡಳಿತಗಾರ ಎಂಬುದನ್ನು ಮೋದಿ ಯಶಸ್ವಿಯಾಗಿ ನಿರೂಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ. ಆತನಲ್ಲಿ ಅಳವಾದ ವಾಣಿಜ್ಯ ಸಂಸ್ಕೃತಿ-ನೀತಿ ಬೇರೂರಿದೆ. ಬಹುಸಂಖ್ಯಾತ ಹಿಂದೂಗಳ ಹಿತಾಸಕ್ತಿಗಳನ್ನು ಕಾಯುವ ಕಾನೂನು ಸುವ್ಯವಸ್ಥೆ ಪರಿಪಾಲಕ ರಾಜಕಾರಣಿ ಆತ. ಪ್ರಗತಿಪರ ಗುಜರಾತಿನ ಮುಖ್ಯಮಂತ್ರಿ ಮೋದಿ ಪ್ರಜ್ಞಾವಂತರು, ಬಾಯಿಬಡುಕ ಅಲ್ಲ.

ಈ ಗುಪ್ತ ಕೇಬಲ್ ಸಂದೇಶವನ್ನು ಸ್ವತಃ ನರೇಂದ್ರ ಮೋದಿಯೇ ಬಹಿರಂಗ ಮಾಡಿದ್ದಾರೆ. ಬಿಜೆಪಿಯ ವಿಕಿಲೀಕ್ಸ್ ಸಂದೇಶವನ್ನು ಉಲ್ಲೇಖಿಸಿ, ಮೋದಿಯನ್ನು ಕೊಂಡಾಡಿದೆ.

English summary
Gujarat CM Narendra Modi lone honest Indian politician WikiLeaks
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X